ಬೆಳಕಿನ ಪ್ರದರ್ಶನದ ಮೂಲಕ 11 ವಾರಗಳ ಲಾಕ್‌ಡೌನ್ ತೆರವು ಸಂಭ್ರಮಿಸಿದ 'ವೀರರ ನಗರ' - ವುಹಾನ್​ ಲಾಕ್‌ಡೌನ್ ತೆರವು ಸುದ್ದಿ

🎬 Watch Now: Feature Video

thumbnail

By

Published : Apr 8, 2020, 4:04 PM IST

11 ವಾರಗಳ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ವುಹಾನ್ ನಿವಾಸಿಗಳು ಎಂದಿನಂತೆ ಬೀದಿಗಿಳಿಯುತ್ತಿದ್ದಾರೆ. ಆ ಬಳಿಕ ಯಾವುದೇ ಹೊಸ ಕೋವಿಡ್​ -19 ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭವನ್ನು ಇಲ್ಲಿನ ಜನತೆ ವಿಶೇಷವಾಗಿ ತೋರಿಸಿಕೊಂಡಿದ್ದಾರೆ. ಇಲ್ಲಿನ ಪ್ರಮುಖ ನದಿಯಾದ ಯಾಂಗ್ಝಿ ನದಿಯ ಎರಡೂ ಬದಿಯಲ್ಲಿ ಬೆಳಕಿನ ಪ್ರದರ್ಶನ ಇಲ್ಲಿನ ಜನರ ಗಮನ ಸೆಳೆಯಿತು. ಗಗನಚುಂಬಿ ಕಟ್ಟಡಗಳಲ್ಲಿ ಆರೋಗ್ಯ ಕಾರ್ಯಕರ್ತರು ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿಮೇಟೆಡ್ ಚಿತ್ರಗಳನ್ನು ಪ್ರದರ್ಶಿಸಲಾಯ್ತು. ಜೊತೆಗೆ ವುಹಾನ್​ ನಗರಕ್ಕೆ 'ವೀರರ ನಗರ(heroic city)' ಎಂಬ ಅಕ್ಷರಗಳನ್ನು ಕಟ್ಟಡಗಳ ಮೇಲೆ ತೋರಿಸಲಾಯ್ತು. ಈ ಶೀರ್ಷಿಕೆಯನ್ನು ವುಹಾನ್ ನಗರಕ್ಕೆ ಚೀನಾ ಅಧ್ಯಕ್ಷ ಮತ್ತು ಕಮ್ಯುನಿಸ್ಟ್ ಪಕ್ಷದ ನಾಯಕ ಕ್ಸಿ ಜಿನ್‌ಪಿಂಗ್ ನೀಡಿದ್ದಾರಂತೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.