ವೈಷ್ಣೋದೇವಿ ಸನ್ನಿಧಿಯಲ್ಲಿ ಶಾರುಖ್ ಖಾನ್: ಪಠಾಣ್, ಜವಾನ್ ಬಳಿಕ 'ಡಂಕಿ'ಗಾಗಿ ದೇಗುಲಕ್ಕೆ ಬಂದ ಸ್ಟಾರ್ - ಡಂಕಿ
🎬 Watch Now: Feature Video
Published : Dec 12, 2023, 12:09 PM IST
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಡಂಕಿ ಸಿನಿಮಾ ಇದೇ ಡಿಸೆಂಬರ್ 21 ರಂದು ತೆರೆಗಪ್ಪಳಿಸಲಿದೆ. ಸಿನಿಮಾ ಪ್ರಚಾರ ಜೋರಾಗೇ ನಡೆಯುತ್ತಿದೆ. ಚಿತ್ರ ತೆರೆಗಪ್ಪಳಿಸೋ ಮುನ್ನ ನಾಯಕ ನಟ ಶಾರುಖ್ ಖಾನ್ ಪವಿತ್ರ ಕ್ಷೇತ್ರಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ.
ಇಂದು ಬೆಳಗ್ಗೆ ಜಮ್ಮುವಿನ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ ಎಸ್ಆರ್ಕೆ ಕಾಣಿಸಿಕೊಂಡರು. 2023ರಲ್ಲಿ ಪವಿತ್ರ ಕ್ಷೇತ್ರಕ್ಕೆ ಬಾಲಿವುಡ್ ನಟ ಮೂರನೇ ಬಾರಿ ಭೇಟಿ ಕೊಟ್ಟಿದ್ದಾರೆ. ಈ ವರ್ಷದ ಬ್ಲಾಕ್ಬಸ್ಟರ್ ಚಿತ್ರಗಳಾದ ಪಠಾಣ್ ಮತ್ತು ಜವಾನ್ ಬಿಡುಗಡೆಗೂ ಮುನ್ನ ಜನಪ್ರಿಯ ನಟ ಈ ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದರು. ತಮ್ಮ ಸಿನಿಮಾಗಳ ಬಿಡುಗಡೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ತಮ್ಮ ಅಂಗರಕ್ಷಕರೊಂದಿಗೆ ಜಮ್ಮುವಿನ ಪವಿತ್ರ ದೇಗುಲದಲ್ಲಿ ನಟ ಅಡ್ಡಾಡುತ್ತಿರುವುದನ್ನು ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಾಣಬಹುದು. ನಟನೊಂದಿಗೆ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ಚೆಲುವಿಗೆ ಮನಸೋಲದವರಾರು? ಚೆಲುವಿನ ಗಣಿಯ ಆಕರ್ಷಕ ಚಿತ್ರಗಳಿಲ್ಲಿವೆ
ಡಂಕಿ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ನಟಿಸಿದ್ದಾರೆ. ಸಿನಿಮಾ ಇದೇ ಡಿಸೆಂಬರ್ 21ರಂದು ತೆರೆಗಪ್ಪಳಿಸಲಿದೆ. ಇದೇ ವರ್ಷ ತೆರೆಕಂಡ ಜವಾನ್, ಪಠಾಣ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದು, 'ಡಂಕಿ' ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.