ETV Bharat / entertainment

'ಕೆಜಿಎಫ್​​​ 2' ಯಶಸ್ಸಿನ ನಂತರ ಬಂದ 'ಸಲಾರ್'​​ ರಿಸಲ್ಟ್​ನಿಂದ ಸ್ವಲ್ಪ ನಿರಾಶೆಯಾಯ್ತು​​​​: ಪ್ರಶಾಂತ್​ ನೀಲ್​​ - PRASHANTH NEEL

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಮುಖ್ಯಭೂಮಿಕೆಯ 'ಸಲಾರ್'​​ ತೆರೆಕಂಡು ಒಂದು ವರ್ಷ ಪೂರ್ಣಗೊಂಡಿದ್ದು, ಚಿತ್ರದ ಹಿಂದಿರುವ ಮಾಸ್ಟರ್ ಮೈಂಡ್​ ಪ್ರಶಾಂತ್​ ನೀಲ್​​ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಜೊತೆಗೆ, ಸಲಾರ್​ 2 ಬಗ್ಗೆಯೂ ಮಾತನಾಡಿದ್ದಾರೆ.

Prabhas, Prashanth Neel
ಪ್ರಭಾಸ್​, ಪ್ರಶಾಂತ್​ ನೀಲ್​​ (Photo: ETV Bharat)
author img

By ETV Bharat Entertainment Team

Published : 4 hours ago

'ಸಲಾರ್',​ 'ಕೆಜಿಎಫ್​ ಚಾಪ್ಟರ್​ 2' ಸಿನಿಮಾಗಳ ಮೂಲಕ ಪ್ರಶಾಂತ್​​ ನೀಲ್​​​ ಇಂಡಿಯನ್​ ಸ್ಟಾರ್​ ನಿರ್ದೇಶಕರಾಗಿ ಹೊರಹೊಮ್ಮಿದರು. 'ಕೆಜಿಎಫ್​ ಚಾಪ್ಟರ್​ 2', 'ಸಲಾರ್​​ 1' ಬಾಕ್ಸ್​​ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಭಾರತೀಯ ಚಲನಚಿತ್ರೋದ್ಯಮದ ಮೇಲೂ ಗಮನಾರ್ಹ ಪ್ರಭಾವ ಬೀರಿತು.

'ಕೆಜಿಎಫ್​ 2' ಬಿಡುಗಡೆಯಾಗಿ ಒಂದು ವರ್ಷದ ನಂತರ ತೆರೆಗಪ್ಪಳಿಸಿದ 'ಸಲಾರ್​ 1' ನಿರ್ದೇಶಕ ನೀಲ್​ ಅವರ ಪಾಪ್ಯುಲಾರಿಟಿಯನ್ನು ದುಪ್ಪಟ್ಟುಗೊಳಿಸಿತು. ಇದೀಗ ನಿರ್ದೇಶಕರು 2023ರ ಡಿಸೆಂಬರ್​​ನಲ್ಲಿ ಬಿಡುಗಡೆಯಾದ 'ಸಲಾರ್‌' ಬಾಕ್ಸ್ ಆಫೀಸ್ ಪರ್ಫಾಮೆನ್ಸ್​​​ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಯಶ್ ನಟನೆಯ ಕೆಜಿಎಫ್​​​ 2ನ ಅಭೂತಪೂರ್ವ ಯಶಸ್ಸಿನ ನಂತರ ಬಂದ ಈ ಸಿನಿಮಾದ ರಿಸಲ್ಟ್​ನಿಂದಾಗಿ ಕೊಂಚ ಡಿಸಪಾಯಿಂಟ್ ಆದೆ ಎಂದರು.

ಕೆಜಿಎಫ್ ಅಧ್ಯಾಯ 2ರಿಂದ ತಾನು ಕಂಡ ಅಭೂತಪೂರ್ವ ಯಶಸ್ಸಿಗೆ ಹೋಲಿಸಿದರೆ, ಸಲಾರ್‌ನಿಂದ ಏಕೆ ಅಸಮಾಧಾನಗೊಂಡೆ ಎಂಬುದನ್ನು ಬಹಿರಂಗಪಡಿಸಿದರು. ಬಹುಶಃ ಕೆಜಿಎಫ್​ 2ರ ಛಾಯೆ ಇತ್ತು. ಸಲಾರ್​​​ನಿಂದ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದೆ ಎಂದು ತಿಳಿಸಿದರು. ಜೊತೆಗೆ, ಸಲಾರ್‌ ಸೀಕ್ವೆಲ್​​ ಮೊದಲ ಭಾಗದಂತೆ ಇರುವುದಿಲ್ಲ ಎಂದು ತಿಳಿಸಿದರು. ಅತ್ಯುತ್ತಮವಾದುದ್ದನ್ನೇ ಪ್ರೇಕ್ಷಕರಿಗೆ ನೀಡುವುದಾಗಿ ಭರವಸೆ ನೀಡಿದರು.

ಸಲಾರ್ 2ಗಾಗಿ ತಾವು ಬರೆದಿರುವ ಕಥೆ ಈವರೆಗಿನ ತಮ್ಮ ಅತ್ಯುತ್ತಮ ಕಥೆಗಳಲ್ಲಿ ಒಂದೆಂದರು. ''ನಾನು ಈ ಸಿನಿಮಾಗೆ ನೀಡಿರುವ ಬರವಣಿಗೆ/ಕಥೆ ಬಹುಶಃ ನನ್ನ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿದೆ. ನಾನು ಊಹಿಸಿರುವುದಕ್ಕಿಂತಲೂ ಮತ್ತು ಪ್ರೇಕ್ಷಕರು ಊಹಿಸುವುದಕ್ಕಿಂತಲೂ ಹೆಚ್ಚಿನದನ್ನು ಕೊಡುತ್ತಿದ್ದೇನೆ. ಈ ಬಗ್ಗೆ ನಾನು ಬಹಳ ಆತ್ಮವಿಶ್ವಾಸ ಹೊಂದಿದ್ದೇನೆ. ನನ್ನ ಜೀವನದಲ್ಲಿ ಕೆಲವೇ ಕೆಲ ವಿಷಯಗಳ ಬಗ್ಗೆ ನಾನು ವಿಶ್ವಾಸ ಹೊಂದಿದ್ದೇನೆ. ಸಲಾರ್ 2 ನಿಸ್ಸಂದೇಹವಾಗಿ ನನ್ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಿಷಬ್ ಶೆಟ್ರ ಬಹುಸಮಯದ ಕನಸು ನನಸು: ಕೆರಾಡಿ ಗ್ರಾಮಸ್ಥರು ಸಾಥ್ - ಡಿವೈನ್​ ಸ್ಟಾರ್​ ಮನದಾಳ ಇಲ್ಲಿದೆ

ತಮ್ಮ ಮುಂದಿನ ಸಿನಿಮಾದ ಅಪ್ಡೇಟ್ ಅನ್ನೂ ಕೊಟ್ಟಿದ್ದಾರೆ. ಸಲಾರ್: ಭಾಗ 2-ಶೌರ್ಯಾಂಗ ಪರ್ವಂ ಈಗಾಗಲೇ ಸೆಟ್ಟೇರಿದೆ. ಆ್ಯಕ್ಷನ್​ ಡ್ರಾಮಾ ದೇವ ಮತ್ತು ವರದ ಅವರ ಸುತ್ತ ಸುತ್ತುತ್ತದೆ. ಚಿತ್ರ ಹೈ ಡ್ರಾಮಾ ಮತ್ತು ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ತರುಣ್​ ಸೋನಾಲ್​ To ಕೃತಿ ಕರಬಂದ, ನಾಗಚೈತನ್ಯ: 2024ರಲ್ಲಿ ಹಸೆಮಣೆಯೇರಿದ ಸೆಲೆಬ್ರಿಟಿ ಜೋಡಿಗಳು

ಸಲಾರ್​ ಹೊರತುಪಡಿಸಿ, ಕೆಜಿಎಫ್ ಚಾಪ್ಟರ್ 3 ಚಿತ್ರವನ್ನೂ ನೀಲ್​​ ಹೊಂದಿದ್ದಾರೆ. ಪ್ರಶಾಂತ್ ನೀಲ್ ಮತ್ತೆ ರಾಕಿಂಗ್​ ಸ್ಟಾರ್ ಜೊತೆ ಕೆಲಸ ಮಾಡಲಿದ್ದಾರೆ. ಈ ಆ್ಯಕ್ಷನ್ ಡ್ರಾಮಾದಲ್ಲಿ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ಅರ್ಚನಾ ಜೋಯಿಸ್, ರಾಮಚಂದ್ರ ರಾಜು, ಪ್ರಕಾಶ್ ರಾಜ್, ರವೀನಾ ಟಂಡನ್, ಈಶ್ವರಿ ರಾವ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.