Watch.. ಕೃಷ್ಣ ಭಟ್ - ವೇದಾಂತ್ ಸರ್ದಾ ಮದುವೆಯಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು - Actors Hrithik Roshan
🎬 Watch Now: Feature Video
ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಅವರ ಪುತ್ರಿ ಕೃಷ್ಣ ಭಟ್ ಅವರು ವೇದಾಂತ್ ಸರ್ದಾ ಅವರೊಂದಿಗೆ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಮುಂಬೈನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದ್ದು ಸಿನಿ ತಾರೆಯರು ಆಗಮಿಸಿದ್ದರು.
ನಟರಾದ ಹೃತಿಕ್ ರೋಷನ್, ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್, ಆಮೀರ್ ಖಾನ್, ಅನಿಲ್ ಕಪೂರ್, ಅನುಪಮ್ ಖೇರ್ ಸೇರಿದಂತೆ ಇತರ ನಟ, ನಟಿಯರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಾಗೆಯೇ, ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಬಾಬಿ ಡಿಯೋಲ್, ನಟಿ ಸನ್ನಿ ಲಿಯೋನ್ , ಡೇನಿಯಲ್ ವೆಬರ್ ಮತ್ತು ಅವರ ಮಕ್ಕಳು, ಸಂದೀಪ ಧರ್, ಅವಿಕಾ ಗೋರ್, ಮಹೇಶ್ ಭಟ್, ಅಫ್ತಾಬ್ ಶಿವದಾಸನಿ, ಪೂಜಾ ಭಟ್, ಸಂದೀಪ ಧರ್ ಸೇರಿದಂತೆ ಹಲವು ಬಿಟೌನ್ ಸೆಲೆಬ್ರಿಟಿಗಳು ಭಾಗವಹಿಸಿ ನವ ವಿವಾಹಿತರನ್ನು ಆಶೀರ್ವದಿಸಿದರು.
ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ಭಟ್ ವಂಶಸ್ಥರು ಕೃಷ್ಣ ಮತ್ತು ವೇದಾಂತ್ ಅವರಿಗಾಗಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ವೇಳೆ ವಿಕ್ರಮ್ ಭಟ್ ಮಗಳ ಜೊತೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದರು.
ಇದನ್ನೂ ಓದಿ : ಕೃಷ್ಣ ಭಟ್ - ವೇದಾಂತ್ ಸರ್ದಾ ಮದುವೆ ಆರತಕ್ಷತೆಯಲ್ಲಿ ಬಿ - ಟೌನ್ ಸೆಲೆಬ್ರಿಟಿಗಳು!