Xiaomi Pad 7 Launch date in India: Xiaomi Pad 7 ಮತ್ತು Xiaomi Pad 7 Pro ಅನ್ನು ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಯಿತು. ಈಗ ಕಂಪನಿಯು Xiaomi Pad 7 ಅನ್ನು ಭಾರತದಲ್ಲಿಯೂ ಬಿಡುಗಡೆ ಮಾಡಲು ಸಜ್ಜಾಗಿದೆ. Xiaomi ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಒಂದು ಲೈವ್ ಮೈಕ್ರೋಸೈಟ್ ರಿಲೀಸ್ ಮಾಡಿದೆ. ಈ ಮೂಲಕ ಈ ಹೊಸ ಟ್ಯಾಬ್ಲೆಟ್‌ನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. Xiaomi Pad 7 ಅನ್ನು ಭಾರತದಲ್ಲಿ ಜನವರಿ 10, 2025 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ದೃಢಪಡಿಸಿದೆ.
Xiaomi ತನ್ನ ಮುಂಬರುವ ಟ್ಯಾಬ್ಲೆಟ್‌ನ ಬಿಡುಗಡೆಯನ್ನು Amazon ನಲ್ಲಿ ಬಿಡುಗಡೆ ಮಾಡಲಾದ ಮೈಕ್ರೋಸೈಟ್ ಮೂಲಕ ಬಹಿರಂಗಪಡಿಸಿದೆ. ಅಂದರೆ Xiaomi Pad 7 ಅನ್ನು Amazon ನಲ್ಲಿ ಮಾರಾಟ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ Xiaomi Pad 7ನ ಇತರ ವಿವರಗಳನ್ನು ಸಹ ತಿಳಿಯಬಹುದು. ಈ ಟ್ಯಾಬ್ಲೆಟ್‌ನ ಭಾರತೀಯ ರೂಪಾಂತರದ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು ಚೈನೀಸ್ನಲ್ಲಿ ಬಿಡುಗಡೆಯಾಗಿರುವ ಮಾಡೆಲ್ ತರಹವೇ ಇರಬಹುದು.
Xiaomi Pad 7 ನ ಚೀನೀ ರೂಪಾಂತರವು 11.2-ಇಂಚಿನ LCD ಪರದೆಯೊಂದಿಗೆ 3.2K ರೆಸಲ್ಯೂಶನ್ ಜೊತೆಗೆ 144Hz ನ ರಿಫ್ರೆಶ್ ರೇಟ್ ಹೊಂದಿದೆ. ಅಷ್ಟೇ ಅಲ್ಲ 800 ನೀಟ್ಸ್ನ ಬ್ರೈಟ್ನೆಸ್ ಹೊಂದಿದೆ. ಈ ಟ್ಯಾಬ್ಲೆಟ್ Dolby Vision ಸಪೋರ್ಟ್ನೊಂದಿಗೆ ಬರುತ್ತದೆ ಮತ್ತು Snapdragon 7+ Gen 3 SoC ಚಿಪ್‌ಸೆಟ್ ಹೊಂದಿದೆ. ಈ ಟ್ಯಾಬ್ಲೆಟ್ Android 15 ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ.
ಚೀನೀ ರೂಪಾಂತರದ Xiaomi ಪ್ಯಾಡ್ 7 ಹಿಂಭಾಗದಲ್ಲಿ 13MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾ ಹೊಂದಿದೆ. ಇದಲ್ಲದೇ, ಬಳಕೆದಾರರು ಈ ಟ್ಯಾಬ್ಲೆಟ್‌ನಲ್ಲಿ 8,850mAh ಬ್ಯಾಟರಿಯನ್ನು ಸಹ ಪಡೆಯುತ್ತಾರೆ. ಇದು 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ ಬರುತ್ತದೆ. ಇದು ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ಚೀನಾದಲ್ಲಿ Xiaomi ಪ್ಯಾಡ್ 7 ನ ಬೆಲೆಯು CNY 1,999 (ಸುಮಾರು ರೂ 23,500) ನಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಬಳಕೆದಾರರು 8GB RAM ಮತ್ತು 128GB ಸ್ಟೋರೇಜ್ ರೂಪಾಂತರ ಪಡೆಯುತ್ತಾರೆ. ಆದರೆ, 8GB + 256GB ರೂಪಾಂತರದ ಬೆಲೆ CNY 2,299 (ಸುಮಾರು ರೂ 27,700) ಮತ್ತು 12GB + 256GB ರೂಪಾಂತರದ ಬೆಲೆ CNY 2,599 (ಸುಮಾರು ರೂ 30,600) ಇದೆ. ಕಂಪನಿಯು ಈ ಟ್ಯಾಬ್ಲೆಟ್ ಅನ್ನು ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ.