ಹೈದರಾಬಾದ್: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ನಮನ್ ಓಜಾ ಅವರ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಪ್ರಕ್ರಿಯೆ ಬಳಿಕ ನ್ಯಾಯಾಲಯ ಈ ಆದೇಶ ಮಾಡಿದೆ.
ಈ ಹಿಂದೆ 2013ರಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ವಿನಯ್ ಓಜಾ, ಅಭಿಷೇಕ್ ರತ್ನಂ, ಸೇರಿದಂತೆ ನಾಲ್ವರು ₹1.25 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಸುಮಾರು 11 ವರ್ಷಗಳ ನಂತರ ಎಲ್ಲಾ ಆರೋಪಿಗಳು ದೋಷಿ ಎಂದು ತೀರ್ಪು ನೀಡಿರುವ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ವಿನಯ್ ಓಜಾ ಸೇರಿದಂತೆ ಮೂವರಿಗೆ ಜೈಲು ಶಿಕ್ಷೆ ಸಮೇತ ದಂಡ ವಿಧಿಸಿದೆ.
ಹಗರಣದ ಮಾಸ್ಟರ್ ಮೈಂಡ್ ಆಗಿರುವ ಅಭಿಷೇಕ್ ರತ್ನಂಗೆ 10 ವರ್ಷ ಜೈಲು ಸಮೇತ ರೂ. 80 ಲಕ್ಷ ದಂಡ ವಿಧಿಸಿದರೇ, ವಿನಯ್ ಓಜಾಗೆ ₹14 ಲಕ್ಷ ದಂಡ ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ.
ಏನಿದು ಪ್ರಕರಣ: 2013ರಲ್ಲಿ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ, ಮುಲ್ತಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ, ಬ್ಯಾಂಕ್ ಆಫ್ ಮಹಾರಾಷ್ಟ್ರ ಜೌಳಖೇಡ ಶಾಖೆಯಲ್ಲಿ ₹1.23 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಬ್ಯಾಂಕ್ನ ವ್ಯವಸ್ಥಾಪಕರಾಗಿದ್ದ ಅಭಿಷೇಕ್ ರತ್ನಂ ಮತ್ತು ಇದೇ ಬ್ಯಾಂಕ್ನಲ್ಲಿ ಸಹಾಯಕ ವಿನಯ್ ಓಜಾ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರೂ ಸೇರಿದ ಅಧಿಕಾರಿಗಳ ಪಾಸ್‌ವರ್ಡ್ ಬಳಸಿ ನಕಲಿ ಖಾತೆಗಳನ್ನು ತೆರೆದು ಸಾಲದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದರು.
ಈ ಸಂಬಂಧ 2014ರ ಜೂನ್ 19ರಂದು ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ರಿತೇಶ್ ಚತುರ್ವೇದಿ ಅವರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಭಾಗಿಯಾಗೊರುವ ಎಲ್ಲಾ ನಾಲ್ವರು ದೊಷಿಗಳೆಂದಿರುವ ನ್ಯಾಯಾಲ ಶಿಕ್ಷೆ ವಿಧಿಸಿ ಆದೇಶ ಮಾಡಿದೆ.
ನಮನ್ ಓಜಾ ಯಾರು: ಇವರು ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು. 2010ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಓಜಾ, ಭಾರತದ ಪರ 1 ಟೆಸ್ಟ್, 1 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನು ಆಡಿದ್ದರು. ಈ ವೇಳೆ ಅವರು ಒಟ್ಟು 69 ರನ್ ಗಳಿಸಿದರು. ಆದ್ರೆ ಐಪಿಎಲ್‌ನಲ್ಲಿ ಓಜಾ ಹೆಚ್ಚು ಖ್ಯಾತಿ ಪಡೆದಿದ್ದರು.
ಇವರು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದರು. ಈ ಅವಧಿಯಲ್ಲಿ ಒಟ್ಟು 113 ಐಪಿಎಲ್ ಪಂದ್ಯಗಳನ್ನು ಆಡಿ, 94 ಇನ್ನಿಂಗ್ಸ್ಗಳಲ್ಲಿ 1554 ರನ್ ಗಳಿಸಿದ್ದರು. ಇದರಲ್ಲಿ 6 ಅರ್ಧಶತಕ ಸೇರಿವೆ. ಸಧ್ಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಓಜಾ ಲೀಗ್ ಆಫ್ ಲೆಜೆಂಡ್ಸ್ ಸೇರಿದಂತೆ ಕೆಲವು ಫ್ರಾಂಚೈಸಿ ಲೀಗ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 19 ವರ್ಷದ ಯುವ ಆಟಗಾರನೊಂದಿಗೆ ಬೇಕಂತಲೇ ಜಗಳಕ್ಕಿಳಿದ ವಿರಾಟ್ ಕೊಹ್ಲಿಗೆ ನಿಷೇಧ?