ಸೂರತ್‌ನಲ್ಲಿ ಭೀಕರ ಬೆಂಕಿ ಅವಗಢ:19 ಬಲಿ,ಪ್ರಾಣ ರಕ್ಷಣೆಗೆ ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು! - ವಿದ್ಯಾರ್ಥಿಗಳು
🎬 Watch Now: Feature Video
ಸೂರತ್: ಇಲ್ಲಿನ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ಗೆ ಶಾರ್ಟ್ ಸರ್ಕ್ಯೂಟ್ನಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅನೇಕ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದ್ದು,ಪ್ರಾಣ ಉಳಿಸಿಕೊಳ್ಳಲು ಹಲವರು ಕಟ್ಟಡದಿಂದ ಕೆಳಗೆ ಜಿಗಿಯಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿ ಕ್ಷಣಮಾತ್ರದಲ್ಲಿಕಟ್ಟಡದೆಲ್ಲೆಡೆ ವ್ಯಾಪಿಸಿದ್ದು,ಅಪಾಯದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮೇಲ್ಚಾವಣಿಯಿಂದ ಹಾರಿದ ದಾರುಣ ದೃಶ್ಯಗಳು ಭೀತಿ ಹುಟ್ಟಿಸುವಂತಿದೆ.