ಮಾದರಿ ಸೋಲಾರ್ ರೈತನ ಪ್ಲಾನ್ ನಿಮ್ಮ ಮುಂದೆ! - ವಿಶೇಷ ವರದಿ
🎬 Watch Now: Feature Video
ಸರ್ಕಾರ ಸರಿಯಾಗಿ ಕರೆಂಟ್ ಉತ್ಪಾದನೆ ಮಾಡುತ್ತಿಲ್ಲ. ರೈತರಿಗೆ 24 ಗಂಟೆ ವಿದ್ಯುತ್ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶಕ್ಕೆ ಕೊಡೋದೆ ಕೆಲವು ಗಂಟೆಗಳು ಕರೆಂಟ್ ಮಾತ್ರ. ವಿದ್ಯುತ್ ನಂಬಿಕೊಂಡು ಬೋರ್ವೆಲ್ ನೀರು ಮೇಲೆ ಬರೋದು ಡೌಟು. ಥ್ರಿ ಫೇಸ್ ಪವರ್ ಕಾಯುತ್ತಾ ಹಗಲಿರುಳೆನ್ನದೆ ರೈತರು ತಮ್ಮ ತೋಟ, ಹೊಲ-ಗದ್ದೆಗಳಿಗೆ ನೀರು ಹಾಯಿಸಿಕೊಳ್ಳಲು ಹೊಸ ಉಪಾಯವನ್ನು ಹುಡುಕಿಕೊಂಡಿದ್ದಾರೆ. ಇದರಿಂದ ಹಗಲಲ್ಲಿ ಹೊಲ-ಗದ್ದೆಗಳಲ್ಲಿ ದುಡಿದ ರೈತರು ರಾತ್ರಿ ವೇಳೆ ನೆಮ್ಮದಿಯಿಂದ ಮಲಗುತ್ತಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೇ ನೋಡಿ..