ಅಪ್ರಾಪ್ತ ಬಾಲಕನ ಆತ್ಮಹತ್ಯೆ;ತನಿಖೆೆಗೆ ಬಂದ ಪೊಲೀಸ್ ಇನ್ಸ್ಪೆಕ್ಟರ್ನ ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು! - ಬಾಲಕ ಆತ್ಮಹತ್ಯೆ
🎬 Watch Now: Feature Video
ಬಾಲಸೋರ್(ಒಡಿಶಾ): ವಿಚಾರಣೆ ನಿಮಿತ್ತ ಗ್ರಾಮಕ್ಕೆ ಬಂದ ಪೊಲೀಸ್ ಇನ್ಸ್ಪೆಕ್ಟರ್ನನ್ನೇ ಗ್ರಾಮಸ್ಥರು ಅಟ್ಟಾಡಿಸಿ ಹೊಡೆದಿರುವ ಘಟನೆ ಒಡಿಶಾದ ಬಾಲಸೋರ್ನಲ್ಲಿ ನಡೆದಿದೆ. ಡಾಬಾವೊಂದರಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು,ಪ್ರಕರಣದ ವಿಚಾರಣೆಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಮಿಸಿದ್ದರು.
ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳಲು ಇನ್ಸ್ಪೆಕ್ಟರ್ ಮುಂದಾಗುತ್ತಿದ್ದಂತೆ ಉದ್ರಿಕ್ತ ಗ್ರಾಮಸ್ಥರ ಗುಂಪು ಅವರ ಮೇಲೆ ಹಲ್ಲೆ ಮಾಡಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಅವರ ರಕ್ಷಣೆ ಮಾಡಿದ್ದಾರೆ.