ಕೊರೊನಾ ವಿರುದ್ಧ ಹೋರಾಟಕ್ಕೆ ಪೊಲೀಸರ ವಿನೂತನ ಜಾಗೃತಿ: ವಿಡಿಯೋ ನೋಡಿ - telangana, karnataka police
🎬 Watch Now: Feature Video
ಕೊರೊನಾ ವಿರುದ್ಧ ಹೋರಾಡಲು ಪ್ಲಾಸ್ಮಾದಾನ ಮಾಡುವಂತೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯ ಪೊಲೀಸರು ಜಂಟಿಯಾಗಿ ಹಾಡೊಂದನ್ನು ರಚಿಸಿದ್ದಾರೆ. ಈ ಮೂಲಕ ಕೋವಿಡ್ ರೋಗಿಗಳ ನೆರವಿಗೆ ಧಾವಿಸಲು ಮುಂದಾಗುವಂತೆ ಕರೆ ನೀಡಿದ್ದಾರೆ. ‘ನಾ ನೀಡುವೆ ಪ್ಲಾಸ್ಮಾ ನಾ ನಾಗುವೆ ಸಂಜೀವಿನಿ’ ಪ್ಲಾಸ್ಮಾದಾನ ಜೀವದಾನ ಎಂಬ ಸಾಹಿತ್ಯದೊಂದಿಗೆ ಹಾಡು ರಚನೆಗೊಂಡಿದೆ. ಹಾಡಿಗೆ ಪ್ರಸಿದ್ಧ ದಂತ ವೈದ್ಯ ಪರಪ್ಪ ಸಜ್ಜನ್ ಸಾಹಿತ್ಯ ಬರೆದಿದ್ದು, ಶ್ರೀನಿಧಿ ತಿರುಮಲ ಸಂಗೀತ ನಿರ್ದೇಶಿಸಿ ಹಾಡಿಗೆ ಧ್ವನಿಗೂಡಿಸಿದ್ದಾರೆ. ಜತೆ ಬಾಹುಬಲಿ ಖ್ಯಾತಿಯ ಎಂ.ಎಂ ಕೀರವಾಣಿ ಈ ಜಾಗೃತಿ ಗೀತೆಗೆ ಧ್ವನಿಯಾಗಿದ್ದಾರೆ.