ಮಹತ್ವ ಕಳೆದುಕೊಳ್ಳುತ್ತಿದೆ ಮಹಾತ್ಮರ ಅತಿ ಮುಖ್ಯ ಸ್ಮಾರಕ...!
🎬 Watch Now: Feature Video
ನರ್ಮದಾ ನದಿಯ ದಂಡೆ ಮೇಲೆ ಮಹಾತ್ಮ ಗಾಂಧಿಯವರ ಎರಡನೇ ಹಾಗೂ ಪ್ರಮುಖ ಸಮಾಧಿ ಬರ್ಮಾನಿಯಲ್ಲಿ ಸ್ಥಾಪನೆಯಾಗಿತ್ತು. ಇದು ಮಧ್ಯಪ್ರದೇಶದ ಐಡೆಂಟಿಟಿ ಎಂಬಂತಾಗಿತ್ತು ಕೂಡಾ. 1965 ಫೆಬ್ರವರಿ 12 ರಂದು ಗಾಂಧಿವಾದಿ ಕಾಶಿನಾಥ ತ್ರಿವೇದಿ ಈ ಸ್ಮಾರಕ ನಿರ್ಮಾಣ ಮಾಡಿದ್ದರು. ವಿಶೇಷ ಅಂದರೆ ಮಹಾತ್ಮರದ್ದಷ್ಟೇ ಅಲ್ಲ, ಅವರ ಪತ್ನಿ ಕಸ್ತೂರಬಾ ಹಾಗೂ ಕಾರ್ಯದರ್ಶಿ ಮಹದೇವ ದೇಸಾಯಿ ಅವರ ಚಿತಾಭಸ್ಮವನ್ನು ಶೇಖರಿಸಿ ಇಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದೆ.