ETV Bharat / international

ವಾಷಿಂಗ್ಟನ್​ನಲ್ಲಿ 64 ಜನರಿದ್ದ ಪ್ಯಾಸೆಂಜರ್​ ಜೆಟ್-ಸೇನಾ ಹೆಲಿಕಾಪ್ಟರ್​ ನಡುವೆ ಡಿಕ್ಕಿ- ಅವಘಡದ ದೃಶ್ಯ ಸೆರೆ - WASHINGTON DC PLANE CRASH

ಪ್ಯಾಸೆಂಜರ್​ ಜೆಟ್​ ವಿಮಾನ ರನ್​ವೇಗೆ ಇಳಿಯುವ ಸಂದರ್ಭದಲ್ಲಿ ಸೇನಾ ಹೆಲಿಕಾಪ್ಟರ್​ ಜೊತೆ ಡಿಕ್ಕಿ ಸಂಭವಿಸಿದೆ.

passenger-jet-collides-with-army-helicopter-while-landing-at-reagan-washington-national-airport
ಅವಘಡದ ಚಿತ್ರ (IANS)
author img

By ETV Bharat Karnataka Team

Published : Jan 30, 2025, 11:02 AM IST

Updated : Jan 30, 2025, 11:12 AM IST

ವಾಷಿಂಗ್ಟನ್​(ಯುಎಸ್‌ಎ): ಪ್ಯಾಸೆಂಜರ್​ ಜೆಟ್​ ಮತ್ತು ಸೇನಾ ಹೆಲಿಕಾಪ್ಟರ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಅಮೆರಿಕದ ವಾಷಿಂಗ್ಟನ್​ನಲ್ಲಿ ಬುಧವಾರ ರಾತ್ರಿ ನಡೆಯಿತು. ಅಮೆರಿಕನ್​ ಏರ್​ಲೈನ್ಸ್ ​ವಿಮಾನ ಸಂಖ್ಯೆ 5342 ಮತ್ತು ಬ್ಲಾಕ್​ ಹಾವಕ್​ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಈ ಸಂದರ್ಭದಲ್ಲಿ ಪ್ಯಾಸೆಂಜರ್​ ಜೆಟ್‌ನಲ್ಲಿ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

ಫೆಡರಲ್​ ವಿಮಾನ ಆಡಳಿತ​ (ಎಫ್​ಎಎ)ದ ವರದಿ ಪ್ರಕಾರ, ಬುಧವಾರ ರಾತ್ರಿ 9ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್​ ಜೆಟ್​​ ರೊನಾಲ್ಡ್​​ ರೀಗನ್​ ವಾಷಿಂಗ್ಟನ್​ ನ್ಯಾಷನಲ್​ ಏರ್​ಪೋರ್ಟ್​ನ ರನ್‌ವೇ 33ರಲ್ಲಿ ಇಳಿಯುತ್ತಿದ್ದಂತೆ ದುರಂತ ಘಟಿಸಿದೆ.

ಪಿಎಸ್​ಎ ಏರ್​ಲೈನ್​ ಬೊಮಾರ್ಡಿಯರ್​ ಸಿಆರ್​ಜೆ700 ಪ್ರಾದೇಶಿಕ ಜೆಟ್,​​ ಸ್ಥಳೀಯ ಕಾಲಮಾನ ರಾತ್ರಿ 9ಕ್ಕೆ ರೀಗನ್​ ವಾಷಿಂಗ್ಟನ್​ ನ್ಯಾಷನಲ್​ ಏರ್​ಪೋರ್ಟ್​ನ ರನ್​ವೇ ಇಳಿಯುವಾಗ ಸಿಕೊರ್ಸಕೆ ಎಚ್​-60 ಹೆಲಿಕಾಪ್ಟರ್‌ ಡಿಕ್ಕಿಯಾಗಿದೆ. ಪಿಎಸ್​ಎ ವಿಮಾನವನ್ನು ಅಮೆರಿಕನ್​ ಏರ್​ಲೈನ್ಸ್‌​ ಕಾರ್ಯಾಚರಣೆ ನಡೆಸುತ್ತಿದೆ. ಇದು ಕನ್ಸಸ್‌ನ​ ವಿಚಿತ ಎಂಬಲ್ಲಿಂದ ಹೊರಟಿತ್ತು. ಘಟನೆಯನ್ನು ಎಫ್​ಎಎಎ ಮತ್ತು ಎನ್​ಟಿಎಸ್​ಬಿ ತನಿಖೆ ನಡೆಸಲಿದೆ ಎಂದು ಎಫ್​ಎಎ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ದುರಂತ ಸಂಭವಿಸಿದ ತಕ್ಷಣವೇ ತುರ್ತು ಸೇವೆಗಳ ಸಿಬ್ಬಂದಿ, ಮೆಟ್ರೋಪಾಲಿಟನ್​ ಪೊಲೀಸ್​ ಇಲಾಖೆ, ಕೊಲಂಬಿಯಾ ಅಗ್ನಿಶಾಮಕ ದಳ ಹಾಗೂ ತುರ್ತು ವೈದ್ಯಕೀಯ ಸೇವಾ ಇಲಾಖೆ ಪೊರೊಮಾಕ್​ ನದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಪಘಾತ ನಡೆದ ಪ್ರದೇಶದಲ್ಲಿ ನದಿಗೆ ಬಿದ್ದವರ ರಕ್ಷಣೆಗೆ ಬೋಟ್‌ಗಳನ್ನು ನಿಯೋಜಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ರೊನಾಲ್ಡ್​​ ರೀಗನ್​ ಏರ್​ಪೋರ್ಟ್​ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಎಲ್ಲಾ ವಿಮಾನಗಳ ಹಾರಾಟ ಮತ್ತು ಆಗಮನವನ್ನು ಬಂದ್​ ಮಾಡಲಾಗಿದೆ.

ಪರಿಸ್ಥಿತಿಯ ಮೇಲ್ವಿಚಾರಣೆ-ಟ್ರಂಪ್: ವಿಮಾನ ದುರಂತದ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೋನಾಲ್ಡ್​ ಟ್ರಂಪ್,​ ಘಟನೆಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇದೊಂದು ಭಯಾನಕ ಅಪಘಾತ. ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ದೊರೆಯಲಿ. ಘಟನೆ ನಡೆದ ತಕ್ಷಣವೇ ನಮ್ಮ ಮೊದಲ ಪ್ರತಿಕ್ರಿಯಾ ತಂಡ ಅದ್ಭುತ ರಕ್ಷಣಾ ಕಾರ್ಯ ನಡೆಸಿದೆ. ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಸುನೀತಾ, ಬುಚ್​: ಅವರಿಬ್ಬರನ್ನು ಆದಷ್ಟು ಬೇಗ ಕರೆತರುವಂತೆ ಮಸ್ಕ್​ ಸಹಾಯ ಕೋರಿದ ಟ್ರಂಪ್

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು: ನನಗೆ ನಡೆಯುವ ಅನುಭವವೇ ನೆನಪಿಲ್ಲ ಎಂದ ಸುನೀತಾ ವಿಲಿಯಮ್ಸ್​

Last Updated : Jan 30, 2025, 11:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.