ಮಂಗಳೂರು: ಅಪಘಾತದಿಂದ ಹೊತ್ತಿ ಉರಿದ ಬಸ್-ಬೈಕ್, ಸಿಸಿಟಿವಿ ವಿಡಿಯೋ - mangaluru accident cctv video
🎬 Watch Now: Feature Video
ಮಂಗಳೂರು: ನಗರದ ಹಂಪನಕಟ್ಟೆ ಟ್ರಾಫಿಕ್ ಸಿಗ್ನಲ್ ಬಳಿ ಸಂಭವಿಸಿದ ಬಸ್ ಮತ್ತು ಬೈಕ್ ನಡುವಿನ ಅಪಘಾತದ ಕೆಲ ಸೆಕೆಂಡುಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೆಂಕಿ ಹೊತ್ತಿದ ಪರಿಣಾಮ ಬೈಕ್ ಹಾಗೂ ಬಸ್ ಸುಟ್ಟು ಕರಕಲಾಗಿವೆ. ಬಸ್ನ ಚಕ್ರದಡಿಗೆ ಬೈಕ್ ಬಿದ್ದಿದ್ದು, ಬೈಕ್ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್ನ ಡೀಸೆಲ್ ಟ್ಯಾಂಕ್ಗೆ ಕೂಡ ಬೆಂಕಿ ಆವರಿಸಿಕೊಂಡು ಬಸ್ ಕೂಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ನಲ್ಲಿದ್ದವರು ಕೂಡಲೇ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದರು.
Last Updated : Feb 3, 2023, 8:22 PM IST