ETV Bharat / sports

ಗಾಯಾಳು ಜೇಸನ್​ ರಾಯ್ ಬದಲಿಗೆ ಡೆಲ್ಲಿ ಕ್ಯಾಪಿಟಲ್​ ಸೇರಿಕೊಂಡ ಆಸ್ಟ್ರೇಲಿಯಾ ಆಲ್​ರೌಂಡರ್​ - ಜೇಸನ್​ ರಾಯ್​ ಐಪಿಎಲ್​ನಿಂದ ಹೊರಕ್ಕೆ

ಪಾಕಿಸ್ತಾನ ವಿರುದ್ಧದ ಟಿ20 ಸರಣಿಗಾಗಿ ಅಭ್ಯಾಸ ಪಂದ್ಯವಾಡುತ್ತಿದ್ದಾಗ ಜೇಸನ್​ ರಾಯ್​ ಗಾಯಗೊಂಡಿದ್ದರು. ಸಧ್ಯಕ್ಕೆ ಇಂಗ್ಲೆಂಡ್​ ಪುನಶ್ಚೇತನ ಶಿಬಿರದಲ್ಲಿ ವೀಕ್ಷಣೆಯಲ್ಲಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ಆರಂಭವಾಗುವುದರೊಳಗೆ ಸಂಪೂರ್ಣ ಗುಣಮುಖರಾಗುವ ವಿಶ್ವಾಸದಲ್ಲಿದ್ದಾರೆ.

ಜೇಸನ್​ ರಾಯ್
ಜೇಸನ್​ ರಾಯ್
author img

By

Published : Aug 27, 2020, 7:59 PM IST

Updated : Aug 27, 2020, 10:38 PM IST

ದುಬೈ: ಗಾಯಗೊಂಡು ಪಾಕಿಸ್ತಾನ ಟಿ20 ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಇಂಗ್ಲೆಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಜೇಸನ್​ ರಾಯ್​ 2020ರ ಐಪಿಎಲ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಟಿ20 ಸರಣಿಗಾಗಿ ಅಭ್ಯಾಸ ಪಂದ್ಯವಾಡುತ್ತಿದ್ದಾಗ ಜೇಸನ್​ ರಾಯ್​ ಗಾಯಗೊಂಡಿದ್ದರು. ಸಧ್ಯಕ್ಕೆ ಇಂಗ್ಲೆಂಡ್​ ಪುನಶ್ಚೇತನ ಶಿಬಿರದಲ್ಲಿ ವೀಕ್ಷಣೆಯಲ್ಲಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ಸೀಮಿತ ಓವರ್​ಗಳ ಸರಣಿ ಆರಂಭವಾಗುವುದರೊಳಗೆ ಸಂಪೂರ್ಣ ಗುಣಮುಖರಾಗುವ ವಿಶ್ವಾಸದಲ್ಲಿದ್ದಾರೆ.

ಡೇನಿಯಲ್​ ಸ್ಯಾಮ್ಸ್​
ಡೇನಿಯಲ್​ ಸ್ಯಾಮ್ಸ್​

ಗಾಯಕ್ಕೊಳಗಾಗಿರುವ ಜೇಸನ್ ರಾಯ್ ಐಪಿಎಲ್​ನಿದಲೂ ಹೊರಗುಳಿಯಲು ನಿರ್ಧರಿಸಿದ ಬೆನ್ನಲ್ಲೇ ಇವರನ್ನು 1.5 ಕೋಟಿ ರೂಗೆ ಖರೀದಿಸಿದ್ದ ಡೆಲ್ಲಿ ಕ್ಯಾಪಿಟಲ್​ ಆಸ್ಟ್ರೇಲಿಯಾದ ಯುವ ಆಲ್​ರೌಂಡರ್​ ಡೇನಿಯಲ್​ ಸ್ಯಾಮ್ಸ್​ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ ಎಂದು ಇಎಸ್​ಪಿನ್​ ವರದಿ ಮಾಡಿದೆ.

ಡೇನಿಯಲ್ ಸ್ಯಾಮ್ಸ್​ 2019-20ರ ಬಿಗ್​ಬ್ಯಾಶ್​ ಲೀಗ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. ಅವರು ಆಸೀಸ್​ ಟಿ20 ಲೀಗ್​ನಲ್ಲಿ 17 ಪಂದ್ಯಗಳಿಂದ 30 ವಿಕೆಟ್​ ಪಡೆದಿದ್ದರು. ಡೆಲ್ಲಿ ಕ್ಯಾಪಿಟಲ್​ ತಂಡದಲ್ಲಿ ಈಗಾಗಲೆ ಆಸ್ಟ್ರೇಲಿಯಾದ ಆಲ್​ರೌಂಡರ್​ ಸ್ಟೋಯ್ನೀಸ್​ ಕೂಡ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

Last Updated : Aug 27, 2020, 10:38 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.