ಫೆಬ್ರವರಿ 19 ರಿಂದ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪ್ರಾರಂಭವಾಗಲಿದೆ. ಮಹತ್ವದ ಟೂರ್ನಿಗಾಗಿ ಈಗಿನಿಂದಲೇ ಎಲ್ಲ ತಂಡಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗಿಯಾಗುತ್ತಿದ್ದು ನ್ಯೂಜಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ಎ ಗುಂಪಿನಲ್ಲಿರುವ ನಾಲ್ಕು ತಂಡಗಳಾಗಿವೆ. ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇವೆ. ಫೆ.19 ರಿಂದ ಪಂದ್ಯಾವಳಿ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಬಳಿಕ ಫೆ.20 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಸರಣಿಯ ತನ್ನ ಮೊದಲ ಪಂದ್ಯವನ್ನು ಆಡಲಿದೆ.
Selfless Rohit Sharma getting out early to let youngsters spend time in the middle ❤️pic.twitter.com/o1CXQnqEiD
— Dinda Academy (@academy_dinda) January 23, 2025
ಈ ಬಾರಿ ಎರಡನೇ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯುವ ಉದ್ದೇಶ ಹೊಂದಿರುವ ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಈ ಸಂಬಂಧ ಇತ್ತೀಚೆಗೆ 15 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ, ಚಾಂಪಿಯನ್ಸ್ ಟ್ರೋಫಿಗೂ ಮೊದಲು ರಣಜಿ ಪಂದ್ಯದಲ್ಲಿ ಆಡುತ್ತಿರುವ ಅರ್ಧದಷ್ಟು ಟೀಂ ಇಂಡಿಯಾದ ಆಟಗಾರರು ಭಾರೀ ನಿರಾಸೆ ಮೂಡಿಸಿದ್ದಾರೆ. ಹೌದು ಇಂದು ನಡೆಯುತ್ತಿರುವ ರಣಜಿ ಟ್ರೋಫಿಯ 6ನೇ ಸುತ್ತಿನ ಪಂದ್ಯಾವಳಿಯಲ್ಲಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಶುಭಮನ್ ಗಿಲ್ ಸೇರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆದಿರುವ 5 ಆಟಗಾರರು ಫ್ಲಾಪ್ ಆಗಿದ್ದಾರೆ.
Shubman Gill dismissed for 4 in 8 balls. pic.twitter.com/MLKGALLf9B
— Mufaddal Vohra (@mufaddal_vohra) January 23, 2025
ಭಾರತಕ್ಕೆ ಹೆಚ್ಚಿದ ಆತಂಕ
ರೋಹಿತ್ ಶರ್ಮಾ: ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ನಾಯಕ ರೋಹಿತ್ ಶರ್ಮಾ ತಮ್ಮ ಫಾರ್ಮ್ ಮರಳಿ ಪಡೆಯಲು ರಣಜಿ ಟ್ರೋಫಿ ಆಡುತ್ತಿದ್ದಾರೆ. ಮುಂಬೈ ತಂಡದ ಪರ ಕಣಕ್ಕಿಳಿದಿರುವ ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಇಂದಿನ ಪಂದ್ಯದಲ್ಲೆ ಕೇವಲ 3 ರನ್ಗಳಿಗೆ ಪೆವಿಲಿಯನ್ ಸೇರಿದ್ದಾರೆ. 19 ರನ್ಗಳನ್ನು ಎದುರಿಸಿದ ಶರ್ಮಾ 12 ಡಾಟ್ ಬಾಲ್ ಆಡಿ ವಿಕೆಟ್ ಒಪ್ಪಿಸಿ ಹೊರನಡೆದಿದ್ದಾರೆ.
Yashasvi Jaiswal dismissed for 5 in 8 balls. pic.twitter.com/5g6h54oaHB
— Mufaddal Vohra (@mufaddal_vohra) January 23, 2025
ಶುಭಮನ್ ಗಿಲ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಉಪನಾಯಕನಾಗಿರುವ ಶುಭಮನ್ ಗಿಲ್ ರಣಜಿ ಟ್ರೋಫಿಯಲ್ಲಿ ಫ್ಲಾಪ್ ಆಗಿದ್ದಾರೆ. ಕರ್ನಾಟಕ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ತಂಡ ಪ್ರತಿನಿಧಿಸುತ್ತಿರುವ ಗಿಲ್ ಈ ಪಂದ್ಯದಲ್ಲಿ ಪ್ರಭಾಸಿಮ್ರಾನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಆದರೆ 8 ಎಸೆತಗಳಲ್ಲಿ 4 ರನ್ಗಳಿಸಲಷ್ಟೇ ಶಕ್ತರಾದರು.
INDIAN INTERNATIONAL BATTERS IN RANJI TROPHY:
— Johns. (@CricCrazyJohns) January 23, 2025
- Rishabh Pant dismissed for 1 run.
- Rohit Sharma dismissed for 3 runs.
- Yashasvi Jaiswal dismissed for 4 runs.
- Shubman Gill dismissed for 4 runs. pic.twitter.com/KoDYZ8ZIMo
ಯಶಸ್ವಿ ಜೈಸ್ವಾಲ್: ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಜೈಸ್ವಾಲ್ ಇಂದು ರೋಹಿತ್ ಶರ್ಮಾರೊಂದಿಗೆ ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದಿದ್ದರು. ಆದರೆ, ಇವರೂ ಕೂಡ ರನ್ ಗಳಿಸುವಲ್ಲಿ ವಿಫಲರಾದರೂ. ಕೇವಲ 5 ರನ್ಗಳಿಗೆ ಸುಸ್ತಾದ ಜೈಸ್ವಾಲ್ ಪೆವಿಲಿಯನ್ ದಾರಿ ಹಿಡಿದರು.
ರಿಷಭ್ ಪಂತ್: ಚಾಂಪಿಯನ್ಸ್ ಟ್ರೋಫಿಗೆ ಪ್ರಕಟವಾಗಿರುವ ತಂಡದಲ್ಲಿ ರಿಷಭ್ ಪಂತ್ ಕೂಡ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಟೂರ್ನಿಗೂ ಮೊದಲು ರಣಜಿ ಆಡುತ್ತಿರುವ ಪಂತ್ ಡೆಲ್ಲಿ ತಂಡದಲ್ಲಿದ್ದಾರೆ. ಆದರೆ ಇವರೂ ಕೂಡ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ.
- Rishabh Pant dismissed for 1.
— Mufaddal Vohra (@mufaddal_vohra) January 23, 2025
- Rohit Sharma dismissed for 3.
- Yashasvi Jaiswal dismissed for 4.
- Shubman Gill dismissed for 4.
- Shreyas Iyer dismissed for 11.
INDIAN STARS IN RANJI TROPHY. 🤯 pic.twitter.com/TX8Eefykkx
ಶ್ರೇಯಸ್ ಅಯ್ಯರ್: ಮಧ್ಯಮ ಕ್ರಮಾಂಕದಲ್ಲಿ ಬೆಸ್ಟ್ ಬ್ಯಾಟರ್ ಎನಿಸಿಕೊಂಡಿರುವ ಅಯ್ಯರ್ ಕೂಡ ನಿರಾಸೆ ಮೂಡಿಸಿದ್ದಾರೆ. ಮುಂಬೈ ತಂಡದ ಭಾಗವಾಗಿರುವ ಇವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ 11 ರನ್ಗಳಿಸಿ ನಿರ್ಗಮಿಸಿದ್ದಾರೆ. 7 ಎಸೆತಗಳಲ್ಲಿ 1 ಸಿಕ್ಸರ್ 1 ಬೌಂಡರಿ ಸಿಡಿಸಿ ನಿರ್ಗಮಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಹೊಸ್ತಿಲಲ್ಲೇ ಈ ಐವರು ಸ್ಟಾರ್ ಆಟಗಾರರು ವಿಫಲವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಸ್ಪಿನ್ನರ್ ಸೌರಾಷ್ಟ್ರ ಭಾಗವಾಗಿರುವ ರವೀಂದ್ರ ಜಡೇಜಾ ದೆಹಲಿ ಬ್ಯಾಟರ್ಗಳನ್ನು ಕಾಡಿದರು. 17 ಓವರ್ಗಳ ಬೌಲಿಂಗ್ ಮಾಡಿದ ಅವರು 66 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಕನ್ನಡಿಗನ ಕಮಾಲ್; ಇಂಗ್ಲೆಂಡ್ ವಿರುದ್ಧ 13 ವರ್ಷದ ಹಳೆ ಸೇಡು ತೀರಿಸಿಕೊಂಡ ಭಾರತ