ಅಮೆರಿಕ ಯಶಸ್ಸಿನಲ್ಲಿ ಭಾರತದ ಪಾತ್ರ ಪ್ರಮುಖ: ಆ್ಯಂಟನಿ ಬ್ಲಿಂಕೆನ್ - US presideny Joe Biden News
ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮತ್ತು ವಿಭಿನ್ನ ತಂತ್ರಜ್ಞಾನಗಳ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳುವ "ಬಲವಾದ" ಸಮರ್ಥಕರಾಗಿದ್ದಾರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ನಾಮನಿರ್ದೇಶಕ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ವಾಷಿಂಗ್ಟನ್: ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮತ್ತು ವಿಭಿನ್ನ ತಂತ್ರಜ್ಞಾನಗಳ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳುವ "ಬಲವಾದ" ಸಮರ್ಥಕರಾಗಿದ್ದಾರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ನಾಮನಿರ್ದೇಶಕ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಸೆನೆಟ್ ವಿದೇಶಾಂಗ ಸಮಿತಿಯ ಮುಂದೆ ಅವರ ನಾಮ ನಿರ್ದೇಶನ ದೃಢೀಕರಣ ಸಂದರ್ಭದಲ್ಲಿ ಮಾತನಾಡಿ, " ನಮ್ಮ ಒಡನಾಟ ಅನೇಕ ವರ್ಷಗಳಿಂದ ಮುಂದುವರೆದಿದೆ. ಅಷ್ಟೇ ಅಲ್ಲದೆ, ಸಹಕಾರ ಇದೇ ರೀತಿ ಮುಂದುವರಿಯಲು ಅನೇಕ ದಾರಿಗಳಿವೆ. ನಮ್ಮ ಆಡಳಿತದ ಯಶಸ್ಸಿನಲ್ಲಿ ಭಾರತದ ಪಾತ್ರವೂ ಇದೆ" ಎಂದರು.
"ಒಬಾಮಾ ಆಡಳಿತದ ಸಮಯದಲ್ಲಿ, ರಕ್ಷಣಾ ವಿಚಾರ ಮತ್ತು ಮಾಹಿತಿ ಹಂಚಿಕೆಯ ವಿಚಾರದಲ್ಲಿ ಸಹಕಾರ ನೀಡಲಾಯಿತು. ಇದಾದ ಬಳಿಕ ಟ್ರಂಪ್ ಆಡಳಿತವು ಇಂಡೋ-ಪೆಸಿಫಿಕ್ ಪರಿಕಲ್ಪನೆಯನ್ನು ಒಳಗೊಂಡಂತೆ ಇನ್ನಷ್ಟು ಸಹಕಾರ ನೀಡಿದೆ. ಇದೀಗ ನಾವು ಸಹ ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಯೋತ್ಪಾದನೆಯ ಬಗ್ಗೆ ನಾವು ಹಂಚಿಕೊಳ್ಳುವ ದೃಢನಿರ್ಧಾರಗಳ ಬಗ್ಗೆ ಜೊತೆಯಾಗಿ ಕೆಲಸ ಮಾಡಬೇಕಿದೆ" ಎಂದರು.
46ನೇ ಯುಎಸ್ ಅಧ್ಯಕ್ಷರಾಗಿ ಇಂದು ಜೋ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಬೈಡನ್ ಅವರ ಆಡಳಿತದಲ್ಲಿ ಸೇವೆ ಸಲ್ಲಿಸಲು ಆಪ್ತ ಮತ್ತು ದೀರ್ಘಕಾಲದಿಂದ ಅವರ ಜೊತೆ ಸೇವೆ ಸಲ್ಲಿಸುತ್ತಿರುವ ವಿದೇಶಾಂಗ ನೀತಿ ಸಲಹೆಗಾರರಲ್ಲಿ ಒಬ್ಬರಾದ ಆಂಟನಿ ಬ್ಲಿಂಕೆನ್ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.