ETV Bharat / international

ಅಮೆರಿಕದಿಂದ ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆ ಆರಂಭ: ಮೊದಲ ದಿನ 538 ಮಂದಿ ಬಂಧನ - MIGRANTS DEPORTED

ಅಮೆರಿಕದಿಂದ ಅಕ್ರಮ ನಿವಾಸಿಗಳನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನವೇ 538 ಜನರನ್ನು ಬಂಧಿಸಿ ಸ್ಥಳಾಂತರಿಸಲಾಗಿದೆ.

ಅಮೆರಿಕದಲ್ಲಿ ನೆಲೆಸಿದ್ದ ಅಕ್ರಮ ವಲಸಿಗರನ್ನು ಬಂಧಿಸಿ ವಿಮಾನಗಳಲ್ಲಿ ಕರೆದೊಯ್ದ ಸೇನೆ
ಅಮೆರಿಕದಲ್ಲಿ ನೆಲೆಸಿದ್ದ ಅಕ್ರಮ ವಲಸಿಗರನ್ನು ಬಂಧಿಸಿ ವಿಮಾನಗಳಲ್ಲಿ ಕರೆದೊಯ್ದ ಸೇನೆ (X@WhiteHouse)
author img

By ETV Bharat Karnataka Team

Published : Jan 25, 2025, 3:31 PM IST

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾನ ಮಾಡಿದಂತೆ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. 538 ಅಕ್ರಮ ವಲಸಿಗರನ್ನು ಬಂಧಿಸಿ, ಅದರಲ್ಲಿ ನೂರಾರು ಜನರನ್ನು ಎರಡು ವಿಮಾನಗಳಲ್ಲಿ ಗ್ವಾಟೆಮಾಲಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ನಿವಾಸಿಗಳನ್ನು ಸ್ಥಳಾಂತರಿಸುತ್ತಿರುವ ಚಿತ್ರಗಳನ್ನು ಶ್ವೇತಭವನವು ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಟ್ರಂಪ್​ ಅವರು ಕೊಟ್ಟ ಭರವಸೆಯಂತೆ ಗಡೀಪಾರು ಕಾರ್ಯಾಚರಣೆ ಆರಂಭಿಸಲಾಗಿದೆ. ಅಕ್ರಮವಾಗಿ ಅಮೆರಿಕ ಪ್ರವೇಶಿಸಿದವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮೊದಲ ದಿನವೇ 538 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಹಲವು ಕ್ರಿಮಿನಲ್​ಗಳು ಇದ್ದಾರೆ ಎಂದು ಅದರಲ್ಲಿ ತಿಳಿಸಲಾಗಿದೆ.

48 ಪುರುಷರು, 31 ಮಹಿಳೆಯರು ಸೇರಿ ಒಟ್ಟು 79 ಅಕ್ರಮ ವಲಸಿಗರನ್ನು ಮೊದಲ ಸೇನಾ ವಿಮಾನದಲ್ಲಿ ಶುಕ್ರವಾರ ಮಧ್ಯರಾತ್ರಿ ಗ್ವಾಟೆಮಾಲಾಕ್ಕೆ ಕರೆತರಲಾಗಿದೆ. ಎರಡನೇ ವಿಮಾನದವೂ ಹೆಚ್ಚಿನ ಸಂಖ್ಯೆಯ ಜನರನ್ನು ಹೊತ್ತು ತಂದಿದೆ. ನೂರಾರು ಜನರನ್ನು ಮಿಲಿಟರಿ ವಿಮಾನಗಳು ಗಡೀಪಾರು ಮಾಡಿವೆ. ಇತಿಹಾಸದಲ್ಲಿ ಅತಿದೊಡ್ಡ ಗಡೀಪಾರು ಕಾರ್ಯಾಚರಣೆ ಚುರುಕು ಪಡೆದಿದೆ ಎಂದು ಶ್ವೇತಭವನ ತಿಳಿಸಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ತಿಳಿಸಿದಂತೆ, ದೊಡ್ಡ ಪ್ರಮಾಣದ ಗಡೀಪಾರು ಕಾರ್ಯಾಚರಣೆ ಆರಂಭವಾಗಿದೆ. ಮೊದಲ ದಿನವೇ, ಶಂಕಿತ ಭಯೋತ್ಪಾದಕರು, ಕ್ರಿಮಿನಲ್​ಗಳು, ಗ್ಯಾಂಗ್​ಸ್ಟರ್​ಗಳು ಮತ್ತು ಅಪರಾಧ ಕೃತ್ಯ ನಡೆಸಿ ಶಿಕ್ಷೆಗೊಳಗಾದವರು ಇದ್ದಾರೆ. ಎಲ್ಲರನ್ನೂ ಬಂಧಿಸಿ ಗಡೀಪಾರು ಮಾಡಲಾಗುತ್ತಿದೆ ಎಂದು ಹೇಳಿದರು.

ಭಾರತದ ನಿಲುವೇನು?: ಇನ್ನೂ, ಅಮೆರಿಕದ ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಅಮೆರಿಕ ಸೇರಿದಂತೆ ಜಗತ್ತಿನ ಯಾವುದೇ ದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಸ್ವದೇಶಕ್ಕೆ ಕರೆತರಲಾಗುವುದು ಎಂದು ತಿಳಿಸಿದೆ.

"ನಾವು ಅಕ್ರಮ ವಲಸೆಯನ್ನು ವಿರೋಧಿಸುತ್ತೇವೆ. ಯಾವುದೇ ರಾಷ್ಟ್ರವು ಸೂಕ್ತ ದಾಖಲೆ ನೀಡಿಬೇಕು. ಅವರು ಭಾರತೀಯರೇ ಆಗಿದ್ದಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಚುನಾವಣೆ ವೇಳೆ ಟ್ರಂಪ್​ ಘೋಷಣೆ: ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆಯೇ ಟ್ರಂಪ್, ಕಾನೂನು ಅನುಮತಿಯಿಲ್ಲದೇ ಅಮೆರಿಕದಲ್ಲಿ ವಾಸಿಸುವ ವಲಸಿಗರ ಸಾಮೂಹಿಕ ಗಡೀಪಾರು ಮಾಡಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವುದಾಗಿ ಹೇಳಿದ್ದರು. ಅದರಂತೆ ಚುನಾಯಿತರಾದ ಬಳಿಕ ಜನವರಿ 20 ರಂದು ಅಧಿಕಾರ ವಹಿಸಿಕೊಂಡು ಮೆಕ್ಸಿಕೋದ ದಕ್ಷಿಣ ಗಡಿಯಲ್ಲಿ ನಡೆಯುವ ನುಸುಳುವಿಕೆ ತಡೆಯಲು ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸುವ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು.

ಓದಿ: ಜನ್ಮದತ್ತ ಪೌರತ್ವ ರದ್ದು ಮಾಡಿದ ಡೊನಾಲ್ಡ್​ ಟ್ರಂಪ್​ ಆದೇಶಕ್ಕೆ ನ್ಯಾಯಾಧೀಶರಿಂದ ತಾತ್ಕಾಲಿಕ ತಡೆ

ಓದಿ: ಜಾನ್ ಎಫ್. ಕೆನಡಿ, ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಯ ರಹಸ್ಯ ದಾಖಲೆ ಬಹಿರಂಗಕ್ಕೆ ಟ್ರಂಪ್ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.