ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಐತಿಹಾಸಿಕ ಸಾಧನೆಗೆ ಮುಂದಾಗಿದೆ. ಇಸ್ರೋದ 100ನೇ ಯೋಜನೆಯಾದ ಜಿಎಸ್ಎಲ್ವಿ ರಾಕೆಟ್ ನಭಕ್ಕೆ ಜಿಗಿಯಲು ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ.
ಇಸ್ರೋದ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ಅವರು ನೇಮಕವಾದ ಬಳಿಕ ನಡೆಯುತ್ತಿರುವ ಮೊದಲ ಉಡಾವಣೆ ಕೂಡ ಇದಾಗಿದೆ.
🌟 T-1 Day to launch! Witness the incredible journey of GSLV-F15/NVS-02 live!
— ISRO (@isro) January 28, 2025
📺 YouTube Link: https://t.co/SXo6F2PAHU (from 05:50 hours)
🗓️ Date: 29th January 2025 | Time: 6:23 Hours (IST)
Join us as we push the boundaries of space applications! 🚀
More information at:… pic.twitter.com/jnSzJ27pFo
ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) ತನ್ನ17ನೇ ಉಡಾವಣೆಯಲ್ಲಿ ಸ್ವದೇಶಿ ಕ್ರಯೋಜೆನಿಕ್ ಮೇಲು ಹಂತದ ಎನ್ವಿಎಸ್-2 ನ್ಯಾವಿಗೇಷನ್ ಉಪಗ್ರಹ ಹೊತ್ತು ಸಾಗಲಿದೆ. ಬೆಳಗ್ಗೆ 6.23ಕ್ಕೆ ರಾಕೆಟ್ ಉಡಾವಣೆಯಾಗಲಿದೆ.
2,250 ಕೆ.ಜಿ ತೂಕದ ಎನ್ವಿಎಸ್- 02 ಉಪಗ್ರಹವನ್ನು ಯುಆರ್ ಸ್ಯಾಟಲೇಟ್ ಕೇಂದ್ರ ಅಭಿವೃದ್ಧಿಪಡಿಸಿದೆ. ಇದು ಎಲ್1, ಎಲ್ 5 ಮತ್ತು ಎಸ್ ಬ್ಯಾಂಡ್‌ನ ಪೇಲೋಡ್ ಹೊಂದಿದೆ. ಜೊತೆಗೆ, ಹೆಚ್ಚುವರಿಯಾಗಿ ಎನ್ವಿಎಸ್-01 ನಂತಹ ಸಿ ಬ್ಯಾಂಡ್ ಶ್ರೇಣಿಯ ಪೇಲೋಡ್ ಹೊಂದಿದೆ.
ಈ ಉಪಗ್ರಹ ಭೂಮಿ, ವೈಮಾನಿಕ ಮತ್ತು ಸಮುದ್ರ ಸಂಚರಣೆ, ಮೊಬೈಲ್ ಸಾಧನಗಳಲ್ಲಿ ಸ್ಥಳ ಆಧಾರಿತ ಸೇವೆಗಳು, ಇಂಟರ್ನೆಟ್-ಆಫ್-ಥಿಂಗ್ಸ್ (ಐಒಟಿ) ಆಧರಿತ ಅಪ್ಲಿಕೇಶನ್‌ಗಳು, ತುರ್ತು ಮತ್ತು ಸಮಯ ಸೇವೆಗಳನ್ನು ನೀಡಲಿದೆ.
ಇದನ್ನೂ ಓದಿ: ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ಅಧಿಕಾರ ಸ್ವೀಕಾರ