ವಾಷಿಂಗ್ಟನ್ : ಮುಂಬೈ ದಾಳಿಯ ರೂವಾರಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾನ ಹಸ್ತಾಂತರಕ್ಕೆ ಭಾರತವು ಮನವಿ ಮಾಡಿತ್ತು. 2008ರ ಮುಂಬೈ ದಾಳಿಯ ಪ್ರಕರಣದಲ್ಲಿ ವಾಂಟೆಡ್ ಅಪರಾಧಿ ಈತನಾಗಿದ್ದಾನೆ. ಭಾರತಕ್ಕೆ ಹಸ್ತಾಂತರ ಕುರಿತು ನಡೆದ ಕಡೆಯ ಕಾನೂನು ಸಾಧ್ಯತೆ ಹೋರಾಟ ಕೂಡ ಇದಾಗಿತ್ತು. ಈ ಮೊದಲು ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ನಾರ್ಥ್ ಸರ್ಕ್ಯೂಟ್ಗೆ ಕೂಡ ಅಮೆರಿಕ ಕೋರ್ಟ್ ಮನವಿ ಸೇರಿದಂತೆ ಅನೇಕ ಫೆಡರಲ್ ಕೋರ್ಟ್ನಲ್ಲಿ ಈ ಕುರಿತು ಹೋರಾಟ ನಡೆಸಲಾಗಿತ್ತು.
ಅಮೆರಿಕ ಸುಪ್ರೀಂ ಕೋರ್ಟ್ಗೆ ಸರ್ಟಿಯೊರಾರಿ ರಿಟ್‌ಗಾಗಿ ರಾಣಾ ನವೆಂಬರ್ 13ರಂದು ಅರ್ಜಿ ಸಲ್ಲಿಸಿದ್ದ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸುವ ಮುನ್ನಾದಿನ ಜನವರಿ 21ರಂದು ಇದನ್ನು ಸುಪ್ರೀಂ ಕೋರ್ಟ್ ಅರ್ಜಿ ನಿರಾಕರಿಸಿತ್ತು.
64 ವರ್ಷದ ರಾಣಾ ಸದ್ಯ ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್ನಲ್ಲಿ ಬಂಧಿಯಾಗಿದ್ದಾನೆ.
ಈ ಮೊದಲು ಕೂಡ ಅಮೆರಿಕ ಸರ್ಕಾರ ರಾಣಾ ಸರ್ಟಿಯೊರಾರಿ ರಿಟ್ ಅರ್ಜಿ ಮನವಿಯನ್ನು ನಿರಾಕರಿಸುವಂತೆ ಮನವಿ ಮಾಡಿತ್ತು. ಅಮೆರಿಕ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ ಪ್ರೆಕೊಗರ್, ಡಿಸೆಂಬರ್ 16ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಗೂ ಮುನ್ನ ಇದನ್ನೇ ವಾದಿಸಿದ್ದರು. ರಾಣಾನನ್ನು ಈ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರಿಸುವುದರಿಂದ ವಿನಾಯಿತಿ ನೀಡಬಾರದು ಎಂದಿದ್ದರು.
ಪಾಕಿಸ್ತಾನ-ಅಮೆರಿಕ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಸಹಚರ ಎಂದು ರಾಣಾ ಗುರುತಿಸಿಕೊಂಡಿದ್ದು, 26/11ರ ಮುಂಬೈ ದಾಳಿಯ ಪ್ರಮುಖ ಪಿತೂರಿಕೋರರಲ್ಲಿ ಒಬ್ಬನಾಗಿದ್ದಾನೆ. 2008ರಲ್ಲಿ 10 ಮಂದಿ ಪಾಕಿಸ್ತಾನ ಉಗ್ರರು ನಡೆಸಿದ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: 26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ ಸನ್ನಿಹಿತ
ಇದನ್ನೂ ಓದಿ: ಜಾನ್ ಎಫ್. ಕೆನಡಿ, ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಯ ರಹಸ್ಯ ದಾಖಲೆ ಬಹಿರಂಗಕ್ಕೆ ಟ್ರಂಪ್ ಆದೇಶ