ETV Bharat / international

ಜನ್ಮದತ್ತ ಪೌರತ್ವ ರದ್ದು ಮಾಡಿದ ಡೊನಾಲ್ಡ್​ ಟ್ರಂಪ್​ ಆದೇಶಕ್ಕೆ ನ್ಯಾಯಾಧೀಶರಿಂದ ತಾತ್ಕಾಲಿಕ ತಡೆ - BIRTHRIGHT CITIZENSHIP

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಜನ್ಮದತ್ತ ಪೌರತ್ವ ರದ್ದು ಕಾರ್ಯಕಾರಿ ಆದೇಶವನ್ನು ನ್ಯಾಯಾಧೀಶರು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.

donald-trump
ಡೊನಾಲ್ಡ್​ ಟ್ರಂಪ್ (AP)
author img

By ETV Bharat Karnataka Team

Published : Jan 24, 2025, 7:30 PM IST

ಸಿಯಾಟಲ್ , ಅಮೆರಿಕ: ಯುಎಸ್​​ಗೆ ವಲಸೆ ಹೋಗಿ ವಾಸ ಮಾಡುತ್ತಿರುವ ಪೋಷಕರ ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವ ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶವನ್ನು ಫೆಡರಲ್ ನ್ಯಾಯಾಧೀಶರು ಗುರುವಾರ ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ. ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ಮೊದಲ ವಿಚಾರಣೆಯ ಸಮಯದಲ್ಲಿ ಇದು "ಅಸಂವಿಧಾನಿಕ" ಎಂದು ಹೇಳಿದ್ದಾರೆ.

ಸಂವಿಧಾನದ 14 ನೇ ತಿದ್ದುಪಡಿ ಪ್ರಕಾರ ಅಮೆರಿಕದ ನೆಲದಲ್ಲಿ ಜನಿಸಿದವರಿಗೆ ಪೌರತ್ವದ ಭರವಸೆ ನೀಡುತ್ತದೆ. ಆದರೆ ಕಾನೂನುಬಾಹಿರ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ, ವಲಸಿಗರ ಮಕ್ಕಳಿಗೆ ಸಹಜವಾಗಿ ಬರುತ್ತಿದ್ದ ಜನ್ಮತಃ ಪೌರತ್ವವನ್ನು ತಡೆಯುವ ನಿಟ್ಟಿನಲ್ಲಿ ಟ್ರಂಪ್, ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಈ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ, ಪೋಷಕರು ಅಕ್ರಮವಾಗಿ ಅಮೆರಿಕದಲ್ಲಿ ನೆಲೆಸಿದ್ದರೆ, ಫೆಬ್ರವರಿ 19 ರ ನಂತರ ಅವರಿಗೆ ಜನಿಸಿದ ಮಕ್ಕಳಿಗೆ ಇಲ್ಲಿನ ಪೌರತ್ವ ದೊರೆಯುವುದಿಲ್ಲ. ಅಂತಹ ಮಕ್ಕಳಿಗೆ ಪೌರತ್ವವನ್ನು ಗುರುತಿಸುವ ಯಾವುದೇ ಕಾಗದ ಪತ್ರ ನೀಡುವುದನ್ನು ಅಥವಾ ಯಾವುದೇ ರಾಜ್ಯದ ದಾಖಲೆಯನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ.

ಟ್ರಂಪ್​ ಅವರ ಈ ಆದೇಶದಿಂದ ಕಾನೂನು ಬದ್ಧವಾಗಿ ನೆಲಸಿರುವ ವಲಸಿಗರಲ್ಲಿ ಹಲವು ಗೊಂದಲಗಳು ಉಂಟಾಗಿವೆ. ಅಷ್ಟೇ ಅಲ್ಲ ಇದು ಅನೇಕ ಕಾನೂನು ತೊಡಕುಗಳಿಗೂ ಕಾರಣವಾಗಿದೆ. ಈಗ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ವಲಸಿಗರ ಹಕ್ಕುಗಳ ರಕ್ಷಣಾ ಗುಂಪುಗಳು ಅಮೆರಿಕದ ವಿವಿಧ ಕೋರ್ಟ್​ಗಳ ಮೆಟ್ಟಿಲು ಹತ್ತಿದ್ದಾರೆ. ಟ್ರಂಪ್ ಅವರ ಆದೇಶವನ್ನು ಪ್ರಶ್ನಿಸಿ 22 ರಾಜ್ಯಗಳಲ್ಲಿ ಪ್ರಶ್ನಿಸಲಾಗುತ್ತಿದೆ. ವಾಷಿಂಗ್ಟನ್​, ಅರಿಝೋನಾ, ಒರೆಗಾನ್​ ಮತ್ತು ಇಲಿನಾಯಿಸ್​ ಕೋರ್ಟ್​​ ಗಳಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಇದು ಅಸಾಂವಿಧಾನಿಕ ಆದೇಶ ಎಂದ ಕೋರ್ಟ್​; ಈ ಅರ್ಜಿಯ ವಿಚಾರಣೆ ನಡೆಸಿದ ಅಮೆರಿಕದ ವಾಷಿಂಗ್ಟನ್ ಜಿಲ್ಲಾ ನ್ಯಾಯಾಧೀಶ ಜಾನ್ ಕೊಘೆನರ್, "ನಾನು ನಾಲ್ಕು ದಶಕಗಳಿಂದ ಪೀಠದಲ್ಲಿದ್ದು, ಈ ರೀತಿಯಾಗಿ ಸ್ಪಷ್ಟವಾಗಿ ನಿರೂಪಿಸಿರುವ ಇಂತಹ ಮತ್ತೊಂದು ಕೇಸ್ ನನಗೆ ನೆನಪಿಲ್ಲ. ಇದು ಸ್ಪಷ್ಟವಾಗಿ ಅಸಾಂವಿಧಾನಿಕ ಆದೇಶ'' ಎಂದು ಹೇಳಿದರು.

ನ್ಯಾಯಾಧೀಶ ಕೊಘೆನರ್ ಅವರು ಸರ್ಕಾರಿ ಪರ ವಕೀಲ ಬ್ರೆಟ್ ಶುಮೇಟ್ ಅವರಿಗೆ, ನೀವು ಅಧ್ಯಕ್ಷರ ಆದೇಶವನ್ನು ಸಾಂವಿಧಾನಿಕ ಎಂದು ವೈಯಕ್ತಿಕವಾಗಿ ನಂಬುತ್ತೀರಾ? ಎಂದು ಕೇಳಿದರು. "ಇದು ಸಾಂವಿಧಾನಿಕ ಆದೇಶ ಎಂದು ಬಾರ್‌ನ ಸದಸ್ಯರು ಹೇಗೆ ಹೇಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟವಾಗಿದೆ" ಎಂದು ಅವರು ಹೇಳಿದರು.

ಆಗ ಶುಮೇಟ್ ಅವರು, ಈ ಹಿಂದೆ ಅಧ್ಯಕ್ಷರುಗಳು ಜಾರಿಗೊಳಿಸಿದ್ದ ಕಾರ್ಯನಿರ್ವಾಹಕ ಆದೇಶಕ್ಕೆ ಯಾವುದೇ ಮೊಕದ್ದಮೆ ಹೂಡಿರಲಿಲ್ಲ. ಈಗ ಆದೇಶವು ಜಾರಿಗೆ ಬರುವ ಮೊದಲು 14 ದಿನಗಳ ತಾತ್ಕಾಲಿಕ ತಡೆಯಾಜ್ಞೆ ನೀಡಲು ಯಾವುದೇ ಸಕಾರಣ ಇಲ್ಲ, ಏಕೆಂದರೆ ಅಮೆರಿಕ ಸಂವಿಧಾನದ 14 ನೇ ತಿದ್ದುಪಡಿ ಅನ್ವಯವೇ ಕಾನೂನು ಬದ್ಧವಾಗಿ ಈ ಆದೇಶ ಮಾಡಲಾಗಿದೆ ಎಂದು ಪ್ರತಿಪಾದಿಸಿದರು.

ಇದೇ ಅನಿಸಿಕೆಯನ್ನು ಕಾನೂನು ಇಲಾಖೆ ಕೂಡಾ ವಿಚಾರಣೆ ಬಳಿಕ ಹೇಳಿದೆ: "ಯುಎಸ್ ಸಂವಿಧಾನದ 14ನೇ ತಿದ್ದುಪಡಿಯನ್ನು ಸರಿಯಾಗಿ ಅರ್ಥೈಸುತ್ತದೆ" ಎಂದು ಹೇಳಿರುವ ಅಧ್ಯಕ್ಷರ ಕಾರ್ಯನಿರ್ವಾಹಕ ಆದೇಶವನ್ನು "ಬಲವಾಗಿ ಸಮರ್ಥಿಸಿಕೊಳ್ಳುತ್ತದೆ" ಎಂದು ನ್ಯಾಯಾಂಗ ಇಲಾಖೆ ನಂತರ ನೀಡಿದ ತನಮ್ನ ಹೇಳಿಕೆಯಲ್ಲಿ ತಿಳಿಸಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾದೀಶರು ಅಧ್ಯಕ್ಷರ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ, ವಿಚಾರಣೆಯನ್ನ ಫೆಬ್ರವರಿ 6ಕ್ಕೆ ಮುಂದೂಡಿದರು.

ಇದನ್ನೂ ಓದಿ : ಗಡೀಪಾರು ಆತಂಕದಲ್ಲಿ 18,000 ಭಾರತೀಯರು; ಕಾನೂನುಬದ್ಧ ವಾಪಸಾತಿ ಭರವಸೆ ನೀಡಿದ ಜೈಶಂಕರ್​​ - INDIANS FACE DEPORTATION

ETV Bharat Logo

Copyright © 2025 Ushodaya Enterprises Pvt. Ltd., All Rights Reserved.