ಹುಬ್ಬಳ್ಳಿ:ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿಸೊಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲು ಸಂಚಾರವನ್ನು ನಿಯಂತ್ರಣ ಮಾಡಲಾಗುತ್ತಿದೆ. ಆಗಸ್ಟ್ 2, 4, 6, 8, 10, 12 ಮತ್ತು 14ರಂದು ಸೊಲ್ಲಾಪುರ-ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು 07331 ಅನ್ನು ಕುಸುಗಲ್ ಮತ್ತು ಹೆಬಸೂರ ನಿಲ್ದಾಣಗಳ ನಡುವೆ ಕಾಮಗಾರಿ ನಿಮಿತ್ತ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
ಡೆಮು ರೈಲುಗಳ ಸಂಚಾರ ರದ್ದು: ಕಾಲೆಮ್ ಮತ್ತು ಸ್ಯಾನ್ವೊರ್ಡೆಮ್ ನಿಲ್ದಾಣಗಳ ನಡುವಿನ ಸೇತುವೆಯಲ್ಲಿ ಬೇರಿಂ ಬದಲಾವಣೆಗೆ ಲೈನ್ ಬ್ಲಾಕ್ ಹಮ್ಮಿಕೊಳ್ಳುವುದರಿಂದ, ಈ ಕೆಳಗಿನ ರೈಲುಗಳನ್ನು ಆಗಸ್ಟ್ 22ರಂದು ರದ್ದುಗೊಳಿಸಲಾಗುತ್ತಿದೆ.