ETV Bharat / bharat

ಶ್ರೀಲಂಕಾಕ್ಕೆ ಪ್ರವಾಸ ಹೋಗುವ ಪ್ಲ್ಯಾನ್‌ ಇದೆಯೇ? ನಿಮಗಿದು ಸಿಹಿಸುದ್ದಿ! - Sri Lanka Visa Free Entry - SRI LANKA VISA FREE ENTRY

ಶ್ರೀಲಂಕಾ ಸದ್ಯ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಕೆ ಕಾಣುತ್ತಿದೆ. ಆ ದೇಶಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯದ ಮೂಲ. ಹೀಗಾಗಿ, ಭಾರತ ಸೇರಿದಂತೆ 35 ದೇಶಗಳಿಗೆ ಇದೀಗ ವೀಸಾಮುಕ್ತ ಪ್ರವಾಸದ ಅವಕಾಶ ನೀಡಿದೆ.

Sri Lanka Announces Visa-Free Entry For Indians
ಶ್ರೀಲಂಕಾ (ETV Bharat ಸಂಗ್ರಹ ಚಿತ್ರ)
author img

By ETV Bharat Lifestyle Team

Published : Oct 4, 2024, 3:32 PM IST

ಹೈದರಾಬಾದ್​: 2019ರ ಈಸ್ಟರ್ ಭಾನುವಾರ ನಡೆದ ಬಾಂಬ್ ದಾಳಿ ಹಾಗು ಮತ್ತಿತರ ಅಹಿತಕರ ಘಟನೆಗಳಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮ ಗಮನಾರ್ಹ ಕುಸಿತ ಕಂಡಿತ್ತು. ಸದ್ಯ ದೇಶ ಆರ್ಥಿಕ ಬಿಕ್ಕಟ್ಟಿನಿಂದು ಚೇತರಿಕೆ ಕಾಣುತ್ತಿದ್ದು, ಭಾರತ ಸೇರಿದಂತೆ 35 ದೇಶಗಳಿಗೆ ವೀಸಾಮುಕ್ತ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಈ ನಿರ್ಧಾರವು ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಆಕರ್ಷಿಸಲಿದೆ.

ಕಳೆದ ತಿಂಗಳು ಶ್ರೀಲಂಕಾ ತನ್ನ ಪೋರ್ಟಲ್​ ಸಮಸ್ಯೆಯಿಂದಾಗಿ ಆನ್​ಲೈನ್​ ವೀಸಾ ಸೇವೆಯನ್ನು ನಿಲ್ಲಿಸಿತ್ತು. ಇದರ ಪರಿಣಾಮ, ಅನೇಕರು ವೀಸಾ ಪಡೆಯಲು ಬಹಳಷ್ಟು ಸಮಯ ಕಾಯಬೇಕಾಗಿತ್ತು. ಇದೀಗ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಲು ಕಡ್ಡಾಯ ವೀಸಾ ನಿರ್ಬಂಧವನ್ನು ತೆಗೆದುಹಾಕಿದೆ. ಭಾರತೀಯರು ವೀಸಾಕ್ಕೆ ಕಾಯದೇ ವರ್ಷದ ಯಾವುದೇ ಸಮಯದಲ್ಲೂ ಪ್ರವಾಸ ಕೈಗೊಳ್ಳಬಹುದಾಗಿದೆ.

ಭಾರತದ ಜೊತೆಗೆ ಯುಕೆ, ಯುಎಸ್​ಎ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಚೀನಾ, ರಷ್ಯಾ, ದಕ್ಷಿಣ ಕೋರಿಯಾ ಮತ್ತು ಜಪಾನ್​ ಸೇರಿದಂತೆ ಒಟ್ಟು 35 ದೇಶಗಳಿಗೆ ವೀಸಾಮುಕ್ತ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರೆ ತಿಳಿಸಿದ್ದಾರೆ.

ಇದರಿಂದಾಗಿ, ಪ್ರವಾಸಿಗರು ಈ ಹಿಂದೆ ಶ್ರೀಲಂಕಾ ವಿಧಿಸಿದ್ದ 25 ಡಾಲರ್​​ ವೆಚ್ಚವಿಲ್ಲದೆ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು. ವೀಸಾಮುಕ್ತ ನೀತಿ 2024ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.

ಈ ದೇಶಗಳಿಗೆ ವೀಸಾ ಮುಕ್ತ ಪ್ರವೇಶ:

ಏಷ್ಯಾ: ಚೀನಾ, ಭಾರತ, ಇಂಡೋನೇಷ್ಯಾ, ಜಪಾನ್​, ಮಲೇಷ್ಯಾ, ನೇಪಾಳ​ ಮತ್ತು ಥೈಲ್ಯಾಂಡ್​

ಯುರೋಪ್​: ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್​, ಫ್ರಾನ್ಸ್​, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್​, ಪೋಲೆಂಡ್​, ಸ್ಪೇನ್​, ಸ್ವೀಡಲ್​ ಮತ್ತು ಸ್ವಿಟ್ಜರ್ಲೆಂಡ್. ​

ಉತ್ತರ ಅಮೆರಿಕ: ಕೆನಡಾ, ಯುನೈಟೆಡ್​ ಕಿಂಗ್​ಡಮ್​, ಯುನೈಟೆಡ್​ ಸ್ಟೇಟ್ಸ್​​

ಮಧ್ಯಪ್ರಾಚ್ಯ: ಸೌದಿ ಅರೇಬಿಯಾ, ಯುನೈಟೆಡ್​​ ಅರಬ್​ ಎಮಿರೇಟ್ಸ್​

ಇತರೆ ದೇಶಗಳು: ಆಸ್ಟ್ರೇಲಿಯಾ, ಬಹರೈನ್​, ಬೆಲಾರುಸ್​, ಇಸ್ರೇಲ್​, ನ್ಯೂಜಿಲ್ಯಾಂಡ್​, ಒಮಾನ್​, ಕತಾರ್​ ಮತ್ತು ದಕ್ಷಿಣ ಕೊರಿಯಾ

ಇದನ್ನೂ ಓದಿ: ದಸರಾ ರಜೆಯಲ್ಲಿ ಸುದೀರ್ಘ ಪ್ರವಾಸಕ್ಕೆ ಯೋಜಿಸುತ್ತಿದ್ದೀರಾ?: ಅತ್ಯುತ್ತಮ ಪ್ರವಾಸಿ ತಾಣಗಳು ಇಲ್ಲಿವೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.