NATURAL METHODS TO CONTROL DIABETES: ಸಕ್ಕರೆ ಕಾಯಿಲೆ ಗುಣಪಡಿಸಲಾಗದ ಕಾಯಿಲೆಯಾಗಿದೆ. ಒಮ್ಮೆ ಈ ಕಾಯಿಲೆ ಬಂದರೆ ಆ ವ್ಯಕ್ತಿಯ ಬದುಕಿರುವವರೆಗೂ ಇರುತ್ತದೆ. ಮಧುಮೇಹಿಗಳು ತಮ್ಮ ಆಹಾರ ಕ್ರಮ ಹಾಗೂ ಜೀವನಶೈಲಿ ಬಗ್ಗೆ ವಿಶೇಷವಾದ ಕಾಳಜಿ ವಹಿಸುವುದು ಬಹುಮುಖ್ಯವಾಗಿದೆ. ಮಧುಮೇಹಿಗಳು ಕೆಲವು ಎಚ್ಚರಿಕೆ ಕ್ರಮಗಳನ್ನು ಪಾಲಿಸದಿದ್ದರೆ, ಈ ರೋಗವು ಅನೇಕ ಆರೋಗ್ಯದ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ. ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಣದಲ್ಲಿ ಇಲ್ಲದೇ ಹೋದರೆ, ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಯು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮಧುಮೇಹಿಗಳು ಆಹಾರ ಕ್ರಮದ ಬಗ್ಗೆ ಮಾತ್ರವಲ್ಲದೇ ವ್ಯಾಯಾಮ ಹಾಗೂ ವಾಕಿಂಗ್ ಇಲ್ಲವೇ ಯೋಗ ಸೇರಿದಂತೆ ಇತರ ಚಟುವಟಿಕೆಗಳ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತದೆ. ಇದೀಗ ನಾವು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದರೆ, ನೈಸರ್ಗಿಕವಾಗಿ ಹೇಗೆ ನಿಯಂತ್ರಣ ಮಾಡಬಹುದು ಎಂಬುದನ್ನು ಅರಿತುಕೊಳ್ಳೋಣ.
londondiabetes.com ಪ್ರಕಾರ, ರಕ್ತದಲ್ಲಿನ ಶುಗರ್ ಲೆವಲ್ ಹೆಚ್ಚಾದರೆ, ನೈಸರ್ಗಿಕವಾಗಿ ನಿಯಂತ್ರಿಸಲು ಮಧುಮೇಹಿಗಳು ಈ ಸರಳ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
ಸಾಕಷ್ಟು ನೀರು ಸೇವಿಸಬೇಕು: ರಕ್ತದಲ್ಲಿನ ಶುಗರ್ ಲೆವಲ್ ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯಬೇಕಾಗುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮೂತ್ರಪಿಂಡಗಳು ಹೆಚ್ಚುವರಿ ಸಕ್ಕರೆ ಪ್ರಮಾಣವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ನಿಯಮಿತವಾಗಿ ವ್ಯಾಯಾಮ: ಪ್ರತಿನಿತ್ಯ ಕೆಲವು ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ರಕ್ತದಲ್ಲಿನ ಶುಗರ್ ಲೆವಲ್ನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಊಟ ಮಾಡಿದ ನಂತರ 15 ರಿಂದ 30 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕಾಗುತ್ತದೆ. ಹಗುರವಾದ ತೂಕ ಎತ್ತುವ ವ್ಯಾಯಾಮ, ಸೈಕ್ಲಿಂಗ್, ಈಜು ಹಾಗೂ ಯೋಗ ಮಾಡಬಹುದು.
ಫೈಬರ್ ಭರಿತ ಆಹಾರ: ಫೈಬರ್ ಭರಿತ ಆಹಾರ ಸೇವನೆ ಮಾಡುವುದರಿಂದ ದೇಹವು ಶುಗರ್ ಹೀರಿಕೊಳ್ಳುವಿಕೆಯನ್ನು ನಿಧಾನವಾಗಿಸುತ್ತದೆ. ನಿಮ್ಮ ಆಹಾರದಲ್ಲಿ ತರಕಾರಿಗಳು, ದ್ವಿದಳ ಧಾನ್ಯಗಳು ಹಾಗೂ ಧಾನ್ಯಗಳನ್ನು ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಕಾರ್ಬೋಹೈಡ್ರೇಟ್ ಸೇವನೆ: ಒಂದುವೇಳೆ ನಿಮಗೆ ಟೈಪ್ 2 ಮಧುಮೇಹ ಇದ್ದರೆ, ನಿಮ್ಮ ಕಾರ್ಬೋಹೈಡ್ರೇಟ್ ಅನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡುತ್ತೀರಿ ಎಂಬುದರ ಬಗ್ಗೆ ಗಮನಹರಿಸಬೇಕಾಗುತ್ತದೆ. ಇದರಿಂದ ದಿನವಿಡೀ ನೀವು ಎಷ್ಟು ಕಾರ್ಬೋಹೈಡ್ರೇಟ್ ಸೇವಿಸುತ್ತಿದ್ದೀರಿ ಎಂಬುದು ನಿಮಗೆ ಸರಿಯಾಗಿ ತಿಳಿಸುತ್ತದೆ.
ಸಾಕಷ್ಟು ನಿದ್ರೆ ಅವಶ್ಯ: ಸರಿಯಾದ ನಿದ್ರೆ ಮಾಡುವುದರಿಂದ ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ. ನೀವು ಚೆನ್ನಾಗಿ ನಿದ್ರೆ ಮಾಡದೇ ಇದ್ದರೆ, ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಮಧುಮೇಹಿಗಳು ತಮ್ಮ ನಿದ್ರೆಯ ಬಗ್ಗೆ ಅಗತ್ಯವಾದ ಕಾಳಜಿ ವಹಿಸಬೇಕಾಗುತ್ತದೆ.
ಈ ಸಕ್ಕರೆ ಕಾಯಿಲೆಯನ್ನು ಸಕಾಲದಲ್ಲಿ ಪತ್ತೆ ಮಾಡದರೆ, ಜೀವನಶೈಲಿಯ ಬದಲಾವಣೆ ಹಾಗೂ ವೈದ್ಯಕೀಯ ಆರೈಕೆಯಿಂದ ಇದನ್ನು ಗುಣಪಡಿಸಬಹುದು ಎಂದು ಸಲಹಾ ವೈದ್ಯ ಡಾ.ಆಮಿರ್ ಹುಸೇನ್ ಎಂದು ಭರವಸೆ ನೀಡುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ ಕಾರಣ, ನರ ಕೋಶಗಳು ಹಾನಿಯಾಗುತ್ತದೆ. ಇದು ಸಾಮಾನ್ಯವಾಗಿ ಕಾಲುಗಳ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡತ್ತದೆ. ಕೆಲವರಲ್ಲಿ ಈ ಕಾಯಲೆ ಲಕ್ಷಣಗಳು ಸೌಮ್ಯವಾಗಿರುತ್ತವೆ. ಇನ್ನು ಕೆಲವರಿಗೆ ನೋವು, ಅಶಕ್ತಿ ಅನಿಸುತ್ತದೆ ಹಾಗೂ ಅದು ಜೀವಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆಯು ಇದೆ ಎಂದು ಅವರು ತಿಳಿಸುತ್ತಾರೆ.
ಸಕ್ಕರೆ ಕಾಯಿಲೆಯ ಪ್ರಮುಖವಾಗಿ ಕಂಡುಬರುವ ಲಕ್ಷಣಗಳೆಂದ್ರೆ, ಕಾಲುಗಳಲ್ಲಿ ನೋವು ಹಾಗೂ ಕಾಲುಗಳ ಮರಗಟ್ಟುವಿಕೆ ಸೇರಿವೆ. ಈ ಸಮಸ್ಯೆ ಹೆಚ್ಚು ಗಂಭೀರವಾಗಿದ್ದರೆ, ಜೀರ್ಣಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಮೂತ್ರ ವಿಸರ್ಜನೆಯ ತೊಂದರೆಗಳು, ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ತೊಂದರೆಗಳು ಆಗಬಹುದು. ಚಿಕಿತ್ಸೆಗಾಗಿ ಇನ್ಸುಲಿನ್ ಹಾಗೂ ನೋವು ನಿವಾರಕ ಔಷಧಿಗಳನ್ನು ಬಳಸಲಾಗುತ್ತದೆ. ಕೆಲವು ಲಕ್ಷಣಗಳು ನಿಮ್ಮನ್ನು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://www.cdc.gov/diabetes/treatment/index.html
- https://www.webmd.com/diabetes/diabetes-neuropathy
- https://londondiabetes.com/news-and-events/curing-diabetes-naturally-without-medication/
ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.