ETV Bharat / snippets

ಅಸ್ಸಾಂನ ದಿಬ್ರುಘಡದಿಂದ ಹುಬ್ಬಳ್ಳಿಗೆ ಒನ್​ವೇ ವಿಶೇಷ ಎಕ್ಸ್​ಪ್ರೆಸ್ ರೈಲು

author img

By ETV Bharat Karnataka Team

Published : 11 hours ago

hubballi
ಹುಬ್ಬಳ್ಳಿ ರೈಲು ನಿಲ್ದಾಣ (ETV Bharat)

ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಗಡಿನಾಡು ರೈಲ್ವೆಯು ಅಸ್ಸಾಂನ ದಿಬ್ರುಗಢದಿಂದ ಹುಬ್ಬಳ್ಳಿಗೆ ಏಕಮುಖ ವಿಶೇಷ ಎಕ್ಸ್​ಪ್ರೆಸ್ ರೈಲನ್ನು(07359) ಓಡಿಸಲಿದೆ. ಅ.5ರಂದು (ಶನಿವಾರ) ಮಧ್ಯಾಹ್ನ 01:30ಕ್ಕೆ ದಿಬ್ರುಗಢದಿಂದ ಹೊರಡುವ ರೈಲು, ಅ.8ರಂದು ಬೆಳಗ್ಗೆ 09:00 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.

ರೈಲು ಹತ್ತು ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್, ಮತ್ತು ಎಸ್ಎಲ್ಆರ್/ಡಿ-2 ಸೇರಿದಂತೆ ಒಟ್ಟು 14 ಬೋಗಿಗಳನ್ನು ಒಳಗೊಂಡಿರಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಗಮಧ್ಯೆ, ನ್ಯೂ ಟಿನ್ಸುಕಿಯಾ, ಮಹರ್ಕಟಿಯಾ, ಸಿಮಲುಗುರಿ ಜಂಕ್ಷನ್​, ಮರಿಯಾನಿ ಜಂಕ್ಷನ್, ಫರ್ಕಟಿಂಗ್ ಜಂಕ್ಷನ್, ದಿಮಾಪುರ್, ದಿಫು, ಲುಮ್ಡಿಂಗ್ಜಂ, ಹೊಜಾಯಿ, ಚಾಪರ್ಮುಖ್ ಜಂಕ್ಷನ್, ಗುಂಟೂರು ಜಂಕ್ಷನ್, ನರಸರಾವ್ಪೇಟೆ, ವಿನುಕೊಂಡ, ಮಾರ್ಕಾಪುರ ರೋಡ್, ಗಿಡ್ಡಲೂರು, ದಿಗುವಮೆಟ್ಟಾ, ನಂದ್ಯಾಲ್, ಧೋಣೆ ಜಂಕ್ಷನ್, ಗುಂತಕಲ್ ಜಂಕ್ಷನ್, ಬಳ್ಳಾರಿ ಜಂಕ್ಷನ್, ತೋರಣಗಲ್ಲು, ಹೊಸಪೇಟೆ ಜಂಕ್ಷನ್, ಕೊಪ್ಪಳ ಮತ್ತು ಗದಗ ನಿಲ್ದಾಣ ಸೇರಿ ವಿವಿಧೆಡೆ ನಿಲುಗಡೆ ಇರಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.