ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದಳಪತಿ 69'. ತಾತ್ಕಾಲಿಕ ಶೀರ್ಷಿಕೆಯುಳ್ಳ ಈ ಸಿನಿಮಾಗಿಂದು ಚಾಲನೆ ಸಿಕ್ಕಿದೆ. ಚೆನ್ನೈನಲ್ಲಿ ಭವ್ಯ ಪೂಜಾ ಸಮಾರಂಭದೊಂದಿಗೆ ಸಿನಿಮಾ ಸೆಟ್ಟೇರಿತು.
'ದಳಪತಿ 69' ವಿಜಯ್ ಅವರ ಸಿನಿಮಾ ವೃತ್ತಿಜೀವನದಲ್ಲೇ ಅತ್ಯಂತ ಮಹತ್ವದ ಚಿತ್ರಗಳಲ್ಲಿ ಒಂದಾಗುವ ಭರವಸೆಯಿದೆ. ಏಕೆಂದರೆ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಮುನ್ನ ಬರುತ್ತಿರುವ ನಟನ ಚಿತ್ರವಿದು. ಅಲ್ಲದೇ ವಿಜಯ್ ಬಣ್ಣ ಹಚ್ಚುತ್ತಿರುವ ಕೊನೆ ಸಿನಿಮಾ ಆಗಿದೆ.
ಶುಕ್ರವಾರದ ಅದ್ಧೂರಿ ಸಮಾರಂಭಕ್ಕೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಸಾಕ್ಷಿಯಾಗಿದ್ದರು. ಸಿನಿಮಾದ ನಾಯಕ ನಟ ವಿಜಯ್ ಅವರ ಉಪಸ್ಥಿತಿ ಪ್ರೋಗ್ರಾಮ್ನ ಹೈಲೆಟ್. ಸೆಟ್‌ಗೆ ಹೋಗುವ ಮುನ್ನ ಪ್ರೊಡಕ್ಷನ್ ಟೀಮ್ನ ಪ್ರಮುಖ ಸದಸ್ಯರೊಂದಿಗೆ ಒಂದು ಫಾರ್ಮಲ್ ಮೀಟಿಂಗ್ ನಡೆಸಿದರು.
ಚಿತ್ರತಂಡದ ಮೂಲವೊಂದು ಮಾತನಾಡಿ, "ದಳಪತಿ 69 ಪೂಜೆ ಸುಗಮವಾಗಿ ಸಾಗಿತು. ಸಮಾರಂಭ ಮುಕ್ತಾಯಗೊಂಡಿದೆ. ಈಗಾಗಲೇ ಪ್ಲ್ಯಾನ್ ಮಾಡಿರುವಂತೆ ಚಿತ್ರೀಕರಣ ನಾಳೆ ಶುರುವಾಗಲಿದೆ. ಅಭಿಮಾನಿಗಳು ಇಂದು ಸಂಜೆಯೊಳಗೆ ಸಮಾರಂಭದ ಗ್ಲಿಂಪ್ಸ್" ನೋಡಬಹುದೆಂದು ತಿಳಿಸಿದ್ದರು.
Pictures layum seri adha paathutu iruka unga face layum seri HAPPY SMILES irukunu we know ♥️#Thalapathy69Poojai stills SET 1 idhoo 🔥
— KVN Productions (@KvnProductions) October 4, 2024
Updates inum mudiyala.. SET 2 incoming 💥#Thalapathy @actorvijay sir #HVinoth @thedeol @prakashraaj @menongautham #Priyamani @itsNarain… pic.twitter.com/FW8l2G1yNJ
ಇಂದಿನ ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ದಳಪತಿ 69ರ ಚಿತ್ರೀಕರಣ ನಾಳೆ ಶುರುವಾಗಲಿದೆ. ಪೂಜಾ ಹೆಗ್ಡೆ ಜೊತೆಗೆ ವಿಜಯ್ ಅವರನ್ನೊಳಗೊಂಡ ಡ್ಯಾನ್ಸ್ ಸೀನ್ ಮೂಲಕ ಶೂಟಿಂಗ್ ಪ್ರಾರಂಭವಾಗಲಿದೆ. ಹಾಡಿನ ಸೀಕ್ವೆನ್ಸ್‌ಗಾಗಿ ಕೇರಳದ ಪಯ್ಯನೂರಿನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ.
ಇದನ್ನೂ ಓದಿ: ಆಕಸ್ಮಿಕ ಗುಂಡೇಟು; ನಟ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ - Actor Govinda Discharged
SET 2 is here 🔥
— KVN Productions (@KvnProductions) October 4, 2024
Paththala dhane? SET 3 erakiruvoma?#Thalapathy69Poojai#Thalapathy @actorvijay sir #HVinoth @thedeol @prakashraaj @menongautham #Priyamani @itsNarain @hegdepooja #MamithaBaiju @anirudhofficial @Jagadishbliss @LohithNK01 @sathyaDP @ActionAnlarasu @Selva_ArtDir… pic.twitter.com/VKFV5MPTZE
'ದಳಪತಿ 69' ಪ್ರೊಜೆಕ್ಟ್ ಅನ್ನು ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬರಲಿದೆ. ವಿಜಯ್, ರಾಜಕೀಯಕ್ಕೆ ಸಂಪೂರ್ಣವಾಗಿ ಎಂಟ್ರಿ ಕೊಡುವ ಮೊದಲು ಬರುತ್ತಿರುವ ಮತ್ತು ಅವರ ಕೊನೆಯ ಚಿತ್ರ. ಹೆಚ್.ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್ ಮತ್ತು ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜಗದೀಶ್ ಪಳನಿಸಾಮಿ ಮತ್ತು ಲೋಹಿತ್ ಎನ್.ಕೆ. ಚಿತ್ರದ ಸಹ ನಿರ್ಮಾಪಕರು.
SET 3 um erakiyachu 🔥
— KVN Productions (@KvnProductions) October 4, 2024
SET 4 🔜#Thalapathy69Poojai#Thalapathy @actorvijay sir #HVinoth @thedeol @prakashraaj @menongautham #Priyamani @itsNarain @hegdepooja @_mamithabaiju @anirudhofficial @Jagadishbliss @LohithNK01 @sathyaDP @ActionAnlarasu @Selva_ArtDir @PradeepERagav… pic.twitter.com/OPKV6cLn33
ಇದನ್ನೂ ಓದಿ: ಪ್ರೇಕ್ಷಕರೊಂದಿಗೆ ಕುಣಿದು ಕುಪ್ಪಳಿಸಿದ ರಾಧಿಕಾ ಕುಮಾರಸ್ವಾಮಿ: ಅಘೋರಿಯಾಗಿ ಮನಗೆದ್ದ ನಟಿ - Bhairadevi
SET 4 ♥️
— KVN Productions (@KvnProductions) October 4, 2024
Neenga kekrathu elame onnu onna coming bruh 😁#Thalapathy69Poojai#Thalapathy @actorvijay sir #HVinoth @thedeol @prakashraaj @menongautham #Priyamani @itsNarain @hegdepooja @_mamithabaiju @anirudhofficial @Jagadishbliss @LohithNK01 @sathyaDP @ActionAnlarasu… pic.twitter.com/6tBmm0gZY2
ನಾಳೆ ಶೂಟಿಂಗ್ ಶುರುವಾಗಲಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಕಲಾವಿದರ ಹೆಸರುಗಳು ಘೋಷಣೆಯಾದವು. ಚಿತ್ರ ನಿರ್ಮಾಪಕರು ಒಬ್ಬರಾದ ಬಳಿಕ ಒಬ್ಬರಂತೆ ನಟ ನಟಿಯರ ಹೆಸರನ್ನು ಅನೌನ್ಸ್ ಮಾಡಿವೆ. ಬಾಲಿವುಡ್ ನಟ ಬಾಬಿ ಡಿಯೋಲ್ ಹೆಸರು ಮೊದಲು ಘೋಷಣೆಯಾಯಿತು. ನಂತರ, ಪೂಜಾ ಹೆಗ್ಡೆ ಸೇರಿದಂತೆ ಹಲವರ ಹೆಸರು ಅನೌನ್ಸ್ ಆಗಿವೆ. ನಾಳೆಯಿಂದ ಶೂಟಿಂಗ್ ಶುರುವಾಗಲಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.