ETV Bharat / lifestyle

'ಪ್ಯಾಲೇಸ್ ಆನ್ ವೀಲ್ಸ್‌' ರಾಯಲ್ ಟ್ರೈನ್ ಜರ್ನಿ: ಐಷಾರಾಮಿ ಪ್ರಯಾಣದ ಅದ್ಭುತ ಅನುಭವ - Palace on Wheels Train Journey - PALACE ON WHEELS TRAIN JOURNEY

ಪ್ಯಾಲೇಸ್ ಆನ್ ವೀಲ್ಸ್ ಭಾರತದ ಅತ್ಯಂತ ಹಳೆಯ ಐಷಾರಾಮಿ ರೈಲು ರಾಜಸ್ಥಾನದ ರಾಜಮನೆತನದ ಭವ್ಯತೆ ಪರಂಪರೆಯನ್ನು ತೋರ್ಪಡಿಸುತ್ತದೆ. ಐಷಾರಾಮಿ ರೈಲಿನಲ್ಲಿ ಪ್ರಯಾಣ ಮಾಡಿದರೆ ಖುಷಿಯ ಜೊತೆಗೆ ಅದ್ಭುತ ಅನುಭವವೂ ನಿಮಗೆ ದೊರೆಯುತ್ತದೆ.

PALACE IN WHEELS  LUXURY TRAIN  ROYAL TRAIN OF INDIA  PALACE ON WHEELS TRAIN
'ಪ್ಯಾಲೇಸ್ ಆನ್ ವೀಲ್ಸ್‌' ರಾಯಲ್ ಟ್ರೈನ್ (ANI)
author img

By ETV Bharat Lifestyle Team

Published : Oct 4, 2024, 5:36 PM IST

Updated : Oct 4, 2024, 6:18 PM IST

Palace on Wheels Train Journey: ರಜಾದಿನಗಳು ಮತ್ತು ಹಬ್ಬಗಳ ಸೀಸನ್ ಪ್ರಾರಂಭವಾಗಿದೆ. ನೀವು ಎಲ್ಲಿಯಾದರೂ ಪ್ರವಾಸ ಕೈಗೊಳ್ಳಲು ಪ್ಲಾನ್​ ಮಾಡಿದ್ದೀರಾ, ಹಾಗಾದ್ರೆ ಈ ಸ್ಟೋರಿಯು ನಿಮಗೋಸ್ಕರವೇ ಆಗಿದೆ. ಭಾರತದ ಅತ್ಯಂತ ಹಳೆಯ ಪರಂಪರೆಯ ರೈಲುಗಳಲ್ಲಿ ಒಂದಾದ 'ಪ್ಯಾಲೇಸ್ ಆನ್ ವೀಲ್ಸ್' ತನ್ನ ಇದೀಗ ಟೂರ್​ ಪ್ಯಾಕೇಜ್​ನ್ನು ಪ್ರಾರಂಭಿಸಲಾಗಿದೆ. ಈ ರಾಯಲ್ ರೈಲು ಪ್ರಯಾಣಿಕರಿಗೆ ಮರೆಯಲಾಗದ ಅನುಭವ ನೀಡುತ್ತದೆ.

ಈ ಬಾರಿ ಪ್ಯಾಲೇಸ್ ಆನ್ ವೀಲ್ಸ್ ಅನ್ನು ರಾಯಲ್ ರೀತಿಯಲ್ಲಿ ಅಲಂಕರಿಸಲಾಗಿದೆ. ಈ ರಾಯಲ್ ರೈಲನ್ನು ಅಲಂಕರಿಸಲು ಕೋಟಿಗಳನ್ನು ಖರ್ಚು ಮಾಡಲಾಗಿದೆ. ಪ್ರಯಾಣಿಕರು ಇದರಲ್ಲಿ ಮಾಡುವ ಪ್ರವಾಸದ ಸವಿಯಾದ ನೆನಪುಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಈಗ ಪ್ಯಾಲೇಸ್ ಆನ್ ವೀಲ್ಸ್ ರೈಲು ಹೆಚ್ಚು ರಾಯಲ್ ರೈಲು ಆಗಿದೆ. ಪ್ರತಿವರ್ಷವೂ ಜನರು ರೈಲಿನಲ್ಲಿ ಪ್ರಯಾಣಿಸಲು ಕುತೂಹಲದಿಂದ ಕಾಯುತ್ತಾರೆ.

ನವದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭ: ರಾಜಸ್ಥಾನದ ಅತ್ಯಂತ ರಾಯಲ್ ಟ್ರೈನ್ ಪ್ಯಾಲೇಸ್ ಆನ್ ವೀಲ್ಸ್‌ನ ಪ್ರಯಾಣವು ದೆಹಲಿಯಿಂದ ಪ್ರಾರಂಭವಾಗಲಿದೆ. ಎಂಟು ದಿನಗಳ ಪ್ರಯಾಣವು ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದ ಮೂಲಕ ಹಾದುಹೋಗುತ್ತದೆ. ಈ ಪ್ರತಿಷ್ಠಿತ ರೈಲು ತನ್ನ ಕಾಲೋಚಿತ ಪ್ರಯಾಣವನ್ನು ನವದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭಿಸಿದೆ. ರೈಲಿನಲ್ಲಿರುವ ಪ್ರಯಾಣಿಕರು ಜೈಪುರ, ಜೈಸಲ್ಮೇರ್, ಜೋಧ್‌ಪುರ, ಉದಯಪುರ, ಭರತ್‌ಪುರ ಮತ್ತು ಆಗ್ರಾ ಸೇರಿದಂತೆ ಅನೇಕ ಸ್ಥಳಗಳಿಗೆ ಪ್ರಯಾಣಿಸಲಿದ್ದಾರೆ. ನಂತರ ಅವರು ತಮ್ಮ ಮೂಲ ನಿಲ್ದಾಣವಾದ ದೆಹಲಿಗೆ ಹಿಂತಿರುಗುತ್ತಾರೆ.

ಟಿಕೆಟ್ ದರ ಎಷ್ಟು ಗೊತ್ತಾ?: ಭಾರತೀಯ ರೈಲ್ವೆಯ ಪ್ರಮುಖ ರೈಲು ಪ್ಯಾಲೇಸ್ ಆನ್ ವೀಲ್ಸ್‌ನ ಟಿಕೆಟ್ ಬೆಲೆಗಳು ಕಾಲೋಚಿತ ಬೇಡಿಕೆ ಮತ್ತು ವರ್ಗವನ್ನು ಆಧರಿಸಿವೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಪೀಕ್ ಸೀಸನ್‌ನಲ್ಲಿ, ಪ್ರೆಸಿಡೆನ್ಶಿಯಲ್ ಸೂಟ್‌ನ ಟಿಕೆಟ್ ದರವು ಪ್ರತಿ ರಾತ್ರಿಗೆ ₹2,91,330 (ಪ್ರತಿ ಕ್ಯಾಬಿನ್‌ಗೆ) ಆಗಿದ್ದರೆ, ಒಂದೇ ಆಕ್ಯುಪೆನ್ಸಿಗೆ (ಪ್ರತಿ ಪ್ರಯಾಣಿಕರಿಗೆ) ₹1,24,583, ಇಬ್ಬರು ವ್ಯಕ್ತಿಗಳಿಗೆ (ಪ್ರತಿ ವ್ಯಕ್ತಿಗೆ) ₹81,008.

PALACE IN WHEELS  LUXURY TRAIN  ROYAL TRAIN OF INDIA  PALACE ON WHEELS TRAIN
ಊಟದ ಸ್ಥಳ (IRCTC)

ಐಷಾರಾಮಿ ಕ್ಯಾಬಿನ್: ರೈಲಿನಲ್ಲಿ 14 ಐಷಾರಾಮಿ ಡಿಲಕ್ಸ್ ಕೋಚ್‌ಗಳಿವೆ. ಪ್ರತಿಯೊಂದಕ್ಕೂ ಹಿಂದಿನ ರಜಪೂತ ಸಾಮ್ರಾಜ್ಯದ ಹೆಸರನ್ನು ಇಡಲಾಗಿದೆ. ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ಅಲಂಕರಿಸಲಾಗಿದೆ. ಈ ಕ್ಯಾಬಿನ್‌ಗಳು ಹವಾನಿಯಂತ್ರಣ, ವೈ-ಫೈ, ಸ್ನಾನಗೃಹಗಳು ಮತ್ತು ಶ್ರೀಮಂತ ಸಾಂಪ್ರದಾಯಿಕ ಒಳಾಂಗಣಗಳಂತಹ ಆಧುನಿಕ ಸೌಕರ್ಯಗಳನ್ನು ಹೊಂದಿವೆ. ಪ್ರತಿ ಕ್ಯಾಬಿನ್ ಸೊಗಸಾದ ಪೀಠೋಪಕರಣಗಳು, ರೇಷ್ಮೆ ಪರದೆಗಳು ಮತ್ತು ಪ್ರೀಮಿಯಂ ಹಾಸಿಗೆ ಸೇರಿದಂತೆ ರಾಜಮನೆತನದ ಅಲಂಕಾರವನ್ನು ಹೊಂದಿದೆ.

ಪ್ಯಾಲೇಸ್ ಆನ್ ವೀಲ್ಸ್‌ (IRCTC)

ಎರಡು ರೆಸ್ಟೋರೆಂಟ್‌: ರೈಲಿನಲ್ಲಿ ಮಹಾರಾಜ ಮತ್ತು ಮಹಾರಾಣಿ ಎಂಬ ಎರಡು ಊಟದ ರೆಸ್ಟೋರೆಂಟ್​ಗಳಿವೆ. ಇದು ರಾಜಸ್ಥಾನಿ, ಕಾಂಟಿನೆಂಟಲ್, ಇಂಡಿಯನ್, ಚೈನೀಸ್ ಮತ್ತು ಇತರ ವಿವಿಧ ಪ್ರಕಾರ ಆಹಾರಗಳು ಇದರೊಳಗೆ ಲಭ್ಯವಿದೆ. ರಾಯಲ್ ಔತಣಕೂಟ, ಟೇಬಲ್ ಸೆಟ್ಟಿಂಗ್ಸ್​ ಮತ್ತು ಪರಿಣಿತ ಬಾಣಸಿಗರು ತಯಾರಿಸಿದ ರುಚಿಕರವಾದ ಆಹಾರದೊಂದಿಗೆ ಹಳೆಯ ಕಾಲದ ನೆನಪುಗಳನ್ನು ಮರಳಿಸುತ್ತದೆ.

ಐಷಾರಾಮಿ ಕ್ಯಾಬಿನ್ (IRCTC)

ಬಾರ್ ಮತ್ತು ವಿಶ್ರಾಂತಿ ಕೊಠಡಿ: ಕೆಲವು ಅತ್ಯುತ್ತಮ ಸ್ಪಿರಿಟ್‌ಗಳನ್ನು ಸೇವಿಸಲು ಬಯಸುವವರಿಗೆ, ರೈಲು 'ದಿ ರಾಯಲ್ ಬಾರ್' ಅನ್ನು ಒಳಗೊಂಡಿದೆ. ಇದು ಸ್ಪಿರಿಟ್‌ಗಳು, ವೈನ್‌ಗಳು ಮತ್ತು ಕಾಕ್‌ಟೇಲ್‌ಗಳ ಶ್ರೇಣಿಯನ್ನು ನೀಡುತ್ತದೆ. ವಿಶಾಲವಾದ ಕೋಣೆ ಪ್ರದೇಶವು ಪ್ರಯಾಣಿಕರಿಗೆ ಐಷಾರಾಮಿ ಅಲಂಕಾರಗಳ ನಡುವೆ ವಿಶ್ರಾಂತಿ ಮತ್ತು ಬೆರೆಯಲು ಸ್ಥಳಾವಕಾಶವನ್ನು ಒದಗಿಸುತ್ತದೆ.

ಲಾಂಜ್​ ಎರಿಯಾ (IRCTC)

ಸ್ಪಾ ಮತ್ತು ಆರೋಗ್ಯ: ಪ್ಯಾಲೇಸ್ ಆನ್ ವೀಲ್ಸ್‌ನಲ್ಲಿರುವ ಸ್ಪಾ ಪ್ರಯಾಣಿಕರನ್ನು ಪುನರ್​ಯೌವನಗೊಳಿಸಲು ಆಯುರ್ವೇದ ಚಿಕಿತ್ಸೆಗಳು, ಮಸಾಜ್‌ಗಳು ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ನೀಡುತ್ತದೆ.

ವೈಯಕ್ತಿಕ ಸೇವೆ ಕ್ಯಾಬಿನ್: ಇದನ್ನು ರಾಯಲ್ ರೈಲಿನಂತೆ ವಿನ್ಯಾಸಗೊಳಿಸಲಾಗಿರುವುದರಿಂದ, ರೈಲಿನಲ್ಲಿ ಒದಗಿಸಲಾದ ಸೌಲಭ್ಯಗಳು ಅಷ್ಟೇ ರಾಯಲ್​ ಆಗಿವೆ. ವೈಯಕ್ತಿಕ ಸೇವೆಗಳನ್ನು ಒದಗಿಸಲು ಬಟ್ಲರ್ ಇಲ್ಲಿ ಇರುತ್ತಾರೆ.

ವೈಯಕ್ತಿಕ ಸೇವೆ ಕ್ಯಾಬಿನ್ (IRCTC)

ಪರಂಪರೆಯ ಅಲಂಕಾರ: ಈ ಐಕಾನಿಕ್ ರೈಲಿನ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಅದರ ಒಳಾಂಗಣವು ರಾಜಸ್ಥಾನದ ರಾಜಮನೆತನದ ಅರಮನೆಗಳ ವೈಭವವನ್ನು ಪ್ರತಿಬಿಂಬಿಸುತ್ತದೆ. ಸಂಕೀರ್ಣವಾದ ವುಡನ್​ವರ್ಕ್​, ವಸ್ತ್ರಗಳು ಮತ್ತು ರಾಜಮನೆತನದ ವಾತಾವರಣವನ್ನು ಸೃಷ್ಟಿಸುವ ಐಷಾರಾಮಿ ರತ್ನಗಂಬಳಿಗಳು ಇಲ್ಲಿವೆ. ಗೋಡೆಗಳ ಮೇಲಿನ ಕಲಾಕೃತಿಗಳು ಮತ್ತು ವರ್ಣಚಿತ್ರಗಳು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.

ಇದನ್ನೂ ಓದಿ:

Last Updated : Oct 4, 2024, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.