ETV Bharat / technology

ಯೂಟ್ಯೂಬ್​​: ಬಳಕೆದಾರರ ಉತ್ಸಾಹ ಇಮ್ಮಡಿಗೊಳಿಸುತ್ತಿದೆ ಹೊಸ ಅಪ್ಡೇಟ್!​ - YouTube Big Update

YouTube Update: ಕಂಟೆಂಟ್ ರಚನೆಕಾರರು ಈಗ YouTubeನಲ್ಲಿ ಮೂರು ನಿಮಿಷಗಳವರೆಗಿನ ಶಾರ್ಟ್​ಗಳನ್ನು ಅಪ್‌ಲೋಡ್ ಮಾಡಬಹುದು. ಈ ಸೇವೆಗಳು ಯಾವಾಗಿನಿಂದ ಪ್ರಾರಂಭ ಎಂಬುದನ್ನು ತಿಳಿಯೋಣ ಬನ್ನಿ.

YOUTUBE SHORTS WILL BE 3 MINUTES  YOUTUBE SHORTS MINUTES  YOUTUBE SHORTS UPDATE 2024  YOUTUBE SHORTS LENGTH
ಯೂಟ್ಯೂಬ್​ ಶಾರ್ಟ್ಸ್‌ (ETV Bharat)
author img

By ETV Bharat Karnataka Team

Published : Oct 4, 2024, 5:21 PM IST

YouTube Big Update: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ನೀಡಿದೆ. ಅದೇನೆಂದರೆ, ಇನ್ನು ಮುಂದೆ 3 ನಿಮಿಷಗಳ ಗರಿಷ್ಠ ಶಾರ್ಟ್​ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಅಕ್ಟೋಬರ್ 15ರಿಂದ ಈ ಸೇವೆಗಳು ಲಭ್ಯ. ಈ ಹಿಂದೆ, ಶಾರ್ಟ್​ ವಿಡಿಯೋಗಳ ಗರಿಷ್ಠ ಅವಧಿ ಕೇವಲ 60 ಸೆಕೆಂಡುಗಳಾಗಿತ್ತು.

ಅಕ್ಟೋಬರ್ 15ಕ್ಕೆ ಮೊದಲು ನೀವು ಅಪ್‌ಲೋಡ್ ಮಾಡಿದ ಯಾವುದೇ ವಿಡಿಯೋಗಳ ಮೇಲೂ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಮುಂಬರುವ ತಿಂಗಳುಗಳಲ್ಲಿ ಲಾಂಗ್​ ಶಾರ್ಟ್​ಗಳ ಅಗತ್ಯತೆಗಳನ್ನು ಸುಧಾರಿಸಲು ನಾವು ಕೆಲಸ ಮಾಡುತ್ತೇವೆ ಎಂದು ಕಂಪನಿ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಕಂಟೆಂಟ್​ ಕ್ರಿಯೆಟರ್ಸ್​ ತಮ್ಮ ವಿಡಿಯೋಗಳನ್ನು ಹೆಚ್ಚು ಕಾಲ ಇರಿಸಿಕೊಳ್ಳಲು 16:9ನಂತಹ ವಿಶಾಲ ಆಕಾರ ಅನುಪಾತದಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದು. ಅಕ್ಟೋಬರ್ 15ರ ಕಟ್‌ಆಫ್‌ನ ಮೊದಲು ಅಪ್‌ಲೋಡ್ ಮಾಡಿದ 60 ಸೆಕೆಂಡುಗಳು ಮತ್ತು 3 ನಿಮಿಷಗಳ ನಡುವಿನ ವರ್ಟಿಕಲ್​ ವಿಡಿಯೋಗಳನ್ನು ಹೊಂದಿರುವ ಕ್ರಿಯೆಟರ್ಸ್​ ರೆಗ್ಯುಲರ್​ ಲಾಂಗ್​ ಫೇಮ್​ ಕಂಟೆಂಟ್​ ಆಗಿ ಕಾಣಿಸಿಕೊಳ್ಳುತ್ತಾರೆ.

ಲಾಂಗ್​ ಶಾರ್ಟ್​ ಕಾಪಿರೈಟ್​​ನ ಆಡಿಯೋ ಮತ್ತು ವಿಡಿಯೋ ಬಳಕೆಯ ಕುರಿತು YouTube ತನ್ನ ನೀತಿಗಳನ್ನು ವಿವರಿಸಿದೆ. ಹಕ್ಕುಸ್ವಾಮ್ಯದ ವಿಷಯವನ್ನು ಒಳಗೊಂಡಿರುವ 60 ಸೆಕೆಂಡುಗಳಿಗಿಂತ ಹೆಚ್ಚು ಅವಧಿಯ ಯಾವುದೇ ಶಾರ್ಟ್​ ವಿಡಿಯೋ ಇದ್ರೆ ಅದು ಆಟೋಮೆಟಿಕ್​ ಆಗಿ ಬ್ಲಾಕ್​ ಆಗುತ್ತದೆ. ಆದರೆ ಇದು ಕಂಟೆಂಟ್ ಕ್ರಿಯೇಟರ್‌ನ ಚಾನೆಲ್ ಮೇಲೆ ಪರಿಣಾಮ ಬೀರದೆ ಅದನ್ನು ಪ್ಲೇ ಮಾಡಲಾಗದಂತೆ ಮಾಡುತ್ತದೆ.

ಇವುಗಳ ಜೊತೆಗೆ ಶಾರ್ಟ್​ ವಿಡಿಯೋಗಳನ್ನು ಸುಲಭವಾಗಿ ಮತ್ತು ಹೆಚ್ಚು ಆಕರ್ಷಕವಾಗಿಸಲು YouTube ಹಲವು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಕ್ರಿಯೆಟರ್ಸ್​ ಈಗ ಟೆಂಪ್ಲೇಟ್‌ಗಳನ್ನು ಬಳಸಿಕೊಂಡು ತಮ್ಮ ಮೆಚ್ಚಿನ ಶಾರ್ಟ್​ ವಿಡಿಯೋಗಳನ್ನು ಮರುಸೃಷ್ಟಿಸಬಹುದು. ಟ್ರೆಂಡಿಂಗ್‌ಗೆ ಸೇರಲು ಯಾವುದೇ ಶಾರ್ಟ್​ ವಿಡಿಯೋಗಳಿಗೆ 'ರೀಮಿಕ್ಸ್' ಅನ್ನು ಟ್ಯಾಪ್ ಮಾಡಿ ಮತ್ತು 'ಯೂಸ್​ ದಿಸ್​ ಟೆಂಪ್ಲೇಟ್' ಆಯ್ಕೆ ಮಾಡಿಕೊಳ್ಳಬೇಕು.

ಮುಂದಿನ ಕೆಲವು ತಿಂಗಳುಗಳಲ್ಲಿ, ಕಂಟೆಂಟ್ ಕ್ರಿಯೆಟರ್ಸ್​ ಯೂಟ್ಯೂಬ್ ಲೈಬ್ರರಿಯಿಂದ ನೇರವಾಗಿ ಕಂಟೆಂಟ್​​ಗಳನ್ನು ನೇರವಾಗಿ ತಮ್ಮ ಶಾರ್ಟ್ ಕ್ಯಾಮೆರಾಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. YouTube ಪ್ಲಾಟ್‌ಫಾರ್ಮ್‌ನಲ್ಲಿ ಬಹು ಕ್ಲಿಪ್‌ಗಳನ್ನು ಬಳಸಿಕೊಂಡು ತಮ್ಮ ಮೆಚ್ಚಿನ ವಿಡಿಯೋಗಳು, ಮ್ಯೂಸಿಕ್​ ವಿಡಿಯೋಗಳು ಇತ್ಯಾದಿಗಳಂತಹ ಹೆಚ್ಚಿನ ಕ್ಲಿಪ್‌ಗಳನ್ನು ರೀಮಿಕ್ಸ್ ಮಾಡಲು ಈ ವೈಶಿಷ್ಟ್ಯವು ರಚನೆಕಾರರಿಗೆ ಅನುಮತಿಸುತ್ತದೆ.

YouTube Shorts ಈ ವರ್ಷದ ನಂತರ Google DeepMind Veo ಅನ್ನು ಸಂಯೋಜಿಸುತ್ತದೆ. ಸುಧಾರಿತ ವಿಡಿಯೋ ಬ್ಯಾಕ್​ಗ್ರೌಂಡ್​ ಮತ್ತು ಸ್ಟಾಂಡಲೋನ್​ಕ್ಲಿಪ್‌ಗಳನ್ನು ರಚಿಸಲು ಕಂಟೆಂಟ್​ ಕ್ರಿಯೆಟರ್ಸ್​ಗೆ ಇದು ಅನುಮತಿಸುತ್ತದೆ. ಇದು ಅವರ ಶಾರ್ಟ್​ಗಳನ್ನು ಹೆಚ್ಚು ಕಾಲ್ಪನಿಕವಾಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವಾರ್ಷಿಕೋತ್ಸವ ಸಂಭ್ರಮ: ಗ್ರಾಹಕರಿಗೆ ಬಂಪರ್​ ಆಫರ್​ ಘೋಷಿಸಿದ ಬಿಎಸ್​ಎನ್​ಎಲ್! - BSNL Anniversary Offers

ETV Bharat Logo

Copyright © 2024 Ushodaya Enterprises Pvt. Ltd., All Rights Reserved.