ಪಿಎಸ್ಐ ಮರು ಪರೀಕ್ಷೆಗೆ ಆಗಮಿಸಿದ ಗರ್ಭಿಣಿ: ಸೂಕ್ತ ವ್ಯವಸ್ಥೆ ಕಲ್ಪಿಸಿದ ಪರೀಕ್ಷಾ ಸಿಬ್ಬಂದಿ - ಪಿಎಸ್ಐ ಪರೀಕ್ಷೆ
Published : Jan 23, 2024, 11:12 AM IST
ಬೆಂಗಳೂರು: ಮೂರು ವರ್ಷಗಳ ಬಳಿಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿಯ ಮರು ಪರೀಕ್ಷೆ ನಡೆಯುತ್ತಿದೆ. ಕಳೆದ ಪರೀಕ್ಷೆಯ ಫಲಿತಾಂಶ ರದ್ದಾಗಿದ್ದು, ಅವಕಾಶ ವಂಚಿತ ನೂರಾರು ಅಭ್ಯರ್ಥಿಗಳು ಇಂದು ನಗರದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸುತ್ತಿದ್ದಾರೆ. ಬಗಲಗುಂಟೆಯ ನಿವಾಸಿ ಗರ್ಭಿಣಿಯಾಗಿರುವ ರೋಜಶ್ರೀ ಎಂಬವರು ನಗರದ ಆರ್.ಸಿ.ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದರು.
ಕಾಲೇಜು ಸಮೀಪ ಬೆಳಿಗ್ಗೆಯಿಂದಲೇ ಬಿಸಿಲಿನಲ್ಲಿ ನಿಂತು ಕಾಯುತ್ತಿದ್ದ ಗರ್ಭಿಣಿಯನ್ನು ಗಮನಿಸಿದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಸನದ ವ್ಯವಸ್ಥೆ ಮಾಡಿದರು. ಈ ವೇಳೆ ಮಾತನಾಡಿದ ರೋಜಶ್ರಿ, "2021ರಲ್ಲಿ ನಡೆದಿದ್ದ ಪಿಎಸ್ಐ ಪರೀಕ್ಷೆ ಎದುರಿಸಿದ್ದೆ. ಕೆಲವರು ಮಾಡಿದ ತಪ್ಪಿನಿಂದ ಫಲಿತಾಂಶ ರದ್ದಾಗಿತ್ತು. ಈ ಬಾರಿ ಪರೀಕ್ಷೆ ನಡೆಯುತ್ತಿದೆ. ತಯಾರಿಗೆ ಸಮಯ ಸಿಕ್ಕಿದೆ. ಆದರೆ ಸರ್ಕಾರ ನಮಗೆ ಒಂದು ಗಡುವು ನೀಡಿದರೆ ಮತ್ತಷ್ಟು ಅನುಕೂಲವಾಗುತ್ತದೆ" ಎಂದು ತಿಳಿಸಿದರು.
ಇನ್ನು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಗೆ ಸಕಲ ವ್ಯವಸ್ಥೆ ಮಾಡಿಕೊಂಡಿದೆ. 54 ಸಾವಿರ ಅಭ್ಯರ್ಥಿಗಳು ಮರುಪರೀಕ್ಷೆ ಬರೆಯುತ್ತಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಮರು ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ