ಕರ್ನಾಟಕ

karnataka

ETV Bharat / videos

ಹಾವೇರಿಯಲ್ಲಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ: ಮನೆಗಳಿಗೆ ನುಗ್ಗಿದ ನೀರು, ಸೇತುವೆ ಮುಳುಗಡೆ - HEAVY RAIN

By ETV Bharat Karnataka Team

Published : Nov 1, 2024, 5:44 PM IST

ಹಾವೇರಿ: ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಹಾನಗಲ್​ ತಾಲೂಕಿನ ಅಕ್ಕಿ ಆಲೂರು, ಸಂಗೂರು ಗೌರಾಪುರದಲ್ಲಿ ಭಾರೀ ಮಳೆಯಾಗಿದ್ದು, ಅಗಡಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ರಸ್ತೆಗಳು ಕೆರೆಗಳಂತಾಗಿದ್ದು ಜನರು ಓಡಾಡಲು ಪರದಾಡಿದ್ದಾರೆ. ಮನೆಗಳಿಗೆ ನುಗ್ಗಿದ ಮಳೆನೀರು ಹೊರಹಾಕಲು ಗ್ರಾಮಸ್ಥರು ಹರಸಾಹಸಪಟ್ಟರು. ಯಲಗಚ್ಚ ಗ್ರಾಮದಲ್ಲಿ ಮಳೆಯ ರಭಸಕ್ಕೆ ಹಳ್ಳ ಮಿತಿ ಮೀರಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿದೆ. ಯಲಗಚ್ಚನಿಂದ ಕರ್ಜಗಿ ಮತ್ತು ಅಗಡಿ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ. ರಭಸವಾಗಿ ಹರಿಯುತ್ತಿರುವ ನೀರನ್ನು ಲೆಕ್ಕಿಸದೆ ಸೇತುವೆ ಮೇಲೆ ಜನರು ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ. ರೈತರಿಗೆ ಸಂಕಷ್ಟ ತಂದಿರುವ ಮಳೆರಾಯ ಇದೀಗ ದೀಪಾವಳಿ ಸಂಭ್ರಮಕ್ಕೂ ಅಡ್ಡಿ ತಂದಿದ್ದಾನೆ.

ಇದನ್ನೂ ಓದಿ: ಮಳೆ ಬಳಿಕ ಬೆಂಗಳೂರಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ: ಮಾರ್ಗಸೂಚಿ ಪ್ರಕಟಿಸಿದ ಬಿಬಿಎಂಪಿ

ಇದನ್ನೂ ಓದಿ: ಕುಂದಗೋಳದಲ್ಲಿ ಮಳೆಯಿಂದ ಮೆಣಸಿನಕಾಯಿ ಬೆಳೆ ಹಾನಿ: ಗಿಡಗಳನ್ನು ಕಿತ್ತು ಹಾಕಿದ ರೈತರು

ಇದನ್ನೂ ಓದಿ:ಶಿವಮೊಗ್ಗ: ಭಾರಿ ಮಳೆಗೆ ಜಿಲ್ಲೆಯಾದ್ಯಂತ 353 ಹೆಕ್ಟೇರ್​ ಭತ್ತದ ಬೆಳೆ ಹಾನಿ

ಇದನ್ನೂ ಓದಿ:ರಾಜ್ಯದಲ್ಲಿ ಹಿಂಗಾರು ಮಳೆ ಮತ್ತಷ್ಟು ಚುರುಕು: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ABOUT THE AUTHOR

...view details