ETV Bharat / state

ಆಂಬ್ಯುಲೆನ್ಸ್ ಸೈರನ್​ ಬಳಸಿ ಸಿ ಟಿ ರವಿಗೆ ಸ್ವಾಗತ;​ ತುರ್ತು ವಾಹನ ಮಾಲೀಕನ ವಿರುದ್ಧ ಎಫ್​ಐಆರ್ - FIR AGAINST AMBULENCE OWNER

ಎಂಎಲ್​ಸಿ ಸಿ. ಟಿ ರವಿ ಚಿಕ್ಕಮಗಳೂರು ಪ್ರವೇಶ ಮಾಡುತ್ತಿದ್ದಂತೆಯೇ ಸ್ವಾಗತಕ್ಕೆ ಆಂಬ್ಯುಲೆನ್ಸ್​ಗಳ ಬಳಸಿದ ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

fir-registered-against-seven-ambulances-for-used-to-welcome-ct-ravi
ಸಿ ಟಿ ರವಿ ಅವರನ್ನ ಆಂಬ್ಯುಲೆನ್ಸ್​ಗಳ ಮೂಲಕ ಸ್ವಾಗತಿಸಲಾಯಿತು (ETV Bharat)
author img

By ETV Bharat Karnataka Team

Published : 5 hours ago

ಚಿಕ್ಕಮಗಳೂರು : ಎಂಎಲ್​ಸಿ ಸಿ. ಟಿ ರವಿ ಸ್ವಾಗತ ಮೆರವಣಿಗೆ ವೇಳೆ ಆಂಬ್ಯುಲೆನ್ಸ್ ಬಳಕೆ ಮಾಡಿರುವ ಆರೋಪದ ಮೇರೆಗೆ ಆಂಬ್ಯುಲೆನ್ಸ್ ಮಾಲೀಕ ಹಾಗೂ ಚಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಧಾನ ಪರಿಷತ್ ಕಲಾಪದ ಸಂದರ್ಭದಲ್ಲಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪದಬಳಕೆ ಮಾಡಿದ್ದಾರೆಂದು ಆರೋಪಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ದ ದೂರಿನ ಅನ್ವಯ ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗಿದ್ದ ಸಿ ಟಿ ರವಿ ತವರು ಜಿಲ್ಲೆ ಚಿಕ್ಕಮಗಳೂರಿಗೆ ಆಗಮಿಸಿದ್ದರು.

ಎಂಎಲ್​ಸಿ ಸಿ ಟಿ ರವಿ ಸ್ವಾಗತ ಮೆರವಣಿಗೆಗೆ ಆಂಬ್ಯುಲೆನ್ಸ್​ ಬಳಕೆ (ETV Bharat)

ಈ ವೇಳೆ ಎಂಎಲ್​ಸಿ ಸಿ. ಟಿ ರವಿ ಸ್ವಾಗತ ಮೆರವಣಿಗೆಗೆ 7 ಆಂಬ್ಯುಲೆನ್ಸ್​ಗಳನ್ನ ಬಳಸಿದ ಕಾರ್ಯಕರ್ತರು ಸೈರನ್ ಲೈಟ್ ಹಾಕಿ ಮೆರವಣಿಗೆ ಮಾಡಿದ್ದರು. ಹೀಗಾಗಿ ಆಂಬ್ಯುಲೆನ್ಸ್ ಮಾಲೀಕ ಹಾಗೂ ಚಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಾರ್ವಜನಿಕರಿಗೆ ಶಾಂತಿಭಂಗ ಉಂಟುಮಾಡಿದ ಆರೋಪದಡಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ತನ್ನ ಬಂಧನ, ಪೊಲೀಸರ ದೂರವಾಣಿ ಕರೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು: ಸಿ.ಟಿ. ರವಿ - CT RAVI RESPONDS TO FIR AND ARREST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.