ದಾವಣಗೆರೆ: ಬತ್ತಿದ ಕೊಳವೆಬಾವಿಯಿಂದ ಆಕಾಶಕ್ಕೆ ಚಿಮ್ಮುತ್ತಿದೆ ಜೀವಜಲ! - WATER GUSHING FROM BOREWELL
Published : Oct 22, 2024, 5:01 PM IST
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಆಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವ ಕಾರಣ ಬತ್ತಿದ್ದ ಕೊಳವೆಬಾವಿಯೊಂದರಲ್ಲಿ 2 ಇಂಚಿನಷ್ಟು ನೀರು ಹೊರ ಚಿಮ್ಮುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಮಾರನಹಳ್ಳಿ ಈ ಅಚ್ಚರಿ ಸಂಗತಿಗೆ ಸಾಕ್ಷಿಯಾಗಿದೆ. ಮೋಟಾರ್ ಮತ್ತು ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಕೊಳವೆಬಾವಿಯಿಂದ ಪವಾಡದಂತೆ ನೀರು ಚಿಮ್ಮುತ್ತಿರುವುದು ವಿಶೇಷ.
ಈ ಕೊಳವೆಬಾವಿ ಪ್ರವೀಣ್ ಗೌಡ ಎಂಬವರಿಗೆ ಸೇರಿದ ತೋಟದಲ್ಲಿದೆ. ಅಡಿಕೆ ಮತ್ತು ತೆಂಗಿನ ತೋಟಕ್ಕಾಗಿ ಕೊರೆಯಿಸಿದ್ದ ಕೊಳವೆಬಾವಿಯ ಅಂತರಾಳದಲ್ಲಿ ನೀರಿಲ್ಲದೆ ಬತ್ತಿಹೋಗಿತ್ತು. ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಇದರಿಂದ ನಾಲ್ಕೈದು ದಿನಗಳಿಂದ ಕೊಳವೆಬಾವಿಯಿಂದ ನೀರು ಚಿಮ್ಮಲು ಪ್ರಾರಂಭಿಸಿದೆ.
ಸಾವಿರಾರು ಅಡಿ ಬೋರ್ವೆಲ್ ಕೊರೆಸಿದರೂ ನೀರು ಸಿಗದ ಕಾಲದಲ್ಲಿ ಬತ್ತಿದ ಕೊಳವೆ ಬಾವಿಯಲ್ಲಿ ಪವಾಡಸದೃಶ್ಯದಂತೆ ನೀರು ಬರುತ್ತಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಚಿಮ್ಮುತ್ತಿರುವ ನೀರು ಹಳ್ಳದ ಮೂಲಕ ಕೆರೆ ಸೇರುತ್ತಿದೆ.
ಇದನ್ನೂ ನೋಡಿ: ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್; ಆಕಾಶದೆತ್ತರಕ್ಕೆ ಚಿಮ್ಮಿದ ನೀರು! ವಿಡಿಯೋ - Borewell recharge