ಉಡುಪಿಯಲ್ಲಿ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ; ದೈವಸ್ಥಾನದ ದರ್ಶನ- ವಿಡಿಯೋ - Suryakumar Yadav Visits Udupi - SURYAKUMAR YADAV VISITS UDUPI
Published : Jul 9, 2024, 2:27 PM IST
ಉಡುಪಿ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೈವಸ್ಥಾನಕ್ಕೆ ಇಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಭೇಟಿ ನೀಡಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆಗಿದ್ದರು.
2024ರ ಟಿ20 ವಿಶ್ವಕಪ್ ಅನ್ನು ಭಾರತ ತನ್ನ ಮುಡಿಗೇರಿಸಿಕೊಂಡಿದ್ದು, ಈ ಗೆಲುವಿಗೆ ಕಾರಣೀಕರ್ತರಲ್ಲೋರ್ವರು ಸೂರ್ಯಕುಮಾರ್ ಯಾದವ್.
ದಂಪತಿಯನ್ನು ಶಾಸಕ, ಕಾಪು ಶ್ರೀ ಹೊಸಮಾರಿಗುಡಿ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಭಿನಂದಿಸಿದರು. ದೈವಸ್ಥಾನದಲ್ಲಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ಉಡುಪಿಯ ಪ್ರಸಿದ್ಧ ದೈವಸ್ಥಾನವಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಾರೆ.
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಅದ್ಭುತ ಕ್ಯಾಚ್ ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಧೂಳೆಬ್ಬಿಸಿತ್ತು.
ಇದನ್ನೂ ಓದಿ: ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್ ಹಿಟ್ 'ಶಾಸ್ತ್ರೀ' ಶುಕ್ರವಾರ ಮರು ಬಿಡುಗಡೆ - Shastri Re Release