TVS Apache RR 310 Launched:TVS ಮೋಟಾರ್ ಕಂಪನಿಯು ಅಪ್ಡೇಟೆಡ್ 2024 TVS Apache RR 310 ಬೈಕ್ ಹೊರತಂದಿದೆ. ಇದು ವಿಂಗ್ಲೆಟ್‌ಗಳ ಸೇರ್ಪಡೆ ಸೇರಿದಂತೆ ಕಾರ್ಯಕ್ಷಮತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕ್ವಿಕ್‌ಶಿಫ್ಟರ್ ಇಲ್ಲದ ರೇಸಿಂಗ್ ರೆಡ್ ವೇರಿಯಂಟ್‌ನ ಬೆಲೆ 2.75 ಲಕ್ಷ ರೂ.ಯಿಂದ ಪ್ರಾರಂಭವಾದರೆ, ಕ್ವಿಕ್‌ಶಿಫ್ಟರ್ ಹೊಂದಿರುವ ರೂಪಾಂತರದ ಬೆಲೆ 2.92 ಲಕ್ಷ ರೂ.ಯಿಂದ ಶುರುವಾಗುತ್ತದೆ. ನ್ಯೂ ಬಾಂಬರ್ ಗ್ರೇ ಕಲರ್ ಆಯ್ಕೆ 2.97 ಲಕ್ಷ ರೂ.ಯಲ್ಲಿ ಲಭ್ಯ (ಎಲ್ಲ ಬೆಲೆಗಳು ಎಕ್ಸ್ ಶೋ ರೂಂನಂತೆ).
ಅಪಾಚೆ RR 310 ನ 2024 ಮಾದರಿಯನ್ನು ಉತ್ತಮ ಫರ್ಪಾರ್ಮೆನ್ಸ್ಗಾಗಿ ಆಪ್ಟಿಮೈಸ್ ಮಾಡಲಾಗಿದೆ. ಇದು ರೇಸಿಂಗ್ ಉತ್ಸಾಹಿಗಳಿಗೆ ಹೆಚ್ಚು ಸ್ಪರ್ಧಾತ್ಮಕ ಆಯ್ಕೆ ಎನ್ನಬಹುದು. ಒಂದು ಪ್ರಮುಖ ಅಂಶವೆಂದರೆ, ವಿಂಗ್ಲೆಟ್‌ಗಳ ಬಳಕೆಯಿಂದ ಸರಿಸುಮಾರು 3 ಕೆ.ಜಿ ಡೌನ್‌ಫೋರ್ಸ್ ಉತ್ಪಾದಿಸುತ್ತದೆ. ಇದರಿಂದ ಮೋಟಾರ್‌ಸೈಕಲ್‌ನ ಸ್ಥಿರತೆ ಸುಧಾರಿಸುತ್ತದೆ ಮತ್ತು ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ. ವಿನ್ಯಾಸ ಹಿಂದಿನ ಆವೃತ್ತಿಯಂತಿದೆ.
2024 ಅಪಾಚೆ RR 310 ಅದೇ 312 cc ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಆದರೆ ಈಗ ಈ ಎಂಜಿನ್ 9,800 rpmನಲ್ಲಿ 38 bhp ಪವರ್ ಮತ್ತು 7,900 rpmನಲ್ಲಿ 29 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಮೊದಲಿಗಿಂತ ಹೆಚ್ಚು.