Ingenuity Mars Helicopter:ಈ ವರ್ಷದ ಜನವರಿಯಲ್ಲಿ ತನ್ನ ಕೊನೆಯ ಹಾರಾಟದ ನಂತರ ಕೆಂಪು ಗ್ರಹದಲ್ಲಿ ಶಾಶ್ವತವಾಗಿ ನೆಲೆಗೊಂಡ ಏಜೆನ್ಸಿಯ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್ ಕುರಿತು ತನಿಖೆ ಪೂರ್ಣಗೊಳಿಸಿರುವ ನಾಸಾ ಎಂಜಿನಿಯರ್‌ಗಳು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್ ಮತ್ತೊಂದು ಗ್ರಹದ ಮೇಲೆ ಹಾರುವ ಮೊದಲ ಹೆಲಿಕಾಪ್ಟರ್ ಎಂಬುದು ವಿಶೇಷ. 30 ದಿನಗಳಲ್ಲಿ ಐದು ಪ್ರಾಯೋಗಿಕ ಪರೀಕ್ಷಾ ಹಾರಾಟಗಳನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. ಇದು ಸುಮಾರು ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. 72 ಹಾರಾಟಗಳನ್ನು ನಿರ್ವಹಿಸಿದೆ ಮತ್ತು ಎರಡು ಗಂಟೆಗಳ ಹಾರಾಟದ ಸಮಯವನ್ನು ಸಂಗ್ರಹಿಸುವಾಗ ಯೋಜಿಸಿದ್ದಕ್ಕಿಂತ 30 ಪಟ್ಟು ಹೆಚ್ಚು ದೂರ ಹಾರಿದೆ ಎಂದು ನಾಸಾ ಬುಧವಾರ ತಿಳಿಸಿದೆ.
12 ಮೀಟರ್ ಎತ್ತರಕ್ಕೆ ಹಾರಾಟ ನಡೆಸಿದ ಇಂಜೆನ್ಯೂಟಿ:ಜನವರಿ 18, 2024 ರಂದು ಅದರ ಅಂತಿಮ ಹಾರಾಟದ ಸಮಯದಲ್ಲಿ ಇಂಜೆನ್ಯೂಟಿ 12 ಮೀಟರ್ ಎತ್ತರಕ್ಕೆ ಹಾರಿತ್ತು. ಬಳಿಕ ಅದು ತೂಗಾಡುತ್ತಲೇ ಚಿತ್ರಗಳನ್ನು ಸೆರೆಹಿಡಿಯಿತು. ಬಳಿಕ ಅದು ಕೆಳಗಿಳಿಯಲು ಪ್ರಾರಂಭಿಸಿತು ಆಗ ಸಂವಹನವನ್ನು ಸ್ಥಗಿತಗೊಂಡಿತು. ಮರುದಿನ ಆ ಮಿಷನ್ ಸಂವಹನಗಳನ್ನು ಮರು ಸ್ಥಾಪಿಸಿತು. ಆದರೆ, NASA ಪ್ರಕಾರ, ಅದು ನೆಲೆಗೊಂಡು ಆರು ದಿನಗಳ ನಂತರ ಬಂದ ಚಿತ್ರಗಳ ಮೂಲಕ ಕೆಲವೊಂದು ದೋಷಗಳು ಸಂಭವಿಸಿರುವುದು ತಿಳಿಯಿತು. ಅಂದ್ರೆ ರೋಟರ್ ಬ್ಲೇಡ್‌ಗಳು ಹಾನಿಗೊಳಗಾಗಿರುವುದನ್ನು ನಾಸಾ ಕಂಡುಕೊಂಡಿದೆ.