iPhone 15 Price: Apple iPhone 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯು ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಈ ಸಂದರ್ಭದಲ್ಲಿ, ಅನೇಕ ಬಳಕೆದಾರರು ಹಿಂದಿನ ಐಫೋನ್ 15 ಮಾದರಿಯ ಬೆಲೆಯನ್ನು ಹುಡುಕುತ್ತಿದ್ದಾರೆ. ಹೊಸ ಮಾದರಿಯ ಫೋನ್ ಹೆಚ್ಚು ದುಬಾರಿಯಾಗುವುದರಿಂದ, ಐಫೋನ್ 12 ಮತ್ತು 13 ಮಾದರಿಯ ಬಳಕೆದಾರರು ಟೈಪ್-ಸಿ ಯೊಂದಿಗೆ ಬರುವ ಐಫೋನ್ 15 ಮಾದರಿಗೆ ತಮ್ಮನ್ನು ತಾವು ಅಪ್‌ಗ್ರೇಡ್ ಮಾಡಲು ಸಿದ್ಧರಾಗಿದ್ದಾರೆ. ಅವರ ಹುಡುಕಾಟವನ್ನು ಪರಿಹರಿಸಲು, ಫ್ಲಿಪ್‌ಕಾರ್ಟ್ ಐಫೋನ್ 15 ಮತ್ತು ಬ್ಯಾಂಕ್ ಕೊಡುಗೆಗಳಿಗೆ ಬೆಲೆ ಕಡಿತ ಘೋಷಿಸಿದೆ.
Apple iPhone 15 ವಿಶೇಷತೆಗಳು:ಹಿಂದಿನ ಮಾದರಿ Apple iPhone 15 A16 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ಫೋನ್ iOS 17 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಇದು ಡೈನಾಮಿಕ್ ಐಲ್ಯಾಂಡ್ ಜೊತೆಗೆ 6.1-ಇಂಚಿನ OLED ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಕ್ಯಾಮರಾಕ್ಕೆ ಸಂಬಂಧಿಸಿದಂತೆ ಹಿಂಭಾಗವು OIS ಜೊತೆಗೆ 48-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮರಾ ಹೊಂದಿದೆ.
ಡಿಸ್‌ಪ್ಲೇಯ ಡೈನಾಮಿಕ್ ಐಲ್ಯಾಂಡ್‌ನಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸ್ಥಾಪಿಸಲಾಗಿದೆ. ಮುಖ್ಯವಾಗಿ ಐಫೋನ್ 15 ಮಾದರಿಯು ಟೈಪ್-ಸಿ ಚಾರ್ಜಿಂಗ್ ಸಪೋರ್ಟ್ ತಂದ ಮೊದಲನೆಯದು. ಇದು 20W ಸಾಮರ್ಥ್ಯದೊಂದಿಗೆ ಫೋನ್ ಅನ್ನು ಚಾರ್ಜ್ ಮಾಡಬಹುದು. ಅಲ್ಲದೇ, ಇದು ಬಹು-ಕಾರ್ಯವನ್ನು ಸುಲಭಗೊಳಿಸುವ ಆ್ಯಕ್ಟಿವೇಟ್ ಬಟನ್ ಅನ್ನು ಹೊಂದಿದೆ. ಒಂದೇ ಕ್ಲಿಕ್‌ನಲ್ಲಿ ಈ ಬಟನ್ ಮೂಲಕ ಬಹು ಅಪ್ಲಿಕೇಶನ್‌ಗಳನ್ನು ಪ್ರವೇಶಿಸಬಹುದು. ಬಳಕೆದಾರರು ಈ ಸ್ಮಾರ್ಟ್‌ಫೋನ್ಕ ಪ್ಪು, ನೀಲಿ, ಹಸಿರು, ಹಳದಿ ಮತ್ತು ಗುಲಾಬಿ ಎಂಬ ಒಟ್ಟು ಐದು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.