ETV Bharat / technology

ಐಫೋನ್ SE 4 ನಲ್ಲಿ ಡೈನಾಮಿಕ್ ಐಲ್ಯಾಂಡ್?: ಏನು ಹೇಳುತ್ತೆ ಹೊಸ ಮಾಹಿತಿ - DYNAMIC ISLAND ON IPHONE SE 4

ಆಧುನಿಕ ಐಫೋನ್ ಟ್ರೆಂಡ್​ಗೆ ಅನುಗುಣವಾಗಿ ಮುಂಬರುವ ಐಫೋನ್ SE 4 ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಹೊಂದಿರಬಹುದು ಎನ್ನುತ್ತವೆ ಹೊಸ ಮಾಹಿತಿ..

The iPhone SE 4 could likely boast the Dynamic Island feature
ಐಫೋನ್ SE 4 ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯ (Apple)
author img

By ETV Bharat Tech Team

Published : Jan 22, 2025, 4:17 PM IST

ಹೈದರಾಬಾದ್​: ಐಫೋನ್​ SE 4 ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದು 2022ರಲ್ಲಿ ಬಿಡುಗಡೆಯಾದ ವಿಶೇಷ ಆವೃತ್ತಿಯ ಐಫೋನ್ (Special Edition iPhone)​ ನಂತರ ಬಿಡುಗಡೆಯಾಗುತ್ತಿರುವ iPhone​ ಆಗಿದೆ. ಈ ಫೋನ್​ ಬಗ್ಗೆ ಐಫೋನ್​ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದ್ದು, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಹೊಸ SE ಬಗೆಗಿನ ವಿವರಗಳು ಆನ್‌ಲೈನ್‌ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಅವುಗಳಲ್ಲಿ ಇತ್ತೀಚೆಗೆ ಸೋರಿಕೆಯಾದ ಮಾಹಿತಿಯಂತೆ, ಮುಂಬರುವ ಐಫೋನ್ SE 4 ​ರಲ್ಲಿ ಅಲರ್ಟ್ಸ್​, ಆಧುನಿಕ ಐಫೋನ್​ ಟ್ರೆಂಡ್​ನಲ್ಲಿರುವ ನೋಟಿಫಿಕೇಶನ್​ ಅಥವಾ ಇತರ ಚಟುವಟಿಕೆಗಳ ಮಾಹಿತಿಯನ್ನು ತೋರಿಸಲು ಸಹಾಯ ಮಾಡುವಂತಹ ಮಾತ್ರೆ ಆಕಾರದ ಅಂಶ ಡೈನಾಮಿಕ್​ ಐಲ್ಯಾಂಡ್​ ಫೀಚರ್​ ಹೊಂದಿರುವ ಸಾಧ್ಯತೆ ಇಂದು ಹೇಳಲಾಗುತ್ತಿದೆ.

ಈ ಫೀಚರ್​ ಅನ್ನು 2022 ರಲ್ಲಿ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ನಂತರದ ವರ್ಷಗಳಲ್ಲಿ ಬಿಡುಗಡೆಯಾದ 15 ಸರಣಿ ಮತ್ತು ಐಫೋನ್ 16 ಸರಣಿಯ ಫೋನ್​ಗಳಲ್ಲಿ ಐಫೋನ್​ ಈ ವೈಶಿಷ್ಟ್ಯ ವಿಸ್ತರಿಸಿತ್ತು.

ಐಫೋನ್ SE 4 ನಲ್ಲಿ ಡೈನಾಮಿಕ್ ಐಲ್ಯಾಂಡ್: ಐಫೋನ್ SE 4 ರ ಹೊಸ ಮಾಹಿತಿಗಳನ್ನು ಪ್ರಸಿದ್ಧ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್​ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಡೈನಾಮಿಕ್​ ಐಲ್ಯಾಂಡ್​ ಫೀಚರ್​ ಸ್ಟ್ಯಾಟಿಕ್​ ನಾಚ್​ ಬದಲಿಗೆ ಡಿಸ್ಪ್ಲೇಯ ಮೇಲ್ಭಾಗದಲ್ಲಿ ಹೊಂದಿರಬಹುದು. ಹಾಗೂ ಐಫೋನ್ SE 4 ಇತ್ತೀಚೆಗೆ ಬಿಡುಗಡೆಯಾದ ಐಫೋನ್ 16 ಮಾದರಿಯ ವಿನ್ಯಾಸ ಹೋಲಿಕೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳುತ್ತದೆ ಸೋರಿಕೆಯಾದ ಮಾಹಿತಿ.

ಇದಲ್ಲದೇ, ಇವಾನ್ ಅವರು "ಡೈನಾಮಿಕ್ ಐಲ್ಯಾಂಡ್ ಅನ್ನು ಹೈಲೈಟ್ ಮಾಡಲು (ಐಫೋನ್ SE 4 ನ ಚಿತ್ರ) ಫೋನ್​ನ ಬಣ್ಣವನ್ನು ಹೊಂದಿಸಿದ್ದಾರೆ" ಎಂದು ಹೇಳಿದ್ದಾರೆ. M3 ಚಿಪ್‌ಸೆಟ್‌ನೊಂದಿಗೆ ಐಪ್ಯಾಡ್ ಏರ್‌ನ 11-ಇಂಚಿನ ಮತ್ತು 13-ಇಂಚಿನ ರೂಪಾಂತರಗಳನ್ನು ಒಳಗೊಂಡಂತೆ ಹಲವಾರು ಐಪ್ಯಾಡ್ ಮಾದರಿಗಳ ವಿನ್ಯಾಸವನ್ನೂ ಪೋಸ್ಟ್​ ಒಳಗೊಂಡಿದೆ. ಇದು 11ನೇ ತಲೆಮಾರಿನ ಐಪ್ಯಾಡ್​ ಅನ್ನೂ ಪ್ರದರ್ಶಿಸಿತು.

ಐಫೋನ್ SE 4: ಸೋರಿಕೆಯಾದ ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಇದಕ್ಕೂ ಮೊದಲು ಐಫೋನ್ SE 4 ನ ಕಪ್ಪು ಹಾಗೂ ಬಿಳಿ ಬಣ್ಣದ ಡಮ್ಮಿ ಫೋಟೋ ಸೋರಿಕೆಯಾಗಿತ್ತು. ವಾಲ್ಯೂಮ್​ ಬಟನ್​, ಮ್ಯೂಟ್​ ಸ್ವಿಚ್​ ಮತ್ತು ಎಡ ಅಂಚಿನಲ್ಲಿ ಸಿಮ್​ ಟ್ರೇ ಹೊಂದಿರುವ ಫ್ಲಾಟ್​ ಸೈಡ್​ಗಳನ್ನು ಹೊಂದಿರುವಂತೆ ಕಂಡು ಬಂದಿತ್ತು. ಸಿಂಗಲ್​ ಕ್ಯಾಮರಾಕ್ಕಾಗಿ ಹಿಂಭಾಗದ ಪ್ಯಾನಲ್​ನ ಮೇಲಿನ ಎಡ ತುದಿಯಲ್ಲಿ LED ಫ್ಲ್ಯಾಷ್ ಘಟಕವೂ ಇತ್ತು.

ಇದಕ್ಕೂ ಹಿಂದೆ ಸೋರಕೆಯಾದ ಮಾಹಿತಿಗಳು, ಐಫೋನ್ SE 4 ವಾಟರ್​ಪ್ರೂಫ್​ ಅಲ್ಯೂಮಿನಿಯಂ ಫ್ರೇಮ್​ ಹೊಂದಿರಬಹುದು ಎಂದು ಹೇಳುತ್ತಿವೆ. ಈ ಐಫೋನ್​ 60 Hz ರಿಫ್ರೆಶ್ ರೇಟ್​ಗೆ ಹೊಂದಿಕೆಯಾಗುವಂತಹ 6.06-ಇಂಚಿನ ಪೂರ್ಣ HD+ LTPS OLED ಡಿಸ್ಪ್ಲೇ ಹೊಂದಿರಲಿದೆ. ಐಫೋನ್ SE 4 6GB ಅಥವಾ 8GB RAM ನೊಂದಿಗೆ ಜೋಡಿಸಲಾದ A18 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರಬಹುದು. 48MP ಹಿಂಭಾಗದ ಮುಖ್ಯ ಕ್ಯಾಮೆರಾ ಸೆನ್ಸರ್​, ಫೇಸ್ ಐಡಿ ಸಪೋರ್ಟ್​ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಸಹ ಒಳಗೊಂಡಿರಬಹುದು ಎಂದು ವರದಿಯಾಗಿದೆ.

ಇದನ್ನೂ ಓದಿ: AI ಜನರೇಟೆಡ್​ ಎರರ್ ​- ಪ್ರೋನ್​ ಫೀಚರ್ಸ್ ತೆಗೆದುಹಾಕಲು ಆಪಲ್​ ನಿರ್ಧಾರ, ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.