ETV Bharat / technology

ಆಂಡ್ರಾಯ್ಡ್​ನಲ್ಲಿ ವಿಂಡೋಸ್​ ಗೇಮಿಂಗ್: ವಿನ್ ಪ್ಲೇ ಕ್ರಾಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆವಿಷ್ಕರಿಸಿದ ಶಿಯೋಮಿ - CROSS GAMING PLATFORM

ಶಿಯೋಮಿಯು ಕ್ರಾಸ್ ಗೇಮಿಂಗ್ ಪ್ಲಾಟ್​ಫಾರ್ಮ್ ವಿನ್ ಪ್ಲೇ ಎಂಜಿನ್ ಆವಿಷ್ಕರಿಸಿದೆ.

ಆಂಡ್ರಾಯ್ಡ್​ನಲ್ಲಿ ವಿಂಡೋಸ್​ ಗೇಮಿಂಗ್: ವಿನ್ ಪ್ಲೇ ಕ್ರಾಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆವಿಷ್ಕರಿಸಿದ ಶಿಯೋಮಿ
ಆಂಡ್ರಾಯ್ಡ್​ನಲ್ಲಿ ವಿಂಡೋಸ್​ ಗೇಮಿಂಗ್: ವಿನ್ ಪ್ಲೇ ಕ್ರಾಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆವಿಷ್ಕರಿಸಿದ ಶಿಯೋಮಿ (Weibo/ Zhang Guoquan)
author img

By ETV Bharat Karnataka Team

Published : Jan 21, 2025, 6:05 PM IST

ಹೈದರಾಬಾದ್: ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಗ್ರಾಹಕ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಹೊಸದಾಗಿ ಆಸಕ್ತಿ ಕಂಡು ಬಂದಿದೆ. ತಯಾರಕರು ಫ್ಲ್ಯಾಗ್ ಶಿಪ್ ಮಟ್ಟದ ಚಿಪ್ ಸೆಟ್ ಗಳನ್ನು ಹೊಂದಿರುವ ಆಂಡ್ರಾಯ್ಡ್ ಟ್ಯಾಬ್ಲೆಟ್​ಗಳನ್ನು ಈಗ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗುತ್ತಿದ್ದಾರೆ. ಆದರೆ, ಸಾಫ್ಟ್​ವೇರ್​ನ ಕಡಿಮೆ ಸಾಮರ್ಥ್ಯದಿಂದ ಈ ಸಾಧನಗಳನ್ನು ತಮ್ಮ ಗರಿಷ್ಠ ಮಟ್ಟದಲ್ಲಿ ಗ್ರಾಹಕರು ಬಳಸಲು ಸಾಧ್ಯವಾಗುತ್ತಿಲ್ಲ. ಶಿಯೋಮಿ ಕನಿಷ್ಠ ಪಕ್ಷ ಗೇಮಿಂಗ್ ವಿಚಾರದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.

ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿ ಶಿಯೋಮಿ ವಿನ್ ಪ್ಲೇ ಹೆಸರಿನ ಎಂಜಿನ್ ಅನ್ನು ಪರಿಚಯಿಸಿದೆ. ಇದು ಹೈಪರ್ ಓಎಸ್ ಮತ್ತು ವಿಂಡೋಸ್ ಗೇಮಿಂಗ್ ನಡುವಿನ ಕ್ರಾಸ್-ಪ್ಲಾಟ್ ಫಾರ್ಮ್ ಹೊಂದಾಣಿಕೆ ಸಂಯೋಜಿಸುವ ಸಿಸ್ಟಮ್ - ಲೆವೆಲ್ ವೈಶಿಷ್ಟ್ಯವಾಗಿದೆ. ಸರಳವಾಗಿ ಹೇಳುವುದಾದರೆ, ಇದು ಬಳಕೆದಾರರಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್​ನಲ್ಲಿ ಪಿಸಿ ಗೇಮ್​ಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಶಿಯೋಮಿ ಪ್ಯಾಡ್ 6ಎಸ್ ಪ್ರೊ 12.4 ಗಾಗಿ ಈ ವೈಶಿಷ್ಟ್ಯವನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಸಾಫ್ಟ್​ವೇರ್ ವಿಭಾಗದ ನಿರ್ದೇಶಕ ಜಾಂಗ್ ಗುವೊಕ್ವಾನ್ ಹೇಳುವುದಿಷ್ಟು: ಈ ಬಗ್ಗೆ ಮಾತನಾಡಿದ ಶಿಯೋಮಿ ಮೊಬೈಲ್ ಸಿಸ್ಟಮ್ ಸಾಫ್ಟ್​ವೇರ್ ವಿಭಾಗದ ನಿರ್ದೇಶಕ ಜಾಂಗ್ ಗುವೊಕ್ವಾನ್, ವಿನ್ ಪ್ಲೇ ಎಂಜಿನ್ ಟ್ಯಾಬ್ಲೆಟ್​ನಲ್ಲಿ ವರ್ಚುವಲ್ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಪಿಸಿ ಗೇಮ್​ಗಲನ್ನು ಬೆಂಬಲಿಸುತ್ತದೆ, ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸ್ಥಿರತೆಯನ್ನು ನೀಡುತ್ತದೆ. ಟ್ಯಾಬ್ಲೆಟ್​ನಲ್ಲಿ ಗೇಮಿಂಗ್ ಅನುಭವವನ್ನು ಆನಂದಿಸಲು ಬಳಕೆದಾರರು ಸ್ಟೀಮ್ ನಂತಹ ಪ್ಲಾಟ್ ಫಾರ್ಮ್​ಗಳಿಂದ ಗೇಮ್​ಗಳನ್ನು ಆಡಬಹುದು ಅಥವಾ ನೇರವಾಗಿ ಡೌನ್ ಲೋಡ್ ಮಾಡಬಹುದು ಎಂದರು.

ಮೌಸ್, ಕೀಬೋರ್ಡ್ ಮತ್ತು ಕನ್ಸೋಲ್ ನಿಯಂತ್ರಕ ಸೇರಿದಂತೆ ವಿವಿಧ ಗೇಮಿಂಗ್ ಪೆರಿಫೆರಲ್​ಗಳನ್ನು ಬೆಂಬಲಿಸುತ್ತದೆ ಎಂದು ವಿನ್ ಪ್ಲೇ ಎಂಜಿನ್ ಹೇಳಿಕೊಂಡಿದೆ. Xbox ನಿಯಂತ್ರಕಗಳು ಟ್ಯಾಬ್ಲೆಟ್ ನೊಂದಿಗೆ ಹ್ಯಾಪ್ಟಿಕ್ಸ್ ಅನ್ನು ಸಹ ಬೆಂಬಲಿಸುತ್ತವೆ. ಏತನ್ಮಧ್ಯೆ, ವಿನ್ ಪ್ಲೇ ಎಂಜಿನ್ ಬಳಸಿ ನಾಲ್ಕು ಜನರೊಂದಿಗೆ ಮಲ್ಟಿಪ್ಲೇಯರ್ ಗೇಮಿಂಗ್ ಅನ್ನು ಸಹ ಆಡಬಹುದು.

ವಿನ್ ಪ್ಲೇ ಮೂಲಕ ಜಿಪಿಯು ಕಾರ್ಯಕ್ಷಮತೆ ಹೆಚ್ಚಿಸುವ ಪ್ರಯತ್ನ: ಆಂಡ್ರಾಯ್ಡ್ ನಲ್ಲಿ ವಿಂಡೋಸ್ ಗೇಮ್​ಗಳನ್ನು ಆಪ್ಟಿಮೈಸ್ ಮಾಡುವುದು ಎಂದರೆ ಒಂದಿಷ್ಟು ಸಮಸ್ಯೆಗಳು ಖಂಡಿತವಾಗಿಯೂ ಉಳಿದುಕೊಂಡಿರುತ್ತವೆ. ಆದಾಗ್ಯೂ, ಶಿಯೋಮಿ ತನ್ನ ಆಂತರಿಕ ಪರೀಕ್ಷೆಗಳ ಪ್ರಕಾರ ವಿನ್ ಪ್ಲೇ ಮೂಲಕ ಜಿಪಿಯು ಕಾರ್ಯಕ್ಷಮತೆಯ ನಷ್ಟವು ಶೇಕಡಾ 2.9 ರಷ್ಟು ಮಾತ್ರ ಆಗಿರುತ್ತದೆ ಎಂದು ಹೇಳಿಕೊಂಡಿದೆ.

"ಟೋಂಬ್ ರೈಡರ್ 9 ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಇದು ಸರಾಸರಿ 45 ಫ್ರೇಮ್ ಗಳಲ್ಲಿ ಚಲಿಸುತ್ತದೆ ಮತ್ತು ಇಡೀ ಯಂತ್ರದ ವಿದ್ಯುತ್ ಬಳಕೆ ಕೇವಲ 8.3W ಆಗಿದೆ. ಇದು ಟ್ಯಾಬ್ಲೆಟ್ ನಲ್ಲಿ ಸ್ಥಳೀಯ ಗೇಮ್​ಗಳನ್ನು ಆಡುವುದಕ್ಕೆ" ಎಂದು ಗುವೊಕ್ವಾನ್ ಹೇಳುತ್ತಾರೆ.

ಅಗತ್ಯ ಎಪಿಐಗಳು, ಇಮೇಜ್ ರೆಂಡರಿಂಗ್ ಮತ್ತು ಕಮಾಂಡ್ ಕಾರ್ಯಗತಗೊಳಿಸುವಿಕೆಯನ್ನು ನಿರ್ವಹಿಸಲು ಶಿಯೋಮಿ ಮೂರು ಪದರಗಳ ವರ್ಚುಯಲೈಸೇಶನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಹಾಗೂ ಕನಿಷ್ಠ ಸಂಪನ್ಮೂಲ ಬಳಕೆಯೊಂದಿಗೆ ತಡೆರಹಿತ ಬಳಕೆದಾರ ಅನುಭವವನ್ನು ಸಾಧಿಸಿದೆ ಎಂದು ಅವರು ತಿಳಿಸಿದರು.

ಬುದ್ಧಿವಂತ ಸಂಪನ್ಮೂಲ ಹಂಚಿಕೆ ವ್ಯವಸ್ಥೆಯು ಲೋಡ್ ನಿಂದ ರೆಂಡರಿಂಗ್ ವರೆಗೆ ತಡೆರಹಿತ ಗೇಮಿಂಗ್​ಗಾಗಿ ಸಿಸ್ಟಮ್ ಸಂಪನ್ಮೂಲ ಹೊರೆಯನ್ನು ಕಡಿಮೆ ಮಾಡುವ ಮೂಲಕ ಗೇಮಿಂಗ್ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.

ವಿಂಡೋಸ್ ಗೇಮ್​ಗಳನ್ನು ಮಾತ್ರ ಬೆಂಬಲಿಸುತ್ತದೆ: ವಿನ್ ಪ್ಲೇ ಪ್ರಸ್ತುತ ಶಿಯೋಮಿ ಪ್ಯಾಡ್ 6 ಎಸ್ ಪ್ರೊನಲ್ಲಿ ವಿಂಡೋಸ್ ಗೇಮ್​ಗಳನ್ನು ಮಾತ್ರ ಬೆಂಬಲಿಸುತ್ತದೆ ಮತ್ತು ಪ್ರಮಾಣಿತ ವಿಂಡೋಸ್ ಅಪ್ಲಿಕೇಶನ್​ಗಳನ್ನು ಬೆಂಬಲಿಸುವುದಿಲ್ಲ ಎಂಬುದು ಗಮನಾರ್ಹ. ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ವೈಶಿಷ್ಟ್ಯವನ್ನು ಪರಿಷ್ಕರಿಸಲು ಕಂಪನಿಯು ಯೋಜಿಸಿದೆ. ಆದಾಗ್ಯೂ ಸ್ಟೇಬಲ್ ವರ್ಷನ್ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಈವರೆಗೂ ಘೋಷಿಸಿಲ್ಲ. ಹೈಪರ್ ಓಎಸ್ 2 ಬೀಟಾದಲ್ಲಿ ಕೆಲಸ ಮಾಡುವ ಪ್ಯಾಡ್ 6 ಎಸ್ ಪ್ರೊ 12.4 ಬೀಟಾ ಪ್ರೋಗ್ರಾಂ ಪ್ರಸ್ತುತ ಸ್ಟೇಬಲ್ ವರ್ಷನ್ ಬಿಡುಗಡೆಗೆ ಮುಂಚಿತವಾಗಿ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಬಳಸಿ ನೋಡುವ ಅವಕಾಶವನ್ನು ನೀಡಿದೆ.

ಇದನ್ನೂ ಓದಿ : 1.29 ಶತಕೋಟಿ ಡಾಲರ್​ಗೆ ತಲುಪಿದ ಭಾರತದ ಕಾಫಿ ರಫ್ತು: 4 ವರ್ಷದಲ್ಲಿ ದ್ವಿಗುಣ, ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವೇ ಕಿಂಗ್ - COFFEE EXPORTS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.