ETV Bharat / education-and-career

UPSC ನೇಮಕಾತಿ; ನಾಗರೀಕ ಸೇವಾ ಪರೀಕ್ಷೆಗೆ ಅಧಿಸೂಚನೆ - CIVIL SERVICE EXAMINATION

ಪ್ರಸಕ್ತ ಸಾಲಿನ ಅಂದರೆ 2025ನೇ ಸಾಲಿನ 'ಗ್ರೂಪ್​ ಎ' ನಾಗರಿಕ ಸೇವಾ ಪರೀಕ್ಷೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ (ಐಎಫ್‌ಎಸ್‌) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Civil Service Examination Notification Released by UPSC
ಯುಪಿಎಸ್​ಸಿ (ಐಎಎನ್​ಎಸ್​)
author img

By ETV Bharat Karnataka Team

Published : Jan 23, 2025, 12:09 PM IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದಿಂದ ದೇಶದ ಅತ್ಯುನ್ನತ ಪರೀಕ್ಷೆಯಾದ ನಾಗರಿಕ ಸೇವಾ ಪರೀಕ್ಷೆಗೆ ಅಧಿಸೂಚನ ಹೊರಡಿಸಲಾಗಿದೆ. ಪ್ರಸಕ್ತ ಸಾಲಿನ ಅಂದರೆ 2025ನೇ ಸಾಲಿನ 'ಗ್ರೂಪ್​ ಎ' ನಾಗರಿಕ ಸೇವಾ ಪರೀಕ್ಷೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ (ಐಎಫ್‌ಎಸ್‌) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ: ಒಟ್ಟು ಹುದ್ದೆಗಳು - 1129

ನಾಗರಿಕ ಸೇವಾ ಪರೀಕ್ಷೆ - 979

ಭಾರತೀಯ ಅರಣ್ಯ ಸೇವಾ ಪರೀಕ್ಷೆ - 150

ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

Civil Service Examination Notification Released by UPSC
ಅಧಿಸೂಚನೆ (UPSC)

ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.

ಅರಣ್ಯ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ, ಗಣಿತ, ಭೌತಶಾಸ್ತ್ರ, ಕೃಷಿ ಪದವಿ, ಅರಣ್ಯಶಾಸ್ತ್ರವನ್ನು ಪದವಿಯಲ್ಲಿ ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು.

ಅರ್ಜಿ ಸಲ್ಲಿಕೆ, ಶುಲ್ಕ : ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಮಹಿಳಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ : ಪ್ರಿಲಿಮ್ಸ್,​ ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ.

ಈ ಹುದ್ದೆಗೆ ಅಭ್ಯರ್ಥಿಗಳು ಜನವರಿ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 11 ಆಗಿದೆ. ಒಟಿಆರ್​ (ಒಂದು ಬಾರಿ ನೋಂದಣಿ) ತಿದ್ದುಪಡಿಗೆ ಕಡೆಯ ದಿನಾಂಕ ಫೆಬ್ರವರಿ 12 ರಿಂದ 18. ಈ ಹುದ್ದೆಗೆ ಮೇ 25ರಂದು ಪರೀಕ್ಷೆ ನಡೆಯಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಮತ್ತು ಅಧಿಸೂಚನೆಗೆ upsc.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: RRB ನೇಮಕಾತಿ; 32,438 ಗ್ರೂಪ್​ ಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ: KPSC ನೇಮಕಾತಿ; ಪಿಡಬ್ಲ್ಯೂಡಿ ಹುದ್ದೆ ಭರ್ತಿಗೆ ಅಧಿಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.