ETV Bharat / bharat

₹43 ಲಕ್ಷ ಖರ್ಚು ಮಾಡಿ ಅಕ್ರಮವಾಗಿ ಅಮೆರಿಕಕ್ಕೆ ತೆರಳಿದ್ದ ಪಂಜಾಬ್​ ಯುವಕ ಸಾವು - INDIAN DIED IN AMERICA

ಅಕ್ರಮವಾಗಿ ಅಮೆರಿಕಕ್ಕೆ ತೆರಳಿದ್ದ ಪಂಜಾಬ್​ ಯುವಕ ಸಾವಿಗೀಡಾಗಿದ್ದಾನೆ. ಆತನ ಪಾರ್ಥಿವ ಶರೀರವನ್ನು ತರಲು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಸಾದರ್ಭಿಕ ಚಿತ್ರ
ಸಾದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Feb 23, 2025, 10:12 PM IST

ಮೊಹಾಲಿ (ಪಂಜಾಬ್​) : ಅಕ್ರಮವಾಗಿ ನೆಲೆಸಿರುವ ಭಾರತೀಯರು ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳ ವಲಸಿಗರನ್ನು ಅಮೆರಿಕ ತನ್ನ ದೇಶದಿಂದ ಹೊರಹಾಕುತ್ತಿದೆ. ಈಗಾಗಲೇ ಭಾರತಕ್ಕೆ 200ಕ್ಕೂ ಹೆಚ್ಚು ಜನರನ್ನು ಅಲ್ಲಿನ ಸೇನಾಪಡೆಗಳು ವಾಪಸ್​ ಕರೆತಂದು ಬಿಟ್ಟಿವೆ. ಈ ಮಧ್ಯೆ ಕೆನಡಾದ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಹೊರಟಿದ್ದ ಭಾರತೀಯ ಯುವಕನೊಬ್ಬ ಕಾಂಬೋಡಿಯಾದಲ್ಲಿ ಮೃತಪಟ್ಟಿದ್ದಾನೆ.

ಪಂಜಾಬ್​​ನ ಮೊಹಾಲಿಯ ಗ್ರಾಮವೊಂದರ 24 ವರ್ಷದ ರಣದೀಪ್​ ಸಿಂಗ್​ ಮೃತ ಯುವಕ. ಕಾಂಬೋಡಿಯಾದಲ್ಲಿ ಆತ ಕಳೆದ 8 ತಿಂಗಳಿನಿಂದ ಸಿಕ್ಕಿಬಿದ್ದಿದ್ದು, ಅನಾರೋಗ್ಯಕ್ಕೀಡಾಗಿ ಅಲ್ಲಿಯೇ ಸಾವಿಗೀಡಾಗಿದ್ದಾನೆ. ಶವವನ್ನು ಭಾರತಕ್ಕೆ ತರಲು ನೆರವು ನೀಡಬೇಕು ಎಂದು ಕುಟುಂಬಸ್ಥರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

₹43 ಲಕ್ಷ ವ್ಯಯಿಸಿ ಅಮೆರಿಕಕ್ಕೆ : ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ರಣದೀಪ್​ ಸಿಂಗ್ ಅಮೆರಿಕಕ್ಕೆ ತೆರಳುವ ಯಾವುದೇ ಅರ್ಹತೆ ಹೊಂದಿರಲಿಲ್ಲ. ಏಜೆಂಟರ ಸಹಾಯದಿಂದ ಅಮೆರಿಕಕ್ಕೆ ತೆರಳಲು ಪ್ರಯತ್ನಿಸಿದ್ದ. ಅನ್ಯ ಮಾರ್ಗದಿಂದ ಆತನನ್ನು ಕರೆದೊಯ್ಯಲು ಏಜೆಂಟ್​ ಭರವಸೆ ನೀಡಿದ್ದ. ಇದಕ್ಕಾಗಿ 43 ಲಕ್ಷ ರೂಪಾಯಿ ನೀಡಿದ್ದ. ಮೊದಲು 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.

ರಣದೀಪ್​ ಕುಟುಂಬದಲ್ಲಿಯೇ ಕಿರಿಯ ಪುತ್ರ. 10ನೇ ತರಗತಿ ಅಭ್ಯಾಸ ಮಾಡಿರುವ ಈತ, ಅಮೆರಿಕದಲ್ಲಿ ದುಡಿಮೆ ಮಾಡಲು ಬಯಸಿದ್ದ. ಏಜೆಂಟರು ಕೇಳಿದಷ್ಟು ಹಣ ನೀಡಿ, 2024ರ ಜೂನ್ 1 ರಂದು ಆತ ಅಮೆರಿಕಕ್ಕೆ ತೆರಳಿದ್ದ. ಆದರೆ, ಅಲ್ಲಿಗೆ ನೇರವಾಗಿ ತೆರಳಲು ಸಾಧ್ಯವಿರಲಿಲ್ಲ. ಜೊತೆಗೆ, ಡೊನಾಲ್ಡ್​​ ಟ್ರಂಪ್ ಸರ್ಕಾರ ಅಕ್ರಮ ನಿವಾಸಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಹೀಗಾಗಿ ಗಡಿಯಾಚೆ ಸಿಲುಕಿದ್ದರು ಎಂದಿದ್ದಾರೆ.

ಶವ ತಾಯ್ನಾಡಿಗೆ ತನ್ನಿ : ಬಳಿಕ ಏಜೆಂಟರು ಆತನನ್ನು ವಾಪಸ್​ ಭಾರತಕ್ಕೆ ಕರೆದು ತಾರದೆ, ಅಮೆರಿಕಕ್ಕೂ ಕಳುಹಿಸಲಿಲ್ಲ. ಇದಕ್ಕೂ ಮೊದಲು ಆತನನ್ನು 8 ತಿಂಗಳು ಕಾಲ ವಿಯೆಟ್ನಾಂ ಮತ್ತು ಕಾಂಬೋಡಿಯಾದಲ್ಲಿ ಇರಿಸಲಾಗಿತ್ತು. ಈ ವೇಳೆ, ಅನಾರೋಗ್ಯಕ್ಕೆ ಒಳಗಾಗಿದ್ದ. ಸೂಕ್ತ ಚಿಕಿತ್ಸೆ ಸಿಗದ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ರಣದೀಪ್​ನ ಪಾಸ್​​ಪೋರ್ಟ್​ ಅನ್ನು ಏಜೆಂಟ್​ ಕಿತ್ತುಕೊಂಡಿದ್ದರಿಂದ ಆತ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಏಜೆಂಟರ ವಿರುದ್ಧ ಕ್ರಮ ಜರುಗಿಸಬೇಕು. ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಬೇಕು ಎಂದು ಪಂಜಾಬ್​ನ ಆಪ್​ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ 32 ತಮಿಳು ಮೀನುಗಾರರ ಬಂಧನ, 5 ದುಬಾರಿ ಬೋಟ್​ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.