ಮೈಸೂರು: ಒಕ್ಕಲಿಗ ಸಮುದಾಯದಲ್ಲಿ ಪರ್ಯಾಯವಾಗಿ ಡಿ.ಕೆ. ಶಿವಕುಮಾರ್ ಅವರು ನಾಯಕರಾಗಿ ಎಮರ್ಜ್ ಆಗುತ್ತಿದ್ದಾರೆ ಎಂಬ ಉದ್ದೇಶ ಇಟ್ಟುಕೊಂಡು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರತಿ ದಿನ ಸುದ್ದಿಗೋಷ್ಠಿ ನಡೆಸುತ್ತಾ ಹೆಚ್.ಡಿ. ಕುಮಾರಸ್ವಾಮಿ ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್ ದೂರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರೇ ನಿಮ್ಮ ಡಿಮ್ಯಾಂಡ್ ಏನು ಎಂಬುದನ್ನು ಸ್ಪಷ್ಟಪಡಿಸಿ. ನಿನ್ನೆ ಕುಮಾರಸ್ವಾಮಿ ಅವರು ಮತ್ತ ಅವರ ಟೀಮ್ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಕುಮಾರಸ್ವಾಮಿಯವರೇ ನಿಮಗೆ ಸಂತ್ರಸ್ತೆಯರ ಬಗ್ಗೆ ಕಾಳಜಿ ಇದೆಯಾ, ಇಲ್ವಾ?. ಸಂತ್ರಸ್ತೆಯರ ಬಗ್ಗೆ ಒಂದು ದಿನವು ಮಾತನಾಡಲಿಲ್ಲ ಏಕೆ?. ಯಾವ ವಿಷಯವಾಗಿ ನೀವು ರಾಜ್ಯಪಾಲರನ್ನು ಭೇಟಿ ಮಾಡಿದ್ದೀರಿ?. ಅವರಿಗೆ ಏನು ಮನವಿಯನ್ನು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ತಮ್ಮ ಅಣ್ಣನ ಮಗನ ವಿಚಾರವಾಗಿ ತನಿಖೆ ಮಾಡಬರದು ಎಂದು ಮನವಿ ಕೊಟ್ಟಿದ್ದೀರಾ?. ಇಲ್ಲವೆಂದರೆ ಅಮಿತ್ ಶಾ ಅವರು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರವಾಗುವಂತೆ ಮಾಡಿಸಿ ಅಲ್ಲಿ ನಾವು ಪ್ರಕರಣವನ್ನು ಮುಚ್ಚಿ ಹಾಕುತ್ತೇವೆ ಎಂಬ ಹಿಂಟ್ ಅನ್ನು ಕೊಟ್ಟಿದ್ದಾರಾ?. ಕಳೆದ ಎರಡ್ಮೂರು ದಿನಗಳಿಂದ ಸಿಬಿಐ ಮೇಲೆ ಅಪಾರ ಪ್ರೀತಿ - ಗೌರವ ಇಟ್ಟುಕೊಂಡು ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯಿಸುತ್ತಿದ್ದೀರಿ. ಎಸ್ಐಟಿ ಅಧಿಕಾರ ತನಿಖೆ ನಿಮಗೆ ತೃಪ್ತಿದಾಯಕವಾಗಿಲ್ಲದಿದ್ದರೆ ಕಾರಣಗಳನ್ನು ಕೊಡಿ. ನಿಮ್ಮ ಸಮಸ್ಯೆ ಏನು?. ದಿನ ನಾಲ್ಕು ಬಾರಿ ಸುದ್ದಿಗೋಷ್ಠಿ ನಡೆಸುತ್ತೀರಿ. ಈ ಪ್ರರಣದ ತನಿಖೆಯ ದಿಕ್ಕು ತಪ್ಪಿಸಲು ಹುನ್ನಾರ ಮಾಡಿದ್ದೀರಿ ಎಂದು ಆರೋಪಿಸಿದರು.
ಪ್ರಜ್ವಲ್ ಎಲ್ಲಿದ್ದಾನೆ ಎಂದು ಗೊತ್ತಿಲ್ವಾ?, ಅವನನ್ನು ಕರೆಸಿ ಎಸ್ಐಟಿಗೆ ಒಪ್ಪಿಸಬೇಕು ಎಂಬ ಪರಿಜ್ಞಾನ ಇಲ್ಲವೇ ನಿಮಗೆ. ನನ್ನಗಿರುವ ಮಾಹಿತಿ ಪ್ರಕಾರ ಪ್ರಜ್ವಲ್ ನಿತ್ಯಾನಂದನ ಲಿಂಕ್ ತೆಗೆದುಕೊಂಡು ಅವರು ಇವರು ಜಾಗಕ್ಕೆ ಹೋಗುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ವಲ್ ಯಾಕೆ ವಾಪಸ್ ಬರುತ್ತಿಲ್ಲ ಅದರ ಬಗ್ಗೆ ಮಾತನಾಡಿ ಕುಮಾರಸ್ವಾಮಿಯವರೇ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಪ್ರಕರಣ; ದೇವರಾಜೇಗೌಡ, ಕಾರ್ತಿಕ್‌ಗೆ ಎಸ್ಐಟಿ ನೋಟಿಸ್ - Hassan Obscene Video Case