ಹುಬ್ಬಳ್ಳಿ: ಕಲಘಟಗಿ ತಾಲೂಕು ಮಿಶ್ರಿಕೋಟಿ ಕ್ರಾಸ್ ಹತ್ತಿರದ ಪಾಟೀಲ್ ಎಂಬವರ ಗೋದಾಮಿನ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಕಲಘಟಗಿ ಠಾಣೆ ಪೊಲೀಸರು, ಸುಮಾರು 32 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಕಲಘಟಗಿ ಗೋದಾಮಿನಿಂದ ನಕಲಿ ಮದ್ಯ ವಶಕ್ಕೆ (ETV Bharat) ಹುಬ್ಬಳ್ಳಿಯ ವಿನಾಯಕ ಮನೋಹರ ಜಿತೂರಿ, ಆನಂದ ನಗರದ ವಿನಾಯಕ ಅಶೋಕ ಸಿದ್ದಿಂಗ, ಚನ್ನಪೇಟೆಯ ಈಶ್ವರ ಅರ್ಜುನ ಪವಾರ ಹಾಗೂ ನೇಕಾರ ನಗರದ ರೋಹಿತ ರಾಜೇಶ್ ಅರಸಿದ್ಧಿ ಎಂಬವರನ್ನು ಬಂಧಿಸಿದ್ದಾರೆ.
ಗೋದಾಮಿನಲ್ಲಿ ನಕಲಿ ಮದ್ಯಕ್ಕೆ ಅಮಲು ಬರುವ ಪದಾರ್ಥ, ಬಣ್ಣ ಮಿಶ್ರಣ ಮಾಡಿ ಖಾಲಿ ಬಾಟಲ್‌ಗಳಿಗೆ ತುಂಬಿ ದುಬಾರಿ ಬ್ರಾಂಡ್‌ನ ಲೇಬಲ್ ಅಂಟಿಸಿ ನಕಲಿ ಮದ್ಯ ತಯಾರಿಕೆ ನಡೆಯುತ್ತಿತ್ತು.
ಕಲಘಟಗಿ ಠಾಣೆ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಧಾರವಾಡ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ, ಡಿಎಸ್‌ಪಿ ಎಸ್.ಎಂ.ನಾಗರಾಜ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಹಾವೇರಿ: ಮೂರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: 23 ಲಕ್ಷ ಮೌಲ್ಯದ 29 ಬೈಕ್ ವಶ