ಗಂಗಾವತಿ (ಕೊಪ್ಪಳ): ತಾಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ಈಜಲು ಹೋದಾಗ ಕಾಲು ಜಾರಿ ಕೆರೆಯ ಅಳಕ್ಕೆ ಹೋಗಿ ಮುಳುಗುತ್ತಿದ್ದ ಇಸ್ರೇಲ್ ಪ್ರಜೆಯನ್ನು ಸಹ ಪ್ರವಾಸಿಗರು ರಕ್ಷಿಸಿದ್ದಾರೆ.
ಗಂಗಾವತಿ: ಕೆರೆಯಲ್ಲಿ ಮುಳುಗುತ್ತಿದ್ದ ಇಸ್ರೇಲ್ ಪ್ರಜೆ ರಕ್ಷಣೆ - ISRAEL CITIZEN RESCUED
ಕೆರೆಯ ಅಳದಲ್ಲಿ ಮುಳುಗುತ್ತಿದ್ದ ಇಸ್ರೇಲ್ ಪ್ರಜೆಯನ್ನು ಸಹ ಪ್ರವಾಸಿಗರು ರಕ್ಷಿಸಿರುವ ಘಟನೆ ಗಂಗಾವತಿಯ ಸಾಣಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.
ಕೆರೆಯಲ್ಲಿ ಮುಳುಗುತ್ತಿದ್ದ ಇಸ್ರೇಲ್ ಪ್ರಜೆ ರಕ್ಷಣೆ (ETV Bharat)
Published : Oct 23, 2024, 9:46 PM IST
ಸಾವಿನ ದವಡೆಯಿಂದ ಪಾರಾದ ಇಸ್ರೇಲ್ ದೇಶದ ಜೇರುಸೆಲಂನ ಲೇವಿಅಮಿಟ್ ತನ್ನ ಸ್ನೇಹಿತರ ಜೊತೆಗೆ ಹಂಪಿ ಹಾಗೂ ಆನೆಗೊಂದಿ ಭಾಗದಲ್ಲಿ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಿ ತಾಣದಲ್ಲಿ ಸುತ್ತಾಡಿದ ಬಳಿಕ ಆರಂಭದಲ್ಲಿ ಕೆರೆಯ ದಡದಲ್ಲಿ ಸ್ವಲ್ಪ ನೀರಿದ್ದ ಜಾಗದಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ಕೆರೆಯ ಅಳಕ್ಕೆ ಹೋಗಿದ್ದರು. ಆಗ ಅವರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸಹ ಪ್ರವಾಸಿಗರು ಜೀವ ಉಳಿಸಿದ್ದಾರೆ.
ಇದನ್ನೂ ಓದಿ:18 ಮಕ್ಕಳ ಸಮೇತ ನದಿಗೆ ಬಿದ್ದ ಶಾಲಾ ವಾಹನ