ಕರ್ನಾಟಕ

karnataka

ETV Bharat / state

ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ : ಗೃಹ ಸಚಿವ ಡಾ ಜಿ ಪರಮೇಶ್ವರ್ - HOME MINISTER DR G PARAMESHWAR

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸಂಪುಟ ಪುನರ್ ರಚನೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

dr-g-parameshwar
ಗೃಹ ಸಚಿವ ಡಾ ಜಿ ಪರಮೇಶ್ವರ್ (ETV Bharat)

By ETV Bharat Karnataka Team

Published : Nov 21, 2024, 8:38 PM IST

ಮೈಸೂರು : ಸಚಿವ‌ ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಇಂದು ಮೈಸೂರಿನ ಕಾಂಗ್ರೆಸ್ ಭವನದ ಬಳಿ ಮಾಧ್ಯಮವರೊಂದಿಗೆ ಅವರು ಮಾತನಾಡಿದರು. ಸಿಎಂ ದೆಹಲಿಗೆ ಭೇಟಿ ನೀಡಿದ್ದಾರೆ, ಸಚಿವ ಸಂಪುಟ ಪುನಾರಚನೆ ಏನಾದ್ರು ಆಗುತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಗೊತ್ತಿರುವ ಹಾಗೆ ಸಿಎಂ ಅಲ್ಲಿಯೊಂದು ಸಹಕಾರ ಇಲಾಖೆಯ ಕಾರ್ಯಕ್ರಮವಿದೆ. ಆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅದು ಬಿಟ್ಟರೆ ಬೇರೆ ಯಾವ ಬೆಳವಣಿಗೆ ಇರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಮಾತನಾಡಿದರು (ETV Bharat)

ವಕ್ಫ್​ ಕುರಿತು ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ : ವಿರೋಧ ಪಕ್ಷವಾಗಿ‌ ಅವರ ಕೆಲಸವನ್ನ ಮಾಡಿದ್ದಾರೆ. ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ವಕ್ಫ್ ಇಲಾಖೆಯವರು ನೋಟಿಸ್ ಕೊಟ್ಟಿದ್ರು, ನಾವದನ್ನ ವಾಪಸ್​ ತೆಗೆದುಕೊಳ್ಳಬೇಕು. ಆನಂತರ ಅದನ್ನೆಲ್ಲಾ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೂ ಇವರು ರಾಜಕೀಯ ಕಾರಣಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ಸಂಪುಟದಿಂದ ಕೆಲವು ಸಚಿವರನ್ನು ಕೈ ಬಿಡುವ ವಿಚಾರದ ಕುರಿತು ಮಾತನಾಡಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ಅದನ್ನೆಲ್ಲಾ ನಮಗೆಲ್ಲ ಹೇಳಿ ಮಾಡುವುದಿಲ್ಲ, ಅವರು ಹಾಗೂ ಹೈಕಮಾಂಡ್​ನವರು ಚರ್ಚೆ ಮಾಡಿಕೊಂಡು ಸಂದರ್ಭಾನುಸಾರವಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಜಮೀರ್ ಅಹಮ್ಮದ್ ಅವರನ್ನ ಕೈ ಬಿಡುತ್ತಾರೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಎಕ್ಸಿಟ್​ ಪೋಲ್​ನಲ್ಲಿ ಎನ್​ಡಿಎ ಪರವಾಗಿ ರಿಸಲ್ಟ್​ ಬರಲಿದೆ ಎಂದು ಕಂಡುಬರುತ್ತಿದೆ ಎಂಬ ಪ್ರಶ್ನೆಗೆ, ಎಕ್ಸಿಟ್​ ಪೋಲ್​ಗಳು ಎಲ್ಲಾ ಸಂದರ್ಭಗಳಲ್ಲಿ ನಿಜವಾಗುವುದಿಲ್ಲ. ನಾನು ಮಹಾರಾಷ್ಟ್ರ ಉಸ್ತುವಾರಿ ಇದ್ದೆ. ಅಲ್ಲಿ ವಾತಾವರಣ ಬೇರೆಯೇ ಇದೆ. ಅದರಲ್ಲಿ ಎರಡು ಮೂರು ಚಾನಲ್​ನವರು ಮಹಾ ಅಘಾಡಿಗೆ 162 ಸೀಟು ಕೊಟ್ಟಿದ್ದಾರೆ. ಬಿಜೆಪಿಗೆ ಅವರ ಅಲಯನ್ಸ್​​​ಗೆ 128 ಸೀಟು​ ಕೊಟ್ಟಿದ್ದಾರೆ. ಅದಕ್ಕೇನು ಹೇಳಬೇಕು ನಾವು. ಕೆಲವರು ಎನ್​ಡಿಎ ಪರವಾಗಿ ಕೊಟ್ಟಿದ್ದಾರೆ, ಕೆಲವರು ಇಂಡಿಯಾ ಪರವಾಗಿ ಕೊಟ್ಟಿದ್ದಾರೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತೆ ಎಂದು ನನಗೆ ವಿಶ್ವಾಸ ಇದೆ ಎಂದಿದ್ದಾರೆ. ರಾಜ್ಯದಲ್ಲಿ ಮೂರು ಉಪ ಚುನಾವಣೆಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಮಗೆ ಇರುವ ಮಾಹಿತಿ ಪ್ರಕಾರ ಮೂರರಲ್ಲಿಯೂ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವನ್ನ ಮೊದಲು ಕೇಳಲಿ : ಬಿಪಿಎಲ್ ಕಾರ್ಡ್ ರದ್ದತಿ ವಿಚಾರದಲ್ಲಿ ಕಾಂಗ್ರೆಸ್​ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಮೊದಲು ಕೇಂದ್ರ ಸರ್ಕಾರವನ್ನು ಕೇಳಬೇಕು. ಬಿಜೆಪಿಯವರು ರಾಜ್ಯದಲ್ಲಿ ನಮ್ಮನ್ನ ಕೇಳುವ ಮೊದಲು ಕೇಂದ್ರ ಸರ್ಕಾರ 5.8 ಕೋಟಿ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಿದೆ. ಅವರನ್ನ ಕೇಳಲಿ ಮೊದಲು, ಆಮೇಲೆ ನಮ್ಮನ್ನ ಕೇಳಲಿ ಎಂದಿದ್ದಾರೆ.

ದರ್ಶನ್​ಗೆ ಹೆಚ್ಚುವರಿ ಜಾಮೀನು ನೀಡದಂತೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ : ನಟ ದರ್ಶನ್​ಗೆ ಟ್ರೀಟ್​ಮೆಂಟ್​ ತೆಗೆದುಕೊಳ್ಳಲು ಕೋರ್ಟ್​ ಬೇಲ್​ ಕೊಟ್ಟಿದೆ. ಮೂರು ತಿಂಗಳ ನಂತರ ಅವರು ವಾಪಸ್​ ಹೋಗಬೇಕಾಗುತ್ತೆ. ಅದಕ್ಕೆ ಮುಂದುವರೆದು ಅವರೇನಾದರೂ ಬೇಲ್ ಕೇಳುತ್ತಾರಾ ಗೊತ್ತಿಲ್ಲ. ನಾವು ಬೇಲ್ ಕೊಡಬಾರದು ಎಂದು ಅಪೀಲ್ ಮಾಡಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ನಡೆದಿದೆ ಎಂದು ತಿಳಿಸಿದ್ದಾರೆ.

ನಟ ದರ್ಶನ್ ಪ್ರಕರಣದ ಅಡಿಷನಲ್ ಚಾರ್ಜ್​ ಶೀಟ್​ ಯಾವಾಗ ಸಲ್ಲಿಕೆಯಾಗಲಿದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇನ್ನು ಒಂದಷ್ಟು ಸಾಕ್ಷ್ಯಾಧಾರಗಳನ್ನ ಕಲೆ ಹಾಕುವ ಕೆಲಸ ನಡೆಯುತ್ತಿದೆ. ಇನ್ವೆಸ್ಟಿಗೇಷನ್ ಸಂಪೂರ್ಣವಾದ ನಂತರ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸೈಬರ್ ಪೊಲೀಸ್ ಸ್ಟೇಷನ್ ಮಾಡಿದ್ದೇವೆ: ಡಿಜಿಟಲ್ ಅರೆಸ್ಟ್‌ ಕುರಿತು ಮಾತನಾಡಿದ ಅವರು, ನಮ್ಮಲ್ಲಿ ಈಗ ಸೆನ್ ಪೊಲೀಸ್ ಸ್ಟೇಷನ್ ಎಂದು ಮಾಡಿದ್ದೇವೆ. ಎಲ್ಲ ಜಿಲ್ಲೆಯಲ್ಲಿ ಸೈಬರ್ ಪೊಲೀಸ್ ಸ್ಟೇಷನ್ ಮಾಡಿದ್ದೇವೆ. ಅದರಲ್ಲಿ ವೆರಿಫಿಕೇಷನ್​ ಮಾಡಿಯೇ ಮುಂದುವರೆಯುತ್ತಾರೆ. ಹಾಗೆ ಯಾರದ್ರು ಮಾಡಿದ್ರೆ ಅದು ಸರಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಬಡವರ ಅನ್ನ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ತಟ್ಟಲಿದೆ: ಪ್ರತಿಭಟನೆಯ ಎಚ್ಚರಿಕೆ ನೀಡಿದ ಆರ್‌.ಅಶೋಕ್

ABOUT THE AUTHOR

...view details