ಕರ್ನಾಟಕ

karnataka

ETV Bharat / state

ಚಾಮರಾಜನಗರ: ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು, ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ - BANANA CROP LOSS

ಶನಿವಾರ ಬಿರುಗಾಳಿ ಸಹಿತ ಸುರಿದ ಅಪಾರ ಮಳೆಗೆ ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮೂಡ್ಲು, ಉತ್ತುವಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಬಾಳೆ ನೆಲಕಚ್ಚಿದೆ.

Banana crop destroyed by rain
ಮಳೆಗೆ ಬಾಳೆ ಬೆಳೆ ನೆಲಕಚ್ಚಿರುವುದು (ETV Bharat)

By ETV Bharat Karnataka Team

Published : May 12, 2024, 8:42 PM IST

Updated : May 12, 2024, 8:49 PM IST

ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಬೆಳೆ (ETV Bharat)

ಚಾಮರಾಜನಗರ:ಗಡಿಜಿಲ್ಲೆ ಚಾಮರಾಜನಗರದಲ್ಲಿ ಸುರಿದ ಮಳೆಗೆ ಕೆಲ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಬಾಳೆ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ. ಶನಿವಾರ ಸುರಿದ ಬಿರುಗಾಳಿ ಸಮೇತ ಸುರಿದ ಮಳೆಗೆ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕಚ್ಚಿದ್ದು ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ತಣ್ಣೀರೆರಚಿದೆ.

ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮೂಡ್ಲು, ಉತ್ತುವಳ್ಳಿ, ದೊಡ್ಡಮೋಳೆ, ಡೊಳ್ಳಿಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಬಾಳೆ ನೆಲಕಚ್ಚಿದೆ. ಇನ್ನು 15 ದಿನಗಳಲ್ಲಿ ಬಾಳೆ ಕಟಾವಿಗೆ ಬಂದಿದ್ದು ಬಂಪರ್ ಲಾಭದಲ್ಲಿ ರೈತರು ನಿರೀಕ್ಷೆಯಲ್ಲಿದ್ದರು.

ಸದ್ಯ ಮಾರುಕಟ್ಟೆಯಲ್ಲಿ ನೇಂದ್ರ ಬಾಳೆಗೆ 40 ರೂ. ಏಲಕ್ಕಿ ಬಾಳೆಗೆ 45, ಚಂದ್ರಬಾಳೆಗೆ 35 ರೂ. ದರವಿದೆ. ಏನಿಲ್ಲವೆಂದರೂ 2 ಎಕರೆಯಲ್ಲಿ ಬೆಳೆದ ರೈತ 12-15 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದ. ಈ ಹೊತ್ತಲ್ಲೇ ಮಳೆ ಗಾಳಿಗೆ ಬಾಳೆ ಬೆಳೆ ನೆಲ ಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.

ರೈತನ ಕಣ್ಣೀರು:ಲಕ್ಷಾಂತರ ರೂಪಾಯಿ ಸಾಲ ಮಾಡಿ ಎರಡು ಎಕರೆಯಲ್ಲಿ 4500 ಬಾಳೆ ಗಿಡಗಳನ್ನು ಹಾಕಿದ್ದೆನು. ಉತ್ತಮವಾಗಿ ಬಂದಿದ್ದ ನೇಂದ್ರ ಬಾಳೆ ಫಸಲನ್ನು ಮುಂದಿನ 8 ದಿನದಲ್ಲಿ ಕಟಾವು ಮಾಡಬೇಕು ಅಂದುಕೊಂಡಿದ್ದೆ. ಶನಿವಾರ ಗಾಳಿ-ಮಳೆ ಬರಸಿಡಿಲಿನ ರೀತಿ ಅಪ್ಪಳಿಸಿದ್ದು 4 ಸಾವಿರ ಬಾಳೆ ಗಿಡಗಳು ನೆಲಕಚ್ಚಿವೆ. 17-20 ಲಕ್ಷ ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮಗೆ ಅಪಾರ ನಷ್ಟವಾಗಿದೆ ಎಂದು ದೇವರಾಜಪುರದ ರೈತ ಬಸವರಾಜು ಮಾಧ್ಯಮದವರ ಎದುರು ರೈತ ಕಣ್ಣೀರು ಹಾಕಿದರು.

6 ಸಾವಿರ ರೂ‌. ಪರಿಹಾರ ಬೇಡ:ಕುರುಬ ಸಮುದಾಯದಮುಖಂಡ ರಾಜಶೇಖರ್ ಮಾಧ್ಯಮದವರೊಂದಿಗೆ ಮಾತನಾಡಿ, ಬಾಳೆ ಬೆಳೆಯಲು ರೈತ ಎಕರೆಗೆ ಕನಿಷ್ಠ ಅಂದ್ರೂ 1 ಲಕ್ಷ ರೂ. ಖರ್ಚು ಮಾಡಿರುತ್ತಾನೆ. ಸರ್ಕಾರ ಎಕರೆಗೆ 6 ಸಾವಿರ ಬೆಳೆಹಾನಿ ಪರಿಹಾರ ಕೊಡುವುದು ತೀರಾ ಅವೈಜ್ಞಾನಿಕವಾಗಿದೆ. ರೈತರನ್ನು ಸಾಲದ ಸುಳಿಯಿಂದ ಸಂರಕ್ಷಿಸುವುದು ಸರ್ಕಾರದ ಹೊಣೆ. ಸರ್ಕಾರ 1 ಎಕರೆಗೆ 1 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಬಿರುಗಾಳಿ ಸಹಿತ ಸುರಿದ ಮಳೆಗೆ ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕ್ಕುರಳಿವೆ. ರೈತರಿಗೆ ಅಪಾರ ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡುತ್ತದೆಯೋ ಕಾದು ನೋಡಬೇಕು.

ಇದನ್ನೂಓದಿ:ಮಲೆನಾಡು ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ - RAIN FALL IN KARNATAKA

Last Updated : May 12, 2024, 8:49 PM IST

ABOUT THE AUTHOR

...view details