ಕರ್ನಾಟಕ

karnataka

ETV Bharat / state

ವಾಣಿಜ್ಯ ನಗರಿಗೆ ಮೆತ್ತಿದ್ದ ಗಾಂಜಾ ಘಾಟು: ಡ್ರಗ್ಸ್, ಗಾಂಜಾ ಮಾಫಿಯಾ ಬಗ್ಗೆ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ಹೀಗಿದೆ - Drug Sales

ವಾಣಿಜ್ಯ ನಗರಿಯಲ್ಲಿ ಗಾಂಜಾ ಘಾಟು ಹೆಚ್ಚಾಗಿದ್ದು, ಈ ಮಾಫಿಯಾ ಬಗ್ಗೆ ಕಮಿಷನರ್ ಶಶಿಕುಮಾರ್ ಹೀಗೆ ಹೇಳಿದ್ದಾರೆ.

COMMISSIONER CLARIFIED ON DRUG BUST
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ (ETV Bharat)

By ETV Bharat Karnataka Team

Published : Sep 5, 2024, 10:10 PM IST

ವಾಣಿಜ್ಯ ನಗರಿಗೆ ಮೆತ್ತಿದ್ದ ಗಾಂಜಾ ಘಾಟು: ಡ್ರಗ್ಸ್, ಗಾಂಜಾ ಮಾಫಿಯಾ ಬಗ್ಗೆ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ಹೀಗಿದೆ (ETV Bharat)

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲು. ಈ ಭಾಗದ ವ್ಯಾಪಾರ, ವಹಿವಾಟಿಗೆ ಕೇಂದ್ರ ಬಿಂದು ಆಗಿದ್ದರಿಂದ ನಗರ ಇದೀಗ ಮಾದಕ ವಸ್ತು ಮಾರಾಟ ಮಾಡುವವರ ಫೇವರಿಟ್​ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಇತ್ತೀಚಿಗೆ ಹುಬ್ಬಳ್ಳಿಯ ಪೊಲೀಸರು ಗಾಂಜಾ, ಅಫೀಮ್, ಡ್ರಗ್ ವಿರುದ್ಧ ನಡೆಸಿದ ಕಾರ್ಯಾಚರಣೆ ಇದಕ್ಕೆ ಸಾಕ್ಷಿ.

ವಶಪಡಿಸಿಕೊಳ್ಳಲಾದ ಮಾದಕ ವಸ್ತು (ETV Bharat)

ಹುಬ್ಬಳ್ಳಿಯಲ್ಲಿಯೇ ಗಾಂಜಾ ಏಕೆ ಹೆಚ್ಚು?:ಹುಬ್ಬಳ್ಳಿ ವ್ಯಾಪಾರ ವಹಿವಾಟಕ್ಕೆ ಸುಲಭದ ಸ್ಥಳ. ಹಲವು ಗಡಿ ರಾಜ್ಯಗಳ ಸಂಪರ್ಕ ಹೊಂದಿವೆ. ಅಲ್ಲದೇ ದೂರದ ರಾಜಸ್ಥಾನ, ಗುಜರಾತ್ ರಾಜ್ಯದವರು ವ್ಯಾಪಾರಕ್ಕೆಂದು ಹುಬ್ಬಳ್ಳಿಗೆ ಆಗಮಿಸುತ್ತಲೇ ಇರುತ್ತಾರೆ. ಅಲ್ಲಿಂದ ಇಲ್ಲಿಗೆ ಉತ್ತಮ ಬಸ್ ಮತ್ತು ರೈಲ್ವೆ ಸಂಪರ್ಕ ಇರುವುದರಿಂದ ವ್ಯಾಪಾರ ಮಾಡಲು ಸುಲಭ. ಆದರೆ, ಅಲ್ಲಿಂದ ಇಲ್ಲಿಗೆ ಬರುವಾಗ ಕೆಲವರು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದು ತನಿಖೆ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾದ ಮಾದಕ ವಸ್ತು (ETV Bharat)

ಪ್ರತಿದಿನ ರಾಜ್ಯದ ನಾನಾ ಜಿಲ್ಲೆ ಹಾಗೂ ರಾಜ್ಯಗಳಿಂದ ಲಕ್ಷಾಂತರ ಜನರ ಓಡಾಡುತ್ತಾರೆ. ಇಲ್ಲಿಯ ವಿದ್ಯಾರ್ಥಿ, ಕಾರ್ಮಿಕರೇ ಇವರ ಟಾರ್ಗೆಟ್ ಆಗಿದ್ದರಿಂದ ವ್ಯಾಪಾರಕ್ಕೆ ಸುಲಭ. ಹೀಗಾಗಿ, ಹುಬ್ಬಳ್ಳಿ ಗಾಂಜಾ, ಡ್ರಗ್ ಮಾರಾಟಗಾರ ಅಚ್ಚುಮೆಚ್ಚಿನ ತಾಣವಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ವಶಪಡಿಸಿಕೊಳ್ಳಲಾದ ಮಾದಕ ವಸ್ತು (ETV Bharat)

100 ಜನ ಪೆಡ್ಲರ್​ಗಳ ಬಂಧನ:ಈ ದಂಧೆಯ ಹಿಂದೆ ಬಿದ್ದಿರುವ ನಗರದ ಪೊಲೀಸರು,ಕಳೆದ ಹಲವು ದಿನಗಳಿಂದ ನಗರದಲ್ಲಿ ನೆಲೆಯೂರಿದ್ದ ಡ್ರಗ್ಸ್, ಗಾಂಜಾ ದೊಡ್ಡ ಜಾಲಕ್ಕೆ ಬಿಸಿ ಮುಟ್ಟಿಸಿದ್ದಾರೆ. ಇದನ್ನು ಬೇರುಸಮೇತ ಕಿತ್ತುಹಾಕಲು ಕಾರ್ಯೋನ್ಮುಖವಾಗಿದೆ. ಈಗಾಗಲೇ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಡ್ರಗ್ಸ್ ಪೆಡ್ಲರ್, ಮಾರಾಟಗಾರರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಗಾಂಜಾ, ಡ್ರಗ್ಸ್ ಮಾರಾಟವಾಗುವ ಸ್ಥಳ ಗುರುತಿಸಿ ಅಲ್ಲಿ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಇದಕ್ಕಾಗಿಯೇ ವಿಶೇಷ ತಂಡ ರಚಿಸುವ ಮೂಲಕ ಡ್ರಗ್ಸ್ ಪೆಡ್ಲರ್ ಬಂಧನ ಮಾಡಲಾಗಿದೆ. ಇಲ್ಲಿಯವರೆಗೂ 100 ಜನ ಗಾಂಜಾ ಪೆಡ್ಲರ್​ಗಳನ್ನು ಬಂಧಿಸಲಾಗಿದೆ.

ಅದರ ಜೊತೆಗೆ ಗಾಂಜಾ ಸೇವನೆ ಮಾಡುವವರ ಮೇಲೂ ಕ್ರಮ ತಗೆದುಕೊಳ್ಳಲಾಗಿದೆ. ಇಲ್ಲಿಯವರೆಗೂ ಮೂರು ಪ್ರತ್ಯೇಕ ದಾಳಿ ನಡೆಸಲಾಗಿದೆ. ಮೊದಲ ಹಂತದಲ್ಲಿ 255 ಜನರ ಮೇಲೆ 51 ಕೇಸ್ ದಾಖಲು ಮಾಡಲಾಗಿದೆ. ಮೂರನೇ ಹಂತದಲ್ಲಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗಿದೆ. 158 ಜನ ಪಾಸಿಟಿವ್ ಬಂದಿದೆ. ಮಾರಾಟಗಾರರು ಹಾಗೂ ಖರೀದಿರರನ್ನು ವಿಚಾರಣೆಗೊಳಗಪಡಿಸಿದಾಗ ಹೆಚ್ಚಿನ‌ ಪ್ರಮಾಣದಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾದಿಂದ ಸರಬರಾಜಾಗುತ್ತಿರುವುದು ತನಿಖೆ ವೇಳೆ ಬಯಲಾಗಿದೆ. ಹೆಚ್ಚಿನ ಪ್ರಮಾಣದ ಗಾಂಜಾ ಹಾಗೂ ಡ್ರಗ್ಸ್​ ಇಲ್ಲಿಯವರೆಗೂ ವಶಪಡಿಸಿಕೊಂಡಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಪೊಲೀಸರು.

ಡ್ರಗ್ಸ್ ಮುಕ್ತ ನಗರ:ಹುಬ್ಬಳ್ಳಿಯಲ್ಲಿಅವ್ಯಾಹತವಾಗಿ ನಡೆಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ‌ ಹಾಕಲು ಇಲಾಖೆ ಸನ್ನದ್ದವಾಗಿದೆ. ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯನ್ನು ಡ್ರಗ್ಸ್ ಮುಕ್ತ ನಗರನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ. ಹೀಗಾಗಿ ಧಾರ್ಮಿಕ ಸ್ಥಳ, ಶಾಲಾ‌ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ‌ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ವಿರುದ್ಧ ಹು-ಧಾ ಪೊಲೀಸರ ಸ್ಪೆಷಲ್​ ಡ್ರೈವ್: 79 ವಿದ್ಯಾರ್ಥಿಗಳು ವಶಕ್ಕೆ

ABOUT THE AUTHOR

...view details