ಕರ್ನಾಟಕ

karnataka

ETV Bharat / state

ಹೆಚ್​ಡಿಕೆ ಸರ್ವನಾಶ ಮಾಡೋದಕ್ಕೇ ನೋಡ್ತಿದ್ದಾರೆ, ’ಮಲಗಿದ್ರು- ಎದ್ರೂ’ ಅದನ್ನೇ ಬಯಸುತ್ತಾರೆ: ಡಿ.ಕೆ. ಶಿವಕುಮಾರ್​ - D K Shivakumar reaction on HDK - D K SHIVAKUMAR REACTION ON HDK

ನಮಗೆ ಕುಮಾರಸ್ವಾಮಿ ಅವರ ನಡೆ, ಆಚಾರ, ವಿಚಾರ ಎಲ್ಲ‌ವೂ ಗೊತ್ತಿದೆ. ಹೆಚ್​ಡಿಕೆ ಸರ್ವನಾಶ ಮಾಡೋಕೆ ಕಾಯ್ತಿದ್ದಾರೆ. ಅವರು ಮಲಗಿದರೂ- ಎದ್ರೂ ಅದನ್ನೇ ಬಯಸ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಟೀಕಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್​
ಡಿಸಿಎಂ ಡಿ.ಕೆ. ಶಿವಕುಮಾರ್​ (ETV Bharat)

By ETV Bharat Karnataka Team

Published : Jul 27, 2024, 4:26 PM IST

Updated : Jul 27, 2024, 6:58 PM IST

ಡಿ.ಕೆ. ಶಿವಕುಮಾರ್​ (ETV Bharat)

ಬೆಂಗಳೂರು:ಕುಮಾರಸ್ವಾಮಿ ಸರ್ವನಾಶ ಮಾಡೋಕೆ ಬಯಸ್ತಿದ್ದಾರೆ. ಅವರು ಮಲಗಿದ್ರೂ ಎದ್ರೂ ಅದನ್ನೇ ಬಯಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮಗೆ ಅವರ ಬಗ್ಗೆ ಎಲ್ಲವೂ ಗೊತ್ತಿದೆ. ಅವರ ನಡೆ, ಆಚಾರ ವಿಚಾರ ಎಲ್ಲ‌ವೂ ಗೊತ್ತಿದೆ. ರಾಮನಗರ ಅಕ್ರಮ ಮಾಡೋಕೆ ಬಂದಿದ್ದಾರೆ. ರಾಮನಗರ ನಮ್ಮ‌ ಜಿಲ್ಲೆ. ಚನ್ನಪಟ್ಟಣ, ರಾಮನಗರ, ಕನಕಪುರ ಎಲ್ಲ ಒಂದೇ. ನಾವು ಬೆಂಗಳೂರಿಗರು. ದೇವೇಗೌಡರು ಬಂದಿದ್ದು ಬೆಂಗಳೂರು ಜಿಲ್ಲೆಗೆ. ರಾಮಕೃಷ್ಣ ಹೆಗಡೆ ಬಂದಿದ್ದೂ ಬೆಂಗಳೂರು ಜಿಲ್ಲೆಗೆ. ಕುಮಾರಸ್ವಾಮಿ ಬಂದಿದ್ದು ಬೆಂಗಳೂರು ಜಿಲ್ಲೆಗೆ. ನಮ್ಮ ಪೂರ್ವಜರು ಇಟ್ಟ ಹೆಸರು ಬೆಂಗಳೂರು. ನಾವು ಅದನ್ನು ಯಾಕೆ ಕಳೆದುಕೊಳ್ಳಬೇಕು. ಹೆಡ್ ಕ್ವಾಟರ್ಸ್ ರಾಮನಗರದಲ್ಲೇ ಇರುತ್ತೆ. ಅಭಿವೃದ್ಧಿ ದೃಷ್ಟಿಯಿಂದ ಮಾಡ್ತೇವೆ ಎಂದರು.

ಅದು ಅವರ ಹಣೆಯಲ್ಲೂ ಬರೆದಿಲ್ಲ:2028ಕ್ಕೆ ನಾವು ಹೆಸರು ಚೇಂಜ್ ಮಾಡ್ತೇವೆಂಬ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಹಣೆಯಲ್ಲೂ‌ ಅದು ಬರೆದಿಲ್ಲ. 2028ಕ್ಕೂ‌ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ. ಬೇಕಾದರೆ ನೀವು‌ ಬರೆದುಕೊಳ್ಳಿ ಇದನ್ನು ಎಂದು ಹೇಳಿದರು.

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ಅವ್ಯವಹಾರ ನಡೆದಿರುವುದು ಸತ್ಯ: ಸಚಿವ ರಾಜಣ್ಣ - Valmiki Corporation Case

Last Updated : Jul 27, 2024, 6:58 PM IST

ABOUT THE AUTHOR

...view details