ಕರ್ನಾಟಕ

karnataka

ETV Bharat / state

ಬೆಂಗಳೂರು: ಡ್ರೈವಿಂಗ್ ಕಲಿಸುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ, ಟ್ರೈನರ್ ಬಂಧನ - Car Driving School

ಡ್ರೈವಿಂಗ್ ಕಲಿಸುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಟ್ರೈನರ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

By ETV Bharat Karnataka Team

Published : Jul 20, 2024, 1:43 PM IST

TRAINER ARREST  DRIVING CLASS  MISBEHAVIOR WITH YOUNG WOMAN  BENGALURU
ಡ್ರೈವಿಂಗ್ ಕಲಿಸುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ, ಟ್ರೈನರ್ ಬಂಧನ (ETV Bharat)

ಬೆಂಗಳೂರು : ಕಾರು ಚಾಲನೆ ಕಲಿಸುವ ನೆಪದಲ್ಲಿ ಯುವತಿಗೆ ಕಿರುಕುಳ ನೀಡಲು ಯತ್ನಿಸಿದ ತರಬೇತುದಾರನನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 18 ವರ್ಷದ ಯುವತಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದಡಿ ಅಣ್ಣಪ್ಪ ಎಂಬಾತನನ್ನ ಬಂಧಿಸಲಾಗಿದೆ.

ದೂರುದಾರ ಯುವತಿ ಆರೋಪಿಯ ಡ್ರೈವಿಂಗ್ ಸ್ಕೂಲ್‌ನಲ್ಲಿ ತರಬೇತಿ ಮುಗಿಸಿದ್ದಳು. ಬಳಿಕ ನಿಮ್ಮದೇ ಸ್ವಂತ ಕಾರಿನಲ್ಲಿ ವಿಶೇಷ ತರಬೇತಿ ನೀಡುವುದಾಗಿ ಹೇಳಿದ್ದ ಆರೋಪಿ, 15 ದಿನಗಳಿಗೆ 10,500 ರೂ ಶುಲ್ಕವನ್ನೂ ಪಡೆದಿದ್ದ. ಜುಲೈ 7ರಂದು ಬೆಳಗ್ಗೆ ಯುವತಿಗೆ ತರಬೇತಿ ನೀಡುತ್ತಿದ್ದ ಆರೋಪಿ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್ ಬಳಿ ಬಂದಾಗ ತನ್ನ ಖಾಸಗಿ ಅಂಗ ಪ್ರದರ್ಶಿಸಲಾರಂಭಿಸಿದ್ದಾನೆ. ಗಾಬರಿಗೊಳಗಾದ ಯುವತಿ ತಕ್ಷಣ ಕಾರನ್ನ ತನ್ನ ಮನೆಯತ್ತ ಚಲಾಯಿಸಿದ್ದಳು‌.

ಬಳಿಕ ಆರೋಪಿಯ ವಿರುದ್ಧ ಬಸವೇಶ್ವರ ನಗರ ಠಾಣೆಗೆ ಯುವತಿ ದೂರು ನೀಡಿದ್ದಳು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ‌‌. ಈ ಪ್ರಕರಣ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ:ಮಗಳ ಮೇಲೆ ಅಪ್ಪ-ದೊಡ್ಡಪ್ಪರಿಂದ ಅತ್ಯಾಚಾರ: ಅಣ್ಣ-ತಮ್ಮಂದಿರಿಗೆ ಸಾಯುವ ತನಕ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​ - Life Imprisonment

ABOUT THE AUTHOR

...view details