IRCTC Uttarakhand Tour: ಜನರು ಆಧ್ಯಾತ್ಮಿಕ ಕೇಂದ್ರಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲು ಬಯಸುವುದು ಸಾಮಾನ್ಯ. ಇದೀಗ ಅಂತಹವರಿಗೆ ವಿಶೇಷ ಪ್ಯಾಕೇಜ್ ಒದಗಿಸಲು IRCTC ಮುಂದಾಗಿದೆ. ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡದ ಆಧ್ಯಾತ್ಮಿಕ ತಾಣಗಳು ಮತ್ತು ಅತ್ಯುತ್ತಮ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಅದ್ಭುತ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಈ ಪ್ಯಾಕೇಜ್ ಅನ್ನು 'ದೇವಭೂಮಿ ಉತ್ತರಾಖಂಡ ಯಾತ್ರಾ' ಎಂಬ ಹೆಸರಿನಲ್ಲಿ ತಂದಿದೆ. ಈ ಪ್ರವಾಸದ ಒಟ್ಟು ಅವಧಿ 10 ರಾತ್ರಿಗಳು ಮತ್ತು 11 ದಿನಗಳು. ಈ ಪ್ಯಾಕೇಜ್ ಅನ್ನು ಹೈದರಾಬಾದ್‌ನಿಂದ (ಸಿಕಂದರಾಬಾದ್ ರೈಲು ನಿಲ್ದಾಣ) ರೈಲು ಪ್ರಯಾಣದ ಮೂಲಕ ನಿರ್ವಹಿಸಲಾಗುತ್ತದೆ. ಉತ್ತರಾಖಂಡ ಯಾತ್ರೆ ಭಾರತ್ ಗೌರವ್ ಮಾನಸ್ ಖಂಡ್ ಎಕ್ಸ್‌ಪ್ರೆಸ್‌ನಿಂದ ನಡೆಯಲಿದೆ.
ಪ್ರಯಾಣದ ವಿವರ:
- 1ನೇ ದಿನ: ಸಂಜೆ 4 ಗಂಟೆಗೆ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಪ್ರಯಾಣ ಆರಂಭ.
- 2ನೇ ದಿನ: ಸಂಪೂರ್ಣ ಪ್ರಯಾಣ.
- 3ನೇ ದಿನ: ಬೆಳಗ್ಗೆ, ಕತ್ಗೊಡಮ್ ರೈಲು ನಿಲ್ದಾಣ ತಲುಪಿ, ಅಲ್ಲಿ ರೈಲಿನಿಂದ ಇಳಿದು ಭೀಮತಾಳಕ್ಕೆ ಹೋಗಿ, ಹೋಟೆಲ್‌ನಲ್ಲಿ ಉಳಿಯಬೇಕಾಗುತ್ತದೆ. ಸಂಜೆ ಭೀಮತಾಳ ಕೆರೆಗೆ ಭೇಟಿ. ಅದೇ ಹೋಟೆಲ್‌ನಲ್ಲಿ ರಾತ್ರಿ ವಾಸ.
- 4ನೇ ದಿನ: ಬೆಳಗ್ಗೆ ಹೊಟೇಲ್ನಲ್ಲಿ ತಿಂಡಿ ಮುಗಿಸಿ ನೈನಿತಾಲ್ ನೋಡುವುದು. ನೈನಾದೇವಿ ದೇವಸ್ಥಾನಕ್ಕೆ ಭೇಟಿ. ಇಲ್ಲಿ ಬೋಟಿಂಗ್ ಮತ್ತು ಶಾಪಿಂಗ್‌ಗೆ ಹೋಗಬಹುದು. ಅಲ್ಲಿಂದ ಮರಳಿ ಭೀಮತಾಳಕ್ಕೆ ತೆರಳುವುದು. ಆ ದಿನ ಹೋಟೆಲ್‌ನಲ್ಲಿ ತಂಗುವುದು.
- 5ನೇ ದಿನ: ಬೆಳಗಿನ ಉಪಹಾರದ ನಂತರ, ಹೋಟೆಲ್‌ನಿಂದ ಹೊರಡುವುದು. ಅಲ್ಮೋರಾಕ್ಕೆ ತೆರಳುವುದು. ಅಲ್ಮೋರಾದ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ, ಕಾಸರ್ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವುದು. ರಾತ್ರಿ ಹೋಟೆಲ್‌ನಲ್ಲಿ ತಂಗುವುದು.
- 6ನೇ ದಿನ: ಬೆಳಗಿನ ಉಪಹಾರದ ನಂತರ, ನಂದಾ ದೇವಿ ದೇವಸ್ಥಾನ ಮತ್ತು ಜಾಗೇಶ್ವರ ದೇವಸ್ಥಾನಕ್ಕೆ ಭೇಟಿ. ಗೋಲು ಚಿಟೈ ದೇವಸ್ಥಾನಕ್ಕೂ ಭೇಟಿ. ನಂತರ ಅಲ್ಮೋರಾದ ಹೋಟೆಲ್‌ನಲ್ಲಿ ಉಳಿದುಕೊಳ್ಳವುದು.
- 7ನೇ ದಿನ: ಉಪಹಾರದ ನಂತರ ಕತರ್ಮಲ್ ಸೂರ್ಯ ದೇವಾಲಯಕ್ಕೆ ಭೇಟಿ. ಅಲ್ಲಿಂದ ಕೌಸಾನಿ ತಲುಪಿ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಬೇಕಾಗುತ್ತದೆ.
- 8ನೇ ದಿನ: ಬೈಜನಾಥಕ್ಕೆ ಹೋಗಿ ಬೈಜನಾಥ ದೇವಸ್ಥಾನಕ್ಕೆ ಭೇಟಿ. ಬಾಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡವುದು. ಕೌಸಾನಿಯಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ತಂಗುವುದು.
- 9ನೇ ದಿನ: ಬೆಳಗಿನ ಉಪಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಮತ್ತು ರಾನಿಖೇತ್‌ಗೆ ಹೋಗಿ, ಅಲ್ಲಿಂದ ಕತ್ಗೊಡಂ ರೈಲು ನಿಲ್ದಾಣಕ್ಕೆ ಹಿಂತಿರುಗಿ ಪ್ರಯಾಣಿಸುವುದು.
- 10ನೇ ದಿನ: ಇಡೀ ದಿನ ರೈಲು ಪ್ರಯಾಣ.
11ನೇ ದಿನ: ಹೈದರಾಬಾದ್ ತಲುಪಿದ ಮೇಲೆ ಪ್ರವಾಸ ಕೊನೆಗೊಳ್ಳುತ್ತದೆ.
ಬೆಲೆ ವಿವರ:
- ಡಿಲಕ್ಸ್ ಕ್ಲಾಸ್: ವಯಸ್ಕರಿಗೆ ₹46,945, ಮಕ್ಕಳಿಗೆ ((5 ರಿಂದ 11 ವರ್ಷ) ₹46,945.
- ಸ್ಟ್ಯಾಂಡರ್ಡ್ ಕ್ಲಾಸ್: ವಯಸ್ಕರಿಗೆ ₹37,220, ಮಕ್ಕಳಿಗೆ (5 ರಿಂದ 11 ವರ್ಷ) 37,220.
- ಪ್ರಸ್ತುತ ಈ ಪ್ಯಾಕೇಜ್ ನವೆಂಬರ್ 3 (03-11-2024) ರಂದು ಲಭ್ಯ.
- ಈ ಪ್ರವಾಸ ಮತ್ತು ಪ್ಯಾಕೇಜ್ ಬುಕ್ಕಿಂಗ್‌ನ ಸಂಪೂರ್ಣ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ಸಂಪರ್ಕಿಸಬಹುದು: https://www.irctctourism.com/pacakage_description?packageCode=SCZUBG15