ಕರ್ನಾಟಕ

karnataka

ETV Bharat / sports

ಮಹಿಳಾ ಟಿ20 ವಿಶ್ವಕಪ್​: ಹೀಗಾದ್ರೆ ಮಾತ್ರ ಟೀಮ್​ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಬಹುದು; ಇಲ್ಲಾಂದ್ರೆ ಕಹಾನಿ ಖತಂ! - Team India Semi Final Scenario

ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ ತಲುಪುಬೇಕಾದರೆ ಎಷ್ಟು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು ಮತ್ತು ಹೇಗಿದೆ ಸೆಮಿಸ್​ ಲೆಕ್ಕಾಚಾರ ಎಂದು ಈ ಕೆಳಗೆ ತಿಳಿಯಿರಿ.

By ETV Bharat Sports Team

Published : 5 hours ago

ಭಾರತ ಮಹಿಳಾ ತಂಡ
ಭಾರತ ಮಹಿಳಾ ತಂಡ (AP)

ಹೈದರಾಬಾದ್​: ಮಹಿಳಾ ಟಿ20 ವಿಶ್ವಕಪ್‌ನ 7ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸುವ ಮೂಲಕ ಟೀಮ್​ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನೊಂದಿಗೆ ಸೆಮಿಸ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದ್ರೆ ಭಾರತದ ವನಿತೆಯರ ಸೆಮಿಸ್​ ಹಾದಿ ಸುಲಭವಾಗಿಲ್ಲ. ಏಕೆಂದರೇ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 58 ರನ್ ಗಳಿಂದ ಹೀನಾಯ ಸೋಲನ್ನು ಕಂಡಿದ್ದ ಟೀಮ್​ ಇಂಡಿಯಾ ರನ್ ರೇಟ್​ನಲ್ಲೂ ಹಿನ್ನಡೆ ಅನುಭವಿಸಿತ್ತು.

ಇದೀಗ ಪಾಕ್​ ವಿರುದ್ಧ 6 ವಿಕೆಟ್‌ಗಳ ಜಯ ದಾಖಲಿ ರನ್​ರೇಟ್​​ನಲ್ಲಿ ಕೊಂಚ ಸುಧಾರಿಸಿ​ದರೂ ಇದು ಸೆಮಿಸ್​ಗೆ ಪ್ರವೇಶಿಸಲು ಸಾಕಾಗುವುದಿಲ್ಲ. ಹಾಗಾದ್ರೆ ಟೀಮ್​ ಇಂಡಿಯಾ ಸೆಮಿಸ್​ಗೆ ಪ್ರವೇಶಿಸಲು ಮುಂದಿನ ಪಂದ್ಯಗಳನ್ನು ಎಷ್ಟು ಅಂತರದಿಂದ ಗೆಲ್ಲಬೇಕು ಮತ್ತು ಎಷ್ಟು ಪಂದ್ಯಗಳು ಉಳಿದಿವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸೆಮಿಸ್​ ಲೆಕ್ಕಾಚಾರ: ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದರೂ ಭಾರತದ ನಿವ್ವಳ ರನ್ ರೇಟ್ ಅಷ್ಟಾಗಿ ಸುಧಾರಿಸಲಿಲ್ಲ. ಪಾಯಿಂಟ್ ಪಟ್ಟಿಯಲ್ಲಿ ಭಾರತವು ಪಾಕ್​ಗಿಂತಲೂ ಕೆಳಗಿದೆ. ಎ ಗುಂಪಿನಲ್ಲಿ ನ್ಯೂಜಿಲೆಂಡ್ (+2.900), ಆಸ್ಟ್ರೇಲಿಯಾ (+1.908) ಮತ್ತು ಪಾಕಿಸ್ತಾನ (+0.555) ತಲಾ 2 ಅಂಕಗಳನ್ನು ಹೊಂದಿವೆ. ಭಾರತದ ಖಾತೆಗೂ 2 ಅಂಕ ಸೇರ್ಪಡೆಯಾಗಿದೆ. ಆದರೆ, ನೆಟ್ ರನ್ ರೇಟ್​ನಲ್ಲಿ ಟೀಂ ಇಂಡಿಯಾ ಎಲ್ಲಾ ಮೂರು ತಂಡಗಳಿಗಿಂತ ಹಿಂದಿದೆ.

ಎ ಮತ್ತು ಬಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸದ್ಯ ಭಾರತ ಎ ತಂಡದಲ್ಲಿದ್ದು ಗ್ರೂಪ್ ಹಂತದಲ್ಲಿ ಎರಡು ಪಂದ್ಯಗಳು ಬಾಕಿಯಿವೆ. ಸೆಮಿಫೈನಲ್ ತಲುಪಲು ಆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಮುಂದಿನ ಪಂದ್ಯಗಳಲ್ಲಿ ಭಾರತ ತಂಡ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಭಾರತ ಭಾರಿ ಅಂತರದಿಂದ ಗೆಲುವು ಸಾಧಿಸಬೇಕು. ಆದರೆ ಆಸೀಸ್ ಬಲಿಷ್ಠ ತಂಡವಾಗಿರುವ ಕಾರಣ ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ರನ್ ರೇಟ್ ಸುಧಾರಿಸಿಕೊಳ್ಳಬೇಕಿದೆ.

ಮುಂದಿನ ಎರಡು ಪಂದ್ಯಗಳಲ್ಲಿ ಒಂದರಲ್ಲೂ ಸೋತರು ಸೆಮಿಸ್​ ಬಾಗಿಲು ಬಹುತೇಕ ಮುಚ್ಚಿಕೊಳ್ಳಲಿವೆ. ಒಂದು ವೇಳೆ ಹೀಗಾದಾರೆ ನ್ಯೂಜಿಲೆಂಡ್‌ ತನ್ನ ಮುಂದಿನ ಎರಡು ಮತ್ತು ಪಾಕಿಸ್ತಾನ ಒಂದು ಪಂದ್ಯದಲ್ಲಿ ಸೋಲನುಭವಿಸಬೇಕು ಆಗ ಭಾರತ ಸೆಮಿಸ್​ ಪ್ರವೇಶಿಸುವ ಸಾಧ್ಯತೆ ಇರಲಿದೆ. ಹಾಗಾಗಿ ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ರನ್ ರೇಟ್ ಸುಧಾರಿಸಲು ಇದೊಂದು ಉತ್ತಮ ಅವಕಾಶವಾಗಿದೆ.

ಗ್ರೂಪ್​ ಎ ಅಂಕಪಟ್ಟಿ

ತಂಡ ಅಂಕ ರನ್​ರೇಟ್​
ನ್ಯೂಜಿಲೆಂಡ್​ 2 +2.900
ಆಸ್ಟ್ರೇಲಿಯಾ 2 +1.908
ಪಾಕಿಸ್ತಾನ 2 +0.555
ಭಾರತ 2 -1.217
ಶ್ರೀಲಂಕಾ 0 -1.667

ಇದನ್ನೂ ಓದಿ:ಶ್ರೀಲಂಕಾ ತಂಡದ ಮುಖ್ಯಕೋಚ್​ ಆಗಿ ಸನತ್​ ಜಯಸೂರ್ಯ ನೇಮಕ - Sanath Jayasuriya

ABOUT THE AUTHOR

...view details