ಬನ್ನೇರುಘಟ್ಟದಲ್ಲಿ ಸಫಾರಿ ಬಸ್​ ಹತ್ತಿ ಕಿಟಕಿಯೊಳಗೆ ಇಣುಕಿ ನೋಡಿದ ಚಿರತೆ: ವಿಡಿಯೋ - LEOPARD

🎬 Watch Now: Feature Video

thumbnail

By ETV Bharat Karnataka Team

Published : Oct 7, 2024, 8:19 PM IST

ಆನೇಕಲ್(ಬೆಂಗಳೂರು): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವೇಳೆ ಕೆಎಸ್​ಟಿಡಿಸಿ ಬಸ್ ಮೇಲೆ ಹತ್ತಿದ ಚಿರತೆಯೊಂದು ಕಿಟಕಿಯೊಳಗೆ ಇಣುಕಿ ನೋಡಿದೆ. ಮತ್ತೊಂದು ಬಸ್​ನಲ್ಲಿದ್ದ ಪ್ರಾಣಿ ವೀಕ್ಷಕರೊಬ್ಬರು ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಈ ಕುರಿತು ಬನ್ನೇರುಘಟ್ಟ ಮೃಗಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, "ಇದು ಸಹಜ. ಈವರೆಗೆ ಯಾವುದೇ ಅನಾಹುತ ನಡೆದಿಲ್ಲ. ಚಿರತೆ ತುಂಬಾ ನಾಚಿಕೆ ಸ್ವಭಾವದ್ದು" ಎಂದು ತಿಳಿಸಿದರು.

ಕ.ವಿ.ವಿ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಕರ್ನಾಟಕ ವಿಶ್ವವಿದ್ಯಾಲಯದ (ಕೆ.ವಿ.ವಿ.) ಕ್ಯಾಂಪಸ್​ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗೆ (ಸೆ-29-24) ಮುಂದಾಗಿತ್ತು. ಕಳೆದ ಕೆಲವು ದಿನಗಳಿಂದ ಓಡಾಡುತ್ತಿದ್ದ ಚಿರತೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಚಿರತೆ ಹಿಡಿಯುವ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿ.ವಿ.ಯ ಅಮರ್ ಜವಾನ್ ವೃತ್ತದಿಂದ ಗ್ರಂಥಾಲಯ ಮಾರ್ಗವಾಗಿ ಮಲಪ್ರಭಾ ವಸತಿ ನಿಲಯದವರೆಗೆ ಸಂಚಾರ ನಿಷೇಧಿಸಲಾಗಿತ್ತು. ಹಾಸ್ಟೆಲ್ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸ್ಥಳೀಯರು ಈ ರಸ್ತೆಯಲ್ಲಿ ನಿಗದಿತ ಸಮಯದಲ್ಲಿ ಓಡಾಡದಂತೆ ಕ.ವಿ.ವಿ. ಪ್ರಕಟಣೆ ಹೊರಡಿಸಿತ್ತು.

ಇದನ್ನೂ ಓದಿ: ಕವಿವಿ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.